ಪದವೀಧರರೇ ಮತದಾನದಿಂದ ದೂರ!

Contributed by: manjunath.lokanath@timesofindia.com|Vijaya Karnataka•
graduates disappointed in voting only 40 of voters participated
ಕಿಕ್ಕರ್ : ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ | ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳಲ್ಲಿಮತದಾನ | ಶೇ.40ರಷ್ಟು ಮತದಾರರು ಹಕ್ಕು ಚಲಾವಣೆ

----
ಪದವೀಧರರೇ ಮತದಾನದಿಂದ ದೂರ!

ವಿಕ ಸುದ್ದಿಲೋಕ ದಾವಣಗೆರೆ

ಎಸ್ ಐಆರ್ ಮೂಲಕ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿಪ್ರತಿಭಟನೆ ನಡೆದು, ಅದು ವಿದೇಶಗಳಲ್ಲೂಸದ್ದು ಮಾಡುತ್ತಿದೆ. ಆದರೆ ಮತದಾನದ ಹಕ್ಕು ಹೊಂದಿದ್ದು, ಅದರ ಮಹತ್ವವ ಸಾರಬೇಕಾದ ಶೇ.40 ರಷ್ಟು ವಿದ್ಯಾವಂತ ಪದವೀಧರ ಮತದಾರರೇ ಮತದಾನದಿಂದ ದೂರ ಉಳಿದಿದ್ದಾರೆ.

ಇದು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನದ ಚಿತ್ರಣ. ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಈ ಮೂರು ತಾಲೂಕುಗಳು ಕ್ಷೇತ್ರ ವ್ಯಾಪ್ತಿಯಲ್ಲಿದ್ದು, 31,616 ಪದವೀಧರ ಮತದಾರರಿದ್ದಾರೆ. ಇದರಲ್ಲಿ17,660 ಪುರುಷ, 13,956 ಮಹಿಳಾ ಮತದಾರರಿದ್ದು, ಇವರಲ್ಲಿಶೇ.60 ರಷ್ಟು ಜನರು ಮಾತ್ರ ಮತ ಹಕ್ಕು ಚಲಾಯಿಸಿದ್ದರೆ, ಇನ್ನು ಶೇ.40 ರಷ್ಟು ಮಂದಿ ಮತಗಟ್ಟೆ ಕಡೆಯೇ ಸುಳಿದಿಲ್ಲ.

ಬೆಳಗ್ಗೆಯಿಂದಲೂ ನೀರಸ:

ಮತಗಟ್ಟೆಗಳ ಮುಂದೆ ಜನ ಜಂಗುಳಿ ಮಾತ್ರ ಜೋರಿತ್ತು. ಆದರೆ, ಮತಗಟ್ಟೆಗಳು ಆ ಮಟ್ಟದ ರಶ್ ಇರಲಿಲ್ಲ. ಬೆಳಗ್ಗೆ 8 ಗಂಟೆಗೆ ಮತದಾನ ಶುರುವಾಯಿತು. ಬೆಳಗ್ಗೆ 10 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿಕೇವಲ 2,243 ಮಂದಿ ಮಾತ್ರ ಹಕ್ಕು ಚಲಾಯಿಸಿ ಶೇ.7.09ರಷ್ಟು ಮಾತ್ರ ಮತದಾನ ಆಗಿತ್ತು. ಮಧ್ಯಾಹ್ನ 12 ಗಂಟೆ ಹೊತ್ತಿಗೆ 7,670 ಮಂದಿ ಮತ ಚಲಾಯಿಸಿ ಶೇ.24.26 ಮತದಾನವಾಗಿತು. ಮೊದಲ 2 ಗಂಟೆಗೆ ಹೋಲಿಸಿದರೆ ಮಧ್ಯಾಹ್ನದ 2 ಗಂಟೆ ಅವಧಿಯಲ್ಲಿಕೊಂಚ ಮತದಾನ ಚುರುಕಾಗಿತ್ತು.

ಮಧ್ಯಾಹ್ನ 2 ಗಂಟೆ ಹೊತ್ತಿಗೆ 14,945 ಮತದಾರರು ಹಕ್ಕು ಚಲಾಯಿಸಿ ಶೇ.47.27ರಷ್ಟು ಮತದಾನ ಆಗಿತ್ತು. ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಿದ್ದು, ಕೊನೆಯ 2 ಗಂಟೆ ಅವಧಿಯಲ್ಲಿಶೇ.23ರಷ್ಟು ಮತದಾನವಾಗಿ ಒಟ್ಟು 31,616 ಮತದಾರರಲ್ಲಿಶೇ.60ರಷ್ಟು ಜನರು ಮಾತ್ರ ಮತದಾನ ಮಾಡಿದರೆ, ಉಳಿದವರು ಮತಗಟ್ಟೆ ಕಡೆಗೆ ಸುಳಿಯಲೇ ಇಲ್ಲ.

ಶಿಕ್ಷಕರು, ಎಂಜಿನಿಯರ್ , ಡಾಕ್ಟರ್ :

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿಪದವಿ ಮುಗಿಸಿ ನಾನಾ ಸರಕಾರಿ ಹುದ್ದೆಯಲ್ಲಿಕರ್ತವ್ಯ ನಿರ್ವಹಿಸುವ ಶಿಕ್ಷಕರು, ಎಂಜಿನಿಯರ್ , ಡಾಕ್ಟರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಖಾಸಗಿ ಕಂಪನಿಗಳ ಉದ್ಯೋಗಿಗಳು ಇದ್ದಾರೆ. ಎಲ್ಲರಿಗೂ ಮತ ಚಲಾಯಿಸಲು ತೊಂದರೆ ಆಗಬಾರದೆಂದು ಸರಕಾರಿ ರಜೆ ನೀಡಲಾಗಿತ್ತು. ಖಾಸಗಿ ಶಾಲೆಗಳು ಎಂದಿನಂತೆ ನಡೆದವು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿಈ ಬಾರಿ 70 ಸಾವಿರ ಅಧಿಕ ಮತದಾರರು ಹೆಚ್ಚಾಗಿ ಒಟ್ಟು 1,83,893 ಮತದಾರರಿದ್ದಾರೆ. ನೆರೆಯ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ವ್ಯಾಪ್ತಿಯನ್ನು ಕ್ಷೇತ್ರ ಒಳಗೊಂಡಿದೆ.

------

ಬಾಕ್ಸ್ ...

ಪ್ರತಿ ಮತವೂ ಅಮೂಲ್ಯ: ಎಸ್ ಎಸ್ ಎಂ

ಮತ ಚಲಾಯಿಸಿದ ನಂತರ ಮಾತನಾಡಿದ ಜಿಲ್ಲಾಉಸ್ತುವಾರಿ ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ್ , ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮತದಾನಕ್ಕೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ಅರ್ಹ ಮತದಾರರೂ ತಮ್ಮ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವುದು ಅಗತ್ಯವಾಗಿದೆ. ಉತ್ತಮ ಆಡಳಿತ, ಸಮರ್ಥ ನಾಯಕತ್ವ ಹಾಗೂ ಜನಪರ ಅಭಿವೃದ್ಧಿಗೆ ಮತದಾನವೇ ಪ್ರಮುಖ ಅಡಿಪಾಯವಾಗಿದೆ’ ಎಂದು ಅಭಿಪ್ರಾಯಪಟ್ಟರು. ‘ಪದವೀಧರರ ಕ್ಷೇತ್ರದ ಚುನಾವಣೆಗಳು ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ, ಕೌಶಲಾಭಿವೃದ್ಧಿ ಹಾಗೂ ಯುವಜನರ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿವೆ. ಪದವೀಧರರ ಸಮಸ್ಯೆಗಳು ಮತ್ತು ಆಶೋತ್ತರಗಳಿಗೆ ವಿಧಾನ ಪರಿಷತ್ತಿನಲ್ಲಿಸೂಕ್ತ ಧ್ವನಿ ದೊರೆಯಬೇಕಾದರೆ ಸಮರ್ಥ ಜನಪ್ರತಿನಿಧಿಗಳ ಆಯ್ಕೆ ಅಗತ್ಯವಾಗಿದೆ’ ಎಂದು ತಿಳಿಸಿದರು.

-----

ಪ್ರತಿ ಮತದಾರರಲ್ಲೂಮನವಿ

‘ಬೂತ್ ಮಟ್ಟದಲ್ಲಿಕಾರ್ಯಕರ್ತರ ತಂಡ ರಚಿಸಿ ಯೋಜಿತ ರೀತಿಯಲ್ಲಿಪ್ರಚಾರ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲೂಮತದಾರರ ಪಟ್ಟಿಯನ್ನು ಸಿದ್ಧ ಪಡಿಸಿಕೊಂಡು ಮತದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮತದಾನದಲ್ಲಿಭಾಗವಹಿಸುವಂತೆ ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿಕಾಂಗ್ರೆಸ್ ಗೆಲುವು ನಿಶ್ಚಿತ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮತದಾನದ ನಂತರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

----

ಕೆಲ ಮತಗಟ್ಟೆಯಲ್ಲಿಉತ್ತಮ ಮತದಾನ

ದಾವಣಗೆರೆ ಗುಂಡಿ ಚೌಲ್ಟಿ್ರ ಸೇರಿ ಮತಗಟ್ಟೆ 6ರಲ್ಲಿಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೇ.63, 37 ಮತಗಟ್ಟೆಯಲ್ಲಿಶೇ.65.08, ಮತದಾನ ಆಗಿತ್ತು. ಮತಗಟ್ಟೆ 41ರಲ್ಲಿಶೇ.33, 7ರಲ್ಲಿಕೇವಲ ಶೇ.34.93, 8 ಮತ್ತು 9 ಮತಗಟ್ಟೆಯಲ್ಲಿಶೇ.38, 39 ರಷ್ಟು ಮಾತ್ರ ಮತದಾನವಾಗಿತ್ತು.

----

* ಚಿತ್ರ ಇದೆ.