ನದಿ ತಿರುವು, ಪಂಪ್ ್ಡ ಸ್ಟೋರೆಜ್ ಗೆ ಸಿಎಂ ಹಠ: ಸಂಸದ ಕಾಗೇರಿ ಆರೋಪ

Contributed by: keregaddemurthy@gmail.com|Vijaya Karnataka•
mp kageris allegations against cm dk shivakumar will the river projects survive
ನಿರಂತರ ಕೇಂದ್ರ ಸರಕಾರದ ಮೇಲೆ ಒತ್ತಡ

ವಿಕ ಸುದ್ದಿಲೋಕ ಶಿರಸಿ
ರಾಜ್ಯದ ಕಾಂಗ್ರೆಸ್ ಸರಕಾರ ಬೇಡ್ತಿ-ಅಘನಾಶಿನಿ ನದಿ ತಿರುವು ಹಾಗೂ ಶರಾವತಿ ಪಂಪ್ ್ಡ ಸ್ಟೋರೆಜ್ ಯೋಜನೆಗಳು ಆಗಬೇಕು ಎಂದು ಹಠ ತೊಟ್ಟಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಿರಂತರವಾಗಿ ದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ನಗರದ ಶ್ರೀ ಮಾರಿಕಾಂಬಾ ಪ್ರೌಢಶಾಲೆಯಲ್ಲಿಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಮಾಡಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

‘‘ಕೆಲವು ದಿನಗಳ ಹಿಂದೆ ಬೇಡ್ತಿ ನದಿ ತಿರುವಿಗೆ ಸಂಬಂಧಿಸಿ ಡಿಪಿಆರ್ ತ್ವರಿತಗತಿಯಲ್ಲಿಆಗಬೇಕು ಎಂದು ಕೇಂದ್ರದ ಮೇಲೆ ಸಿಎಂ ಒತ್ತಡ ತಂದರು. ಈಗ ಶರಾವತಿ ಪಂಪ್ ್ಡ ಸ್ಟೋರೆಜ್ ಗೆ ವೈಲ್ಡ್ ಲೈಫ್ ಅನುಮತಿ ತಕ್ಷಣ ಕೊಡಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಈ ಯೋಜನೆ ಅನುಷ್ಠಾನ ಮಾಡುವಲ್ಲಿರಾಜ್ಯದ ಕಾಂಗ್ರೆಸ್ ಸರಕಾರದ ಆಸಕ್ತಿ ಸ್ಪಷ್ಟವಾಗುತ್ತಿದೆ. ಜಿಲ್ಲೆಯ ಜನರ ಭಾವನೆ ಗೌರವಿಸದೇ, ವಿಜ್ಞಾನಿಗಳ ಸಭೆ, ಧಾರಣಾ ಸಾಮರ್ಥ್ಯ ಅಧ್ಯಯನ ಯಾವುದನ್ನೂ ಮಾಡದೆ ಹೇರಿಕೆ ಮಾಡುವುದು ಕಾಂಗ್ರೆಸ್ ಸರಕಾರ ತಂತ್ರವಾಗಿದೆ,’’ ಎಂದು ಆಪಾದಿಸಿದರು.

‘‘ಅನೇಕ ಯೋಜನೆಗಳಿಂದ ಜಿಲ್ಲೆಯ ಜನ ಸಂಕಷ್ಟಕ್ಕಿಡಾಗಿದ್ದಾರೆ. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೇ ಯಾವುದೇ ಯೋಜನೆಗೆ ಅನುಮತಿ ನೀಡಬಾರದು ಎಂದು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದೇವೆ. ಡಿಪಿಆರ್ ಗೆ ಅನುಮತಿ ಕೊಡಬೇಡಿ ಎಂದಿದ್ದೆವು. ಆದರೂ ಕೊಟ್ಟಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯನ್ನು ಅತ್ಯಂತ ನಿರ್ಲಕ್ಷತ್ರ್ಯ ಹಾಗೂ ಶೋಷಣೆಗೊಳಪಡಿಸುವ ರೀತಿಯಲ್ಲಿಆಡಳಿತ ನಡೆಸುತ್ತಿದೆ. ಜಿಲ್ಲೆಯ ಆದಾಯ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಜನರ ಕುಷ್ಟಸುಖಗಳಿಗೆ ಕಾಂಗ್ರೆಸ್ ಸರಕಾರ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಕಾಂಗ್ರೆಸ್ ನ ದ್ವಿಮುಖ ನೀತಿ ಜನ ಗಮನಿಸುತ್ತಿದ್ದಾರೆ,’’ ಎಂದರು.

ಕೇಂದ್ರಕ್ಕೆ ಅಪೇಕ್ಷೆಯಿಲ್ಲ:

‘‘ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆಯಂತೆ ಬೇಡ್ತಿ ಅಘನಾಶಿನಿ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ನಿಯೋಗದೊಂದಿಗೆ ಕೇಂದ್ರದ ಐವರು ಸಚಿವರನ್ನು ಭೇಟಿ ಮಾಡಿದ್ದೇವೆ. ರಾಜ್ಯ ಸರಕಾರದ ಆಸಕ್ತಿಯಿಂದ ನದಿ ತಿರುವು ಯೋಜನೆ ಚರ್ಚೆ ಮುಂದುವರಿಯುತ್ತಿದೆ. ಕೇಂದ್ರ ಸರಕಾರದ ಯಾವುದೇ ಒತ್ತಡ, ಅಪೇಕ್ಷೆ ಇಲ್ಲಎಂದು ಕೇಂದ್ರದ ಸಚಿವರು ತಿಳಿಸಿದ್ದಾರೆ,’’ ಎಂದರು.

ಬಾಕ್ಸ್

ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಸಹಾಯಕರು

‘‘ನದಿ ತಿರುವು, ಪಂಪ್ ್ಡ ಸ್ಟೋರೇಜ್ ಯೋಜನೆಗಳಿಗೆ ಸಂಬಂಧಿಸಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಅಸಹಾಯಕರಾಗಿದ್ದಾರೆ. ಶಿವಕುಮಾರ ಮುಂದೆ ಇವರ ಧ್ವನಿಯೇ ಬರುತ್ತಿಲ್ಲ. ಒಳಒಪ್ಪಂದ ಏನಾಗಿದೆಯೋ ಗೊತ್ತಿಲ್ಲ. ಹಿಂದೆ ಸಚಿವರಾಗಿದ್ದ ಮಂಕಾಳ ವೈದ್ಯ ಗೊಂದಲ ಹೇಳಿಕೆಯಲ್ಲೇ ಕಾಲ ಕಳೆದರು. ಹಿರಿಯ ಮುಖಂಡ ದೇಶಪಾಂಡೆ, ಶಾಸಕರು ತಮ್ಮ ಪ್ರಭಾವ ಬಳಸಿ ಸಿಎಂ ಮೇಲೆ ಒತ್ತಡ ತರಬೇಕು. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ, ವಿಜ್ಞಾನಿಗಳ ಸಮಾವೇಶ ಮಾಡಬೇಕು,’’ ಎಂದು ಆಗ್ರಹಿಸಿದರು.

ಬಾಕ್ಸ್

ಜನರ ಧ್ವನಿಯಾಗುವುದಕ್ಕೆ ಮುಕ್ತ ಅವಕಾಶ

ಬೇಡ್ತಿ ನದಿ ತಿರುವಿಗೆ ಹಾವೇರಿ ಸಂಸದ ಬೊಮ್ಮಾಯಿ ಒತ್ತಡ ತರುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ‘‘ಜನಪ್ರತಿನಿಧಿಗಳು ಆಯಾ ಭಾಗದ ಜನರ ಅಭಿಪ್ರಾಯವನ್ನು ಸರಕಾರದ ಮುಂದಿಡುವುದು ಸಹಜ. ಸರಕಾರ ಯಾವುದು ನ್ಯಾಯ ಎಂಬುದರ ಬಗ್ಗೆ ಪರಿಶೀಲಿಸಿ ವಿವೇಚನೆಯಿಂದ ನಿರ್ಣಯ ಮಾಡಬೇಕು. ನಾನು ನಮ್ಮ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾತನಾಡುತ್ತಿದ್ದೇನೆ. ಅವರವರ ಜಿಲ್ಲೆಯ ಜನರ ಧ್ವನಿಯಾಗುವುದಕ್ಕೆ ಮುಕ್ತ ಅವಕಾಶವಿದೆ. ಅಂತಿಮ ನಿರ್ಣಯ ಸರಕಾರ ಮಾಡಬೇಕು,’’ ಎಂದು ಕಾಗೇರಿ ತಿಳಿಸಿದರು.

*ಪೋಟೋ 23ಎಸ್ಸಾರೆಸ್ 3