ಪೌರಕಾರ್ಮಿಕರಿಗೆ ಗೌರವ ಸತ್ಕಾರ ನಾಳೆ

Contributed by: theriderakash@gmail.com|Vijaya Karnataka•
honor ceremony for civic workers successfully happening tomorrow
ಮುನವಳ್ಳಿ: ಪಟ್ಟಣದ ಶ್ರೀ ಕೈವಲ್ಯಾಶ್ರಮ ಸ್ವಾಮಿ ಮಠದ ಸಭಾಭವನದಲ್ಲಿಅ. 25ರಂದು ಬೆಳಗ್ಗೆ 10.30ಕ್ಕೆ ಬ್ರಾಹ್ಮಣ ಸಮಾಜದ ವತಿಯಿಂದ ಪೌರಕಾರ್ಮಿಕರಿಗೆ ಶ್ರಮ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸೋಮಶೇಖರ ಮಠದ ಮುರುNೕಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಂಸ್ಥೆ ಅಧ್ಯಕ್ಷ ವೆಂಕಟೇಶ ವೈದ್ಯ ಅಧ್ಯಕ್ಷತೆ ವಹಿಸುವರು. ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರವೀಂದ್ರ ಯಲಿಗಾರ, ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ, ಉಪಾಧ್ಯಕ್ಷ ಡಿ.ಡಿ. ಕಿನ್ನೂರಿ, ಪುರಸಭೆ ಮಾಜಿ ಅಧ್ಯಕ್ಷ ಸಿ.ಬಿ.ಬಾಳಿ, ವೀರೇಶ ಬ್ಯಾಹಟ್ಟಿ, ಅಪ್ಪು ಅಮಠೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ.ಎಂ. ತಿಮ್ಮಾಣಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ವಿನಾಯಕ ಲೇಲೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.