ವಿಕ ಸುದ್ದಿಲೋಕ ಹೊಳೆಹೊನ್ನೂರುಜನರು ತಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಸರಕಾರಿ ಸೌಲಭ್ಯ ಪಡೆದುಕೊಳ್ಳುವ ಮಹಾದಾಶಯದೊಂದಿಗೆ ಪ್ರಜಾಸೇವೆ ಆಂದೋಲನ ನಡೆಸಲಾಗುತ್ತಿದೆ ಎಂದು ಶಾಸಕರಾದ ಶಾರದಾ ಪೂರ ್ಯನಾಯ್ಕ ಹೇಳಿದರು.
ಪಟ್ಟಣ ಸಮೀಪದ ಆನವೇರಿ ಗ್ರಾಮದ ಶ್ರೀ ಹಿರಿಮಾವುರದಮ್ಮ ದೇವಸ್ಥಾನದ ಸಭಾ ಭವನದಲ್ಲಿಏರ್ಪಡಿಸಿದ್ದ ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ ಅಭಿಯಾನದಡಿ ಹೊಳೆಹೊನ್ನೂರು-2ನೇ ಹೋಬಳಿ ವ್ಯಾಪ್ತಿಯ ಪ್ರಜಾಸೇವೆ ಆಂದೋಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಂದ ಸ್ವೀಕರಿಸಿದ ಪ್ರತಿಯೊಂದು ಅಹವಾಲನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ಮಾಡಬೇಕು. ಅಲ್ಲದೆ ಎಲ್ಲಾಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂದ ಅವರು, ಇಂತಹ ಜನಪರ ಕಾರ ್ಯಕ್ರಮದಲ್ಲಿಜನರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಪ್ರದೀಪ್ ದೇವಗಿರಿ, ತಾಲೂಕು ಪಂಚಾಯಿತಿ ಇಒ ಆಶಾಲತಾ, ತಾಲೂಕು ಶಿರಸ್ತೆದಾರ್ ಮಂಜನಾಯ್ಕ ತಾಲೂಕು ಆರೋಗ್ಯಾಧಿಕಾರಿ ಎಂ.ವಿ.ಅಶೋಕ್ ಮತ್ತಿತರರು ಹಾಜರಿದ್ದರು.
ಫೊಟೋ ಫೈಲ್ : 17ಎಚ್ ಎಚ್ ಆರ್ 1
ಹೊಳೆಹೊನ್ನೂರು ಸಮೀಪದ ಆನವೇರಿ ಗ್ರಾಮದಲ್ಲಿನಡೆದ ಹೊಳೆಹೊನ್ನೂರು-2ನೇ ಹೋಬಳಿ ವ್ಯಾಪ್ತಿಯ ಪ್ರಜಾಸೇವೆ ಆಂದೋಲನ ಸಮಾರಂಭವನ್ನು ಶಾಸಕರಾದ ಶಾರದಾ ಪೂರ ್ಯನಾಯ್ಕ ಉದ್ಘಾಟಿಸಿದರು.