ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ, ಗೇಟ್ ಬಳಿ ಅತಿವೇಗದಿಂದ ಮುಂದೆ ಇದ್ದ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು. ಈ ವೇಳೆ ಕೊಳ್ಳೇಗಾಲದಿಂದ ಮೈಸೂರಿಗೆ ಬರುತ್ತಿದ್ದ ಖಾಸಗಿ ಬಸ್ ಮುಂಭಾಗದಿಂದ ಬಂದಿದ್ದು, ಎರಡೂ ಬಸ್ ಡಿಕ್ಕಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಬಸ್ ನಲ್ಲಿಪ್ರಯಾಣಿಸುತ್ತಿದ್ದ ಮರಿಕಾಳಯ್ಯ ಮೃತಪಟ್ಟಿದ್ದು, 40 ಜನರಿಗೆ ಗಾಯಗಳಾಗಿತ್ತು. ಅವರನ್ನು ತಿ.ನರಸೀಪುರದ ಸರಕಾರಿ ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್ .ಆಸ್ಪತ್ರೆಗೆ ಸೇರಿಸಲಾಗಿದೆ. ವರುಣಾ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.