The Theft Of Jewelry Worth 30 Lakhs By A Home Worker From Bjp Supporters
(ನೋಡಿದೆ)ಮನೆ ಕೆಲಸದಾಕೆಯಿಂದ ಚಿನ್ನಾಭರಣ ಕಳವು
Contributed by: Beeresha M|Vijaya Karnataka•
ಮನೆ ಕೆಲಸದಾಕೆಯಿಂದ ಚಿನ್ನಾಭರಣ ಕಳವು
ಮೈಸೂರು: ಮನೆ ಕೆಲಸದಾಕೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕುವೆಂಪುನಗರ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದಾರೆ.ಚನ್ನಪಟ್ಟಣದ ಬಿ.ಸಹನಾ ಎಂಬ ಕೆಲಸದಾಕೆ ತಮ್ಮ ಮನೆಯಲ್ಲಿ30 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾಳೆ ಎಂದು ಶ್ರೀರಾಂಪುರ 2ನೇ ಹಂತದ ನಿವಾಸಿ ಪಿ.ಎ.ಮಿನಿತಾ ಎಂಬುವರು ದೂರು ಸಲ್ಲಿಸಿದ್ದಾರೆ.
ಫ್ಯಾಬ್ರಿಕೇಷನ್ ವ್ಯಾಪಾರ ಮಾಡುವ ತಮ್ಮ ಪತಿ ಗಣಪತಿ ಅವರು ಅ. 20ರಂದು ಬೆಳಗ್ಗೆ ಆಯುಧ ಪೂಜೆ ಮಾಡಲು ಟಿಕೆ ಬಡಾವಣೆಯಲ್ಲಿರುವ ಕಚೇರಿಗೆ ತೆರಳಿದ್ದು, ತಾವು 8 ಗಂಟೆಗೆ ಸ್ನಾನಕ್ಕೆ ಹೋಗಿದ್ದೆ.
ಈ ಸಂದರ್ಭದಲ್ಲಿಕಳೆದ ಒಂದು ತಿಂಗಳಿಂದ ತಮ್ಮ ಮನೆಯಲ್ಲೇ ಇದ್ದ ಕೆಲಸದಾಕೆ ಸಹನಾ 30 ಲಕ್ಷ ರೂ. ಮೌಲ್ಯದ 315 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿತಿಳಿಸಿದ್ದಾರೆ.
ಕುವೆಂಪುನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಕ್ಯಾಮೆರಾ ಕಳವು
ಮೈಸೂರು: ದಸರಾ ಭದ್ರತೆಗೆ ಬಂದಿದ್ದ ಪೊಲೀಸ್ ಅಧಿಕಾರಿಯ ವಾಹನದಲ್ಲಿದ್ದ ಬಾಡಿ ವಾರ್ನ್ ಕ್ಯಾಮೆರಾವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಯಶವಂತಪುರ ಪೊಲೀಸ್ ಠಾಣೆಯ ಎಎಸ್ ಐ ಗುರುಪ್ರಸಾದ್ ಅವರನ್ನು ದಸರಾ ಭದ್ರತೆಗೆ ಅರಮನೆ ಬಳಿ ಸೆ. 21 ರಂದು ನಿಯೋಜಿಸಲಾಗಿತ್ತು. ಪುರಭವನದ ಆವರಣದಲ್ಲಿತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಅದರ ಬಾಕ್ಸ್ ನಲ್ಲಿಬಾಡಿ ವಾರ್ನ್ ಕ್ಯಾಮೆರಾ ಇಟ್ಟಿದ್ದರು. ರಾತ್ರಿ 11ರ ವೇಳೆಯಲ್ಲಿಅವರು ವಾಪಸ್ ಬಂದು ನೋಡಿದಾಗ ಕ್ಯಾಮೆರಾ ಕಳುವಾಗಿತ್ತು.