ಚಳ್ಳಕೆರಮ್ಮ ದೇವಾಲಯದಲ್ಲಿರೈತ ಸಂಘದಿಂದ ಸಭೆ | ಅ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಬೃಹತ್ ಪ್ರತಿಭಟನೆ | ರಾಜಕಾರಣಿಗಳ ಕುರ್ಚಿ ಕಿತ್ತಾಟ ನಾಚಿಕೆಗೇಡಿನ ಸಂಗತಿ(ಕಿಕ್ಕರ್ )
ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ---
ವಿಕ ಸುದ್ದಿಲೋಕ ಚಳ್ಳಕೆರೆ
ಇಡೀ ರಾಜ್ಯದಲ್ಲಿತೀವ್ರ ಬರಗಾಲ ಬಂದು, ರೈತರು ಮತ್ತು ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿರುವಾಗ, ರಾಜಕಾರಣಿಗಳು ತಮ್ಮ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಹೇಳಿದರು.
ನಗರದ ಚಳ್ಳಕೆರಮ್ಮ ದೇವಾಲಯ ಆವರಣದಲ್ಲಿಶುಕ್ರವಾರ ರೈತ ಸಂಘದಿಂದ ಕರೆದಿದ್ದ ಸಭೆಯಲ್ಲಿಮಾತನಾಡಿದರು. ಕರ್ನಾಟಕದಲ್ಲಿಸಂಪೂರ್ಣ ಬರಗಾಲ ಆವರಿಸಿದ್ದು, ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರವನ್ನು ಪ್ರತಿಯೊಬ್ಬ ರೈತರಿಗೆ ಕೊಡಬೇಕು. ಕೇಂದ್ರ, ರಾಜ್ಯ ಸರಕಾರಗಳು ಒಬ್ಬರ ಮೇಲೆ ಒಬ್ಬರು ಹೇಳುವುದು ಬಿಟ್ಟು ರೈತರ ನೆರವಿಗೆ ಧಾವಿಸಬೇಕಿದೆ. ಆದರೂ, ಸರಕಾರ ನಡೆಸುವರಿಗೆ ನಮ್ಮ ಗೋಳು ಕೇಳುತ್ತಿಲ್ಲ. ಹೀಗಾಗಿ ಅ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಈ ಬಗ್ಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಬೆಳೆದ ಬೆಲೆಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿಯೋಪಕರಣಗಳ ಬೆಲೆ ಗಗನಕ್ಕೇರಿದೆ. ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸಿ 2+5ರಷ್ಟು ಆಧಾರದ ಮೇಲೆ ಬೆಲೆ ನಿಗದಿಪಡಿಸುವ ಬೇಡಿಕೆ ಪರಿಗಣಿಸಬೇಕು. ಸಾಲಮನ್ನಾ ಮತ್ತು ಕಡಿಮೆ ಬಡ್ಡಿ ದರದಲ್ಲಿಕೃಷಿ ಸಾಲ ನೀಡಬೇಕು ಮತ್ತು ಬೆಳೆ ನಷ್ಟಕ್ಕೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಬರಪೀಡಿತ ಪ್ರದೇಶಗಳ ವೈಜ್ಞಾನಿಕ ಬೆಳೆ ಗುರುತಿಸುವಿಕೆ ಹಾಗೂ ನಿಯಮಾನುಸಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಉಪಾಧ್ಯಕ್ಷ ಜಿ.ಎಸ್ . ಎರಿಸ್ವಾಮಿ,ತಾಲೂಕು ಅಧ್ಯಕ್ಷ ಬಿ.ರಾಜಣ್ಣ, ಆರ್ . ಬಸವರಾಜ್ , ತಿಪ್ಪೇಸ್ವಾಮಿ, ಸಣ್ಣಪಾಲಯ್ಯ, ಕೆ. ಜಯಣ್ಣ, ಚಂದ್ರಣ್ಣ, ಜಿ.ಎಚ್ . ಹನುಮಂತಪ್ಪ,ಎನ್ . ಓಬಣ್ಣ, ಇತರರಿದ್ದರು.
----
ಭದ್ರಾ ಮೇಲ್ದಂಡೆ ಯೋಜನೆ
ತುಂಗಾ ನದಿಯಿಂದ ಭದ್ರಾ ಡ್ಯಾಂಗೆ ನೀರನ್ನು ಲಿಫ್ಟ್ ಮಾಡಿ ಚಿತ್ರದುರ್ಗ ಜಿಲ್ಲೆಯ ಎಲ್ಲಕೆರೆಗಳಿಗೆ ನೀರು ತುಂಬಿಸಬೇಕು ಮತ್ತು ಕಬ್ಬು ಬೆಳೆಗಾರರಿಗೆ ಯಾವುದೇ ಕಾರಣದಿಂದ ವಿಳಂಬ ಮಾಡದೆ ತಕ್ಷಣವೇ ಎಂಎಸ್ ಪಿ ದರದಲ್ಲಿಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
23ಸಿಎಲ್ ಕೆ 2
ಚಳ್ಳಕೆರೆಯಲ್ಲಿಶುಕ್ರವಾರ ರೈತ ಸಂಘದಿಂದ ನಡೆದ ಸಭೆಯಲ್ಲಿಸರಕಾರ ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.