ಅ.26 ರಿಂದ ಸುರಕ್ಷಿತ ಬಚ್ಪನ್ ಅಭಿಯಾನ

Contributed by: peerasab995@gmail.com|Vijaya Karnataka•
safe childhood campaign from january 26 announcement of child safety information
26ರಿಂದ ಸುರಕ್ಷಿತ ಬಚ್ಪನ್ ಅಭಿಯಾನ

ಬಳ್ಳಾರಿ: ಮಕ್ಕಳ ಹಕ್ಕುಗಳ ರಕ್ಷಣೆ , ವೈಯಕ್ತಿಕ ಸುರಕ್ಷತೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿಅ.26 ರಿಂದ 31 ರವರೆಗೆ ವಾರ ಪೂರ್ತಿ ಸುರಕ್ಷಿತ ಬಚ್ಪನ್ ಅಭಿಯಾನ ಆಯೋಜಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಜಾಗೃತಿ ಅಭಿಯಾನ ಉದ್ಘಾಟಿಸುವರು. ಅಭಿಯಾನದ ನಿಮಿತ್ತ ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯಿದೆ-2012, ಮಕ್ಕಳ ಹಕ್ಕುಗಳು, ವೈಯಕ್ತಿಕ ಮತ್ತು ಅಂತರ್ಜಾಲ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಗಳು ಸಂಭವಿಸಿದಾಗ ದೂರು ದಾಖಲಿಸುವ ವಿಧಾನಗಳು, ಉಚಿತ ಕಾನೂನು ನೆರವು ಹಾಗೂ ಮಕ್ಕಳ ರಕ್ಷಣಾ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಕಾರ್ಯಕ್ರಮಗಳಲ್ಲಿಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಭಾಗವಹಿಸಿ ಸಾರ್ವಜನಿಕರಲ್ಲಿಅರಿವು ಮೂಡಿಸುವರು. ಪ್ರತಿಯೊಂದು ಮಗುವಿನ ಬಾಲ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶ ಸಮಾಜಕ್ಕೆ ತಲುಪಬೇಕಿದ್ದು, ಈ ನಿಟ್ಟಿನಲ್ಲಿಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್ . ಹೊಸಮನೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.
......

23 ಬಿಎಲ್ ವೈ ಪೀರಾಸಾಬ್ 04

ರಾಜೇಶ್ ಎನ್ . ಹೊಸಮನೆ