ರಬಕವಿ-ಬನಹಟ್ಟಿ: ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಧೈರ್ಯ, ದೇಶಾಭಿಮಾನ ಇಂದಿನ ಯುವಜನರಿಗೆ ಆದರ್ಶವಾಗಿದೆ,’’ಎಂದು ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಶ್ರೀಶೈಲ ದಲಾಲ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿಶುಕ್ರವಾರ ನಡೆದ ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ‘‘ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿರಾಣಿ ಚನ್ನಮ್ಮ ಪ್ರಮುಖ ಸ್ಥಾನ ಪಡೆದಿದ್ದಾರೆ. ಅವರ ತ್ಯಾಗ, ಹೋರಾಟದ ಮನೋಭಾವ ಮತ್ತು ಧೈರ್ಯವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ,’’ಎಂದರು.
ವಿದ್ಯಾಧರ ಸವದಿ, ಸಿದ್ದು ಕೊಣ್ಣೂರ, ಬಾಬಾಗೌಡ ಪಾಟೀಲ, ಮಹಾದೇವ ಕೋಟ್ಯಾಳ, ಮಹಾದೇವ ದೂಪದಾಳ, ಸಿದ್ದನಗೌಡ ಪಾಟೀಲ, ಡಾ. ಪ್ರಭು ಪಾಟೀಲ, ಸವಿತಾ ಹೊಸೂರ, ಗೌರಿ ಮಿಳ್ಳಿ, ರವಿ ದೇಸಾಯಿ, ಶಿರಸ್ತೇದಾರ್ ಆರ್ .ಎಸ್ . ಸಾತಿಹಾಳ, ಸದಾಶಿವ ಕುಂಬಾರ ಇದ್ದರು.
ಬಿಎನ್ ಟಿ 23-4
ರಬಕವಿ-ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.