ಕೊಡವೂರಿನಲ್ಲಿಅಂಚೆ ಚೀಟಿ ಪ್ರದರ್ಶನ

Contributed by: subramanya.bhat@timesofindia.com|Vijaya Karnataka•
stamp exhibition in kodavoor a journey of spiritual and cultural discovery
ವಿಕ ಸುದ್ದಿಲೋಕ ಉಡುಪಿ

ಭಾರತೀಯ ಅಂಚೆ ಉಡುಪಿ ವಿಭಾಗ, ಉಡುಪ ರತ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿಬನ್ನಂಜೆ ಉಪ ಅಂಚೆ ಕಚೇರಿಯ ಅಂಚೆ ಪಾಲಕಿ ಪೂರ್ಣಿಮಾ ಜನಾರ್ದನ ಅವರ ‘ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟಲಿ ಪಯಣ’ ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯು ಕೊಡವೂರಿನ ಭಾಮಾ ಫಿಲಾಟಲಿ ಗ್ಯಾಲರಿಯಲ್ಲಿಗುರುವಾರ ನಡೆಯಿತು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಮಾತನಾಡಿ, ಅಂಚೆ ಇಲಾಖೆಯು ಆಧುನಿಕ ಜಾಲತಾಣದ ಯುಗದಲ್ಲೂವಿವಿಧ ರೀತಿಯ ಹೊಸ ಆಯಾಮಗಳಿಗೆ ತೆರೆದುಕೊಂಡು ಜನಸ್ನೇಹಿ ಇಲಾಖೆಯಾಗಿ ಗುರುತಿಸಿಕೊಂಡಿದೆ. ಯುವ ಜನಾಂಗಕ್ಕೆ ಅಂಚೆ ಸೇವೆಯ ಪರಿಚಯ ಹಾಗೂ ಫಿಲಾಟೆಲಿ ವಿಷÜಯದ ಅರಿವು ಮೂಡಿಸಲು ಫಿಲಾಟೆಲಿ ಪಾಸ್ ಪೋರ್ಟ್ ಪರಿಚಯಿಸಲಾಗಿದೆ ಎಂದರು.

ಮಣಿಪಾಲ ಕೆಎಂಸಿ ಎಲುಬು ಮತ್ತು ಮೂಳೆ ರೋಗ ವಿಭಾಗದ ತಜ್ಞ ಹಾಗೂ ಮುಖ್ಯಸ್ಥ ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯೂಮಿಸ್ ಮ್ಯಾಟಿಕ್ ಕ್ಲಬ್ (ಎಂಪಿಎನ್ ಸಿ) ಅಧ್ಯಕ್ಷ ಡಾ. ಕಿರಣ್ ಆಚಾರ್ಯ ಮಾತನಾಡಿ, ಅಂಚೆ ಚೀಟಿ ಸಂಗ್ರಹದ ಹವ್ಯಾಸವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಲು ಸಹಕಾರಿ. ಮರೆಗುಳಿತನದ ಕಾಯಿಲೆ ಬರದಂತೆ ತಡೆಯಲು ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್ .ಪಿ. ಮಾತನಾಡಿದರು. ಕೊಡವೂರು ಶಂಕರ ನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮತ್ತು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಂಜುನಾಥ್ ಭಟ್ ಶುಭಹಾರೈಸಿದರು. ಅಂಚೆ ಚೀಟಿ ಸಂಗ್ರಾಹಕ ಅಮ್ಮುಂಜೆ ನಾಗೇಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಪೂರ್ಣಿಮಾ ಜನಾರ್ದನ್ ಮತ್ತು ಜನಾರ್ದನ ಕೊಡವೂರು ಅವರನ್ನು ಕನ್ನಡ ಸಾಹಿತ್ಯ ಪರಿಷÜತ್ತು ವತಿಯಿಂದ ಗೌರವಿಸಲಾಯಿತು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ ್ಕ ಹಾಗೂ ಕಸಾಪ ಉಡುಪಿ ತಾಲೂಕು ಪದಾಧಿಕಾರಿಗಳಾದ ರಂಜನಿ ವಸಂತ್ , ಸತೀಶ್ ಕೊಡವೂರು, ಆರ್ . ವಸಂತ್ ಉಪಸ್ಥಿತರಿದ್ದರು.

ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಜನಾರ್ದನ ಕೊಡವೂರು ಸ್ವಾಗತಿಸಿದರು. ಸಾಹಿತಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ರಂಗ ಗೀತೆ ಹಾಡಿದರು. ಅಂಚೆ ಚೀಟಿ ಸಂಗ್ರಾಹಕಿ ಪೂರ್ಣಿಮಾ ಜನಾರ್ದನ್ ವಂದಿಸಿದರು.

(ಫೊಟೊ ಫೈಲ…: 23ಯು ಅಂಚೆ)