((ಜೆನ್ ಜಿ ವೈಬ್ಸ್ ))

Contributed by: mallugoudra461987@gmali.com|Vijaya Karnataka•
new initiatives for youth employment words of lingaraju dandina
ಅರ್ಹತೆಗೆ ತಕ್ಕ ಉದ್ಯೋಗ ಒದಗಿಸಿ

ಉದ್ಯೋಗ ಅಂದರೆ ಕೇವಲ ತಿಂಗಳ ಕೊನೆಯಲ್ಲಿಬರುವ ಸಂಬಳ ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವದ ವಿಕಸನದ ಹಾದಿ. ನಮ್ಮನ್ನು ರೂಪಿಸುವ ಗುರು. ಆದ್ದರಿಂದ ಉದ್ಯೋಗ ಕ್ಷೇತ್ರದಲ್ಲಿತುಂಬಾ ಬದಲಾವಣೆಗಳಾಗಬೇಕು. ಪದವಿ ಹಾಗೂ ಅರ್ಹತೆಗೆ ತಕ್ಕಂತೆ ಯುವ ಜನತೆಗೆ ಉದ್ಯೋಗ ಸಿಗುವಂತೆ ಆಗಬೇಕು. ಕನಿಷ್ಠ ವೇತನವನ್ನು ಜೀವನದ ವೆಚ್ಚಕ್ಕೆ ತಕ್ಕಂತೆ ನಿಗದಿ ಮಾಡಬೇಕು ಮತ್ತು ನೌಕರರ ಶ್ರಮಕ್ಕೆ ಸೂಕ್ತ ಬೋನಸ್ ನೀಡಲು ಸರಕಾರ ಹೊಸ ಯೋಜನೆ ರೂಪಿಸಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಆಸಕ್ತಿ ಇರುತ್ತದೆ. ಉನ್ನತ ಉದ್ಯೋಗ ಸಿಗಬೇಕು ಎಂಬ ಬಯಕೆ ಇರುತ್ತದೆ. ಯುವ ಜನ ನಿರುದ್ಯೋಗದಿಂದ ಬಳಲುವ ಪರಿಸ್ಥಿತಿಯಿಂದ ಹೊರ ತರಲು ಹೆಚ್ಚಿನ ಅವಕಾಶ ಸೃಷ್ಟಿಸಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಖಾಸಗಿ ಕಂಪೆನಿಗಳ ನೌಕರರ ಹಿತ ಕಾಪಾಡಲು ಕಾಳಜಿ ವಹಿಸಬೇಕು.
- ಲಿಂಗರಾಜು ದಂಡಿನ, ಪದವೀಧರ, ರಾಮದುರ್ಗ

ಫೋಟೋ: 23ಮಲ್ಲು2