(ನೋಡಿದೆ)ಕಾರು ಡಿಕ್ಕಿ, ಒಬ್ಬ ಸಾವು

Contributed by: Beeresha M|Vijaya Karnataka•
one death car accident causes major impact
ಕಾರು ಡಿಕ್ಕಿ, ಒಬ್ಬ ಸಾವು

ಮೈಸೂರು: ಕಾರು ಡಿಕ್ಕಿಯಾಗಿ ಬೈಕ್ ನ ಹಿಂಬದಿ ಕುಳಿತಿದ್ದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ತಾಲೂಕಿನ ದೊಡ್ಡಹುಂಡಿ ಗೇಟ್ ಬಳಿ ನಡೆದಿದೆ.
ನಿಂಗೇಗೌಡ ಎಂಬುವವರೇ ಅಪಘಾತದಲ್ಲಿಮೃತಪಟ್ಟವರು. ಬೈಕ್ ಚಾಲನೆ ಮಾಡುತ್ತಿದ್ದ ಪ್ರಸನ್ನಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅ. 21ರಂದು ಜಮೀನಿನ ಕೆಲಸ ಮುಗಿಸಿದ ಪ್ರಸನ್ನ ಅವರು ತಮ್ಮ ಸಂಬಂಧಿ ನಿಂಗೇಗೌಡ ಅವರನ್ನು ಬೈಕ್ ನಲ್ಲಿಕೂರಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದರು. ದೊಡ್ಡಹುಂಡಿ ಗೇಟ್ ಬಳಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಿದ್ದಾರೆ. ನಿಂಗೇಗೌಡ ಅವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಯಪುರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.