ವಿಕ ಸುದ್ದಿಲೋಕ ನರಸಿಂಹರಾಜಪುರಸಾವಯವ ಕೃಷಿಯಲ್ಲಿಸಸ್ಯಗಳು ಆರೋಗ್ಯವಾಗಿ ಬೆಳೆದು ಉತ್ತಮ ಫಸಲು ನೀಡುತ್ತದೆ ಎಂದು ಹರಿಹರಪುರ ಗುರುಕುಲದ ಪ್ರಾಂಶುಪಾಲ ಶ್ರೀಧರ ಆಚಾರ್ಯ ತಿಳಿಸಿದರು.
ತಾಲೂಕಿನ ಕಾನೂರು ಗ್ರಾಮದ ಕೃಷಿಕ ರಾಘವೇಂದ್ರ ಅವರ ಮನೆಯಂಗಳದಲ್ಲಿಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು. 200 ಲೀಟರ್ ಮಜ್ಜಿಗೆಯಲ್ಲಿ20 ಕೆ.ಜಿ. ಬೆಲ್ಲಹಾಗೂ 20 ಕೆ.ಜಿ. ಪಪ್ಪಾಯವನ್ನು ಡ್ರಂ ನಲ್ಲಿಸೇರಿಸಿ ಇಡಬೇಕು. ಕೆಲವು ದಿನದ ನಂತರ ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡಗಳು ಚೆನ್ನಾಗಿ ಬೆಳೆಯಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸಾವಯವ ಕೃಷಿ ಪರಿವಾರದ ಸಂಚಾಲಕ ಕೊನೋಡಿ ಗಣೇಶ್ ಘನ ಜೀವಾಮೃತ ತಯಾರಿಕೆ ಬಗ್ಗೆ ಮಾಹಿತಿ ನೀಡಿ, 100 ಕೆ.ಜಿ. ದೇಶಿ ಹಸುವಿನ ಸಗಣಿಗೆ 5 ಲೀಟರ್ ಗೋಮೂತ್ರ, 5 ಕೆ.ಜಿ. ಮೊಸರು, 1 ಕೆ.ಜಿ. ಬಾಳೆಹಣ್ಣು ಮತ್ತು 1 ಕೆ.ಜಿ. ಬೆಲ್ಲಸೇರಿಸಿ 7 ದಿನವರೆಗೆ ಮುಚ್ಚಿಡಬೇಕು. ನಂತರ ಕೃಷಿ ಭೂಮಿಗೆ ಬಳಸುವುದರಿಂದ ಉತ್ತಮ ಫಲ ನೀಡಲಿದೆ ಎಂದರು.
ಹರಿಹರಪುರ ಗುರುಕುಲದ ಪ್ರಾಂಶುಪಾಲ ಬೀರೇಶ್ ಆಚಾರ್ಯ ಅವರು ಸಾವಯವ ಔಷಧಗಳಿಂದ ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿಅನಾರೋಗ್ಯ ಪೀಡಿತರಿಗೆ ಮನೆ ಮದ್ದು ನೀಡುತ್ತಿರುವ ಸೇತುವೆಮನೆ ರಘುಪತಿ, ಹೊಳೆಕೊಪ್ಪ ರಾಮಚಂದ್ರ, ಕಾನೂರು ರಂಗಯ್ಯ ಅವರನ್ನು ಗೌರವಿಸಲಾಯಿತು. ಶೃಂಗೇರಿ ಜಿಲ್ಲಾಗೋ ಗತಿ ವಿಧಿ ಸಹ ಸಂಚಾಲಕ ರಾಘವೇಂದ್ರ, ತಾಲೂಕು ಅಧ್ಯಕ್ಷ ಸುಭಾಷ್ ಹಾಗೂ ಸದಸ್ಯರು ಇದ್ದರು.
23ಎನ್ .ಅರ್ .ಪಿ.ಪೊಟೋ1
ನರಸಿಂಹರಾಜಪುರ ತಾಲೂಕು ಕಾನೂರು ಗ್ರಾಮದ ಕೃಷಿಕರಾದ ರಾಘವೇಂದ್ರ ಅವರ ಮನೆಯಂಗಳದಲ್ಲಿನಡೆದಕಾರ್ಯಕ್ರಮದಲ್ಲಿಸಾವಯವ ಕೃಷಿ ಪರಿವಾರದ ಸಂಚಾಲಕ ಕೊನೋಡಿ ಗಣೇಶ್ ಮಾತನಾಡಿದರು.