ವಿಕ ಸುದ್ದಿಲೋಕ ಅಜ್ಜಂಪುರ ಪಟ್ಟಣದಲ್ಲಿನ. 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ತಹಸೀಲ್ದಾರ್ ಪಿ.ವಿ. ವಿನಾಯಕ ಸಾಗರ್ ಅಧ್ಯಕ್ಷತೆಯಲ್ಲಿತಾಲೂಕು ಪಂಚಾಯಿತಿ ಸಭಾಂಗಣದಲ್ಲಿಗುರುವಾರ ನಡೆಯಿತು.
ಅಂದು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸುವರು. ಕನ್ನಡ ನಾಡು ನುಡಿ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ.ಜಿ.ರೇವಣ್ಣ ಹಾಗೂ ಕಸಾಪ ಅಧ್ಯಕ್ಷ ಎಚ್ .ಆರ್ . ಚಂದ್ರಪ್ಪ ಮಾತನಾಡುವರು ಎಂದು ತಹಸೀಲ್ದಾರ್ ವಿನಾಯಕ ಸಾಗರ್ ತಿಳಿಸಿದರು.
ತಾಲೂಕಿನ ಎಲ್ಲಾಶಾಲಾ-ಕಾಲೇಜುಗಳ ವಾಹನಗಳಲ್ಲಿನ ನಾಮ ಫಲಕ ಕನ್ನಡದಲ್ಲಿರುವಂತೆ ಆದೇಶಿಸಲಾಗುವುದು ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್ .ಎಂ. ಪುಟ್ಟಸ್ವಾಮಿ ಮಾತನಾಡಿ, ತಾಲೂಕಿನಲ್ಲಿಹತ್ತನೇ ತರಗತಿಯಲ್ಲಿಕನ್ನಡ ಭಾಷೆಯಲ್ಲಿ125ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ.ಜಿ. ರೇವಣ್ಣ ಕನ್ನಡ ರಾಜ್ಯೋತ್ಸವ ಯಶಸ್ವಿಯಾಗಿ ನಡೆಯಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕಿನ ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.
22ಅಜ್ಜಂಪುರ01:
ಅಜ್ಜಂಪುರದಲ್ಲಿಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ತಹಸೀಲ್ದಾರ್ ಪಿ.ವಿ. ವಿನಾಯಕಸಾಗರ್ ಅಧ್ಯಕ್ಷತೆಯಲ್ಲಿನಡೆಯಿತು.