ಶಿರಸಿಯಲ್ಲಿಸಂಸದ ಕಾಗೇರಿ ಮತದಾನ

Contributed by: keregaddemurthy@gmail.com|Vijaya Karnataka•
mp kageri votes confidence in winning sankanoor
ಸಂಕನೂರು ಗೆಲುವಿನ ವಿಶ್ವಾಸ

ವಿಕ ಸುದ್ದಿಲೋಕ ಶಿರಸಿ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಎನ್ ಡಿಎ ಅಭ್ಯರ್ಥಿ ಎಸ್ .ವಿ.ಸಂಕನೂರ ಗೆಲುವು ನಿಶ್ಚಿತ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶ್ರೀ ಮಾರಿಕಾಂಬಾ ಪ್ರೌಢಶಾಲಾ ಮತಗಟ್ಟೆಯಲ್ಲಿಮತದಾನ ಮಾಡಿದ ನಂತರ ಅವರು ಮಾತನಾಡಿದರು. ‘‘ಸಂಕನೂರ ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿದ್ದು ಗೆಲುವಿಗೆ ಕಾರಣವಾಗುತ್ತದೆ. ವಿಧಾನಪರಿಷತ್ ನಲ್ಲಿಪದವೀಧರರ, ನಿರುದ್ಯೋಗಿಗಳ, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿಗೌರವಯುತವಾಗಿ ಪ್ರತಿನಿಧಿಸಿದ್ದಾರೆ. ಜನರ ಒಡನಾಟದಲ್ಲಿದ್ದಾರೆ. ರಾಜ್ಯ ಸರಕಾರ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ನೋಡಿ ಪ್ರಜ್ಞಾವಂತ ಮತದಾರರು ಬೆಂಬಲ ನೀಡಲಿದ್ದಾರೆ. ಕಾಂಗ್ರೆಸ್ ಗೆ ಎಚ್ಚರಿಕೆಯ ಗಂಟೆಯಾಗಿ ಜನ ತೀರ್ಪು ನೀಡಲಿದ್ದಾರೆ,’’ ಎಂದರು. ಇದಕ್ಕೂ ಮೊದಲು ಮತಗಟ್ಟೆಗೆ ಆಗಮಿಸಿದ ಕಾಗೇರಿ ಸರತಿಯಲ್ಲಿನಿಂತು ಮತದಾನ ಮಾಡಿದರು.

*ಪೋಟೋ 23ಎಸ್ಸಾರೆಸ್ 4ಎ,ಬಿ

ಶಿರಸಿಯ ಮಾರಿಕಾಂಬಾ ಪ್ರೌಢಶಾಲಾ ಮತಗಟ್ಟೆಯಲ್ಲಿಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ ಮಾಡಿದರು.