ಬೈಕ್ ಗೆ ಬೆಂಕಿ ಹಚ್ಚಿದ ಆರೋಪಿಗಳ ಬಂಧನ

Contributed by: mpadmanabha51@gmail.com|Vijaya Karnataka•
arrest of bike arsonists crime committed by pouring petrol
ವಿಕ ಸುದ್ದಿಲೋಕ ಸುಳ್ಯ

ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿಗಳನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಐವರ್ನಾಡು ನಿವಾಸಿ ದಯಾನಂದ ಹಾಗೂ ಆತನ ಸ್ನೇಹಿತ ಉತ್ತರ ಕರ್ನಾಟಕ ಭಾಗದ ದರ್ಶನ್ ರಾಜು ಬಂಧಿತ ಆರೋಪಿಗಳು. ಅಜ್ಜಾವರ ನಿವಾಸಿ ಜಯಪ್ರಕಾಶ್ ಅವರ ಕೆಟಿಎಂ ಬೈಕ್ ಆ.26 ರಂದು ರಾತ್ರಿ ಅಂಬಟೆಡ್ಕ ಬಳಿಯ ಗ್ಯಾರೇಜ್ ನಲ್ಲಿಭಾಗಶಃ ಬೆಂಕಿಗೆ ಆಹುತಿಯಾಗಿತ್ತು. ಆರಂಭದಲ್ಲಿಈ ಘಟನೆ ಶಾರ್ಟ್ ಸಕ್ರ್ಯೂಟ್ ನಿಂದ ಆಗಿರಬಹುದು ಎಂದು ಊಹಿಸಲಾಗಿತ್ತು. ಬಳಿಕ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿದೂರು ನೀಡಿದ ಹಿನ್ನೆಲೆಯಲ್ಲಿತನಿಖೆ ಕೈಗೊಂಡ ಪೊಲೀಸರಿಗೆ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಪರಾರಿಯಾಗಿರುವುದು ತಿಳಿದು ಬಂದಿತ್ತು. ಇದೀಗ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸುಳ್ಳ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.