ನಗರದ ಕೋಟೆ ಮುಂಭಾಗದಲ್ಲಿಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿದರು.**
* ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ
ಇತಿಹಾಸ ಮರೆತರೆ ಕ್ರೂರತೆ ಮರುಕಳಿಸುವ ಅಪಾಯ
ವಿಕ ಸುದ್ದಿಲೋಕ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶದ ಯುವ ಜನರು ನಿಜಾಂ ಆಡಳಿತ ಮತ್ತು ರಜಾಕರ ಹಾವಳಿಯ ಇತಿಹಾಸ ಅರಿತು ಮುನ್ನಡೆಯದಿದ್ದರೆ, ಮುಂದಿನ ಒಂದೆರೆಡು ಪೀಳಿಗೆಗಳ ನಂತರ ಇತಿಹಾಸ ಮರುಕಳಿಸುವ ಆತಂಕ ಇದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ ನೀಡಿದರು.
ನಗರದ ಕೋಟೆ ಮುಂಭಾಗದಲ್ಲಿಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಡಾ.ಬಿ.ಆರ್ .ಅಂಬೇಡ್ಕರ್ ಅವರ ಮಾತಿನಂತೆ ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲಾರರು ಎಂಬಂತೆ, ಈ ಭಾಗದಲ್ಲಿನಡೆದ ದೌರ್ಜನ್ಯಗಳನ್ನು ನಾವ್ಯಾರು ಮರೆಯುವಂತಿಲ್ಲ. ದೇಶದ ಹಲವು ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಇಲ್ಲಿನ ಜನರು ಕ್ರೂರ ಆಡಳಿತದಿಂದ ನಲುಗಿದ್ದರು ಎಂದು ಹೇಳಿದರು.
1923ರಲ್ಲಿನಿಜಾಮನು ಗÓ್ತ…-ಇ-ನಿಶಾನ್ ಹೊರಡಿಸಿ, ಐದಕ್ಕಿಂತ ಹೆಚ್ಚು ಜನರು ಒಟ್ಟಾಗಿ ಸೇರುವುದು, ಭಜನೆ-ಸತ್ಸಂಗ ನಡೆಸುವುದು, ದೇವಸ್ಥಾನದ ಗಂಟೆ ಬಾರಿಸುವುದು ಹಾಗೂ ಮೆರವಣಿಗೆಗಳನ್ನು ಕಡ್ಡಾಯವಾಗಿ ನಿಷೇಧಿಸಿದ್ದನು. ಜನನ, ಮರಣ, ಕೃಷಿ, ಜಾನುವಾರು ಹೀಗೆ ಪ್ರತಿಯೊಂದಕ್ಕೂ ನೂರಾರು ಬಗೆಯ ತೆರಿಗೆಗಳನ್ನು ನಿಜಾಂ ಹೇರುವ ಮೂಲಕ ಶ್ರೀಮಂತ ಆಗಿದ್ದ. ಇನ್ನು ಇದೇ ವೇಳೆ ಬಲವಂತದ ಮತಾಂತರಕ್ಕೆ ರಿಯಾಯಿತಿಗಳ ಆಮಿಷವೊಡ್ಡಲಾಗುತ್ತಿತ್ತು. ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಗಳನ್ನು ಹತ್ತಿಕ್ಕಿ ಉರ್ದುವನ್ನು ಬಲವಂತವಾಗಿ ಹೇರಲಾಯಿತು ಎಂದು ನೆನಪಿಸಿದರು.
ಮುಂದಿನ ಪೀಳಿಗೆಗೆ ಎಂತಹ ಭಾರತವನ್ನು ಬಿಟ್ಟುಹೋಗುತ್ತಿದ್ದೇವೆ ಎಂದು ಪ್ರತಿಯೊಬ್ಬರೂ ಚಿಂತಿಸಬೇಕು. ಹಿಂದೂ ಸಮಾಜ ಬಲಿಷ್ಠ ಮತ್ತು ಸಂಘಟಿತವಾಗಿದ್ದರೆ ಮಾತ್ರ ಭಾರತದ ಸಂವಿಧಾನ, ನ್ಯಾಯ ವ್ಯವಸ್ಥೆ ಹಾಗೂ ಸಾರ್ವಭೌಮತೆ ಸುರಕ್ಷಿತವಾಗಿರಲು ಸಾಧ್ಯ. ಆದ್ದರಿಂದ ಇತಿಹಾಸದ ವೀರರ ಬಲಿದಾನಗಳನ್ನು ಸ್ಮರಿಸಿ ರಾಷ್ಟ್ರದ ಅಖಂಡತೆಗಾಗಿ ಕೈಜೋಡಿಸಬೇಕು.
- ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ
***
ರಜಾಕಾರರ ಹತ್ಯಾಕಾಂಡ
ನಿಜಾಮನ ಆಡಳಿತದಲ್ಲಿಕಾಸೀಂ ರಿಜ್ವಿ ನೇತೃತ್ವದ ‘ರಜಾಕಾರ’ ಪಡೆ ಭೈರಾನಪಲ್ಲಿ(ಭೈರವನಿಪಲ್ಲಿ) ಸೇರಿ ಹಲವು ಗ್ರಾಮಗಳಲ್ಲಿಸಾಮೂಹಿಕ ಹತ್ಯಾಕಾಂಡ, ಲೂಟಿ ಹಾಗೂ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ ಎಸಗಿತು. ಈ ಹಿಂಸಾಚಾರವನ್ನು ಗಮನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ದಿಟ್ಟ ನಿರ್ಧಾರ ಕೈಗೊಂಡು ಆಪರೇಷನ್ ಪೋಲೋ ಸೇನಾ ಕಾರ್ಯಾಚರಣೆಗೆ ಆದೇಶಿಸಿದರು ಎಂದು ಶ್ರೀಕಾಂತ ಹೇಳಿದರು.
***
ಧೋತಿ ಬಿಡದ ಪಿ.ವಿ.ನರಸಿಂಹರಾವ್
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಎರಡು ಹಂತರ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿತ್ತು. ಧೋತಿ-ಕುರ್ತಾ ಧರಿಸಿ, ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಹಾಡಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊರಹಾಕಲಾಯಿತು. ಇವರಿಗೆ ನಿಜಾಂ ಆಡಳಿತದಲ್ಲಿಎಲ್ಲಿಯೂ ಶಿಕ್ಷಣ ನೀಡಬಾರದು ಎಂದು ಆದೇಶ ಹೊರಡಿಸಿದ್ದರು. ಆದರೆ, ಇವರಲ್ಲಿಹಲವುರು ಶಿಕ್ಷಣ ಪಡೆದಿದ್ದು ನಾಗಪುರದಲ್ಲಿ. ಹೀಗೆ ಕಲಿತವರಲ್ಲಿಮುಂದೆ ದೇಶದ ಪ್ರಧಾನಿಯಾದ ಪಿ.ವಿ. ನರಸಿಂಹರಾವ್ ಕೂಡ ಒಬ್ಬರಾಗಿದ್ದರು. ಅವರು ಕೊನೆಯವರಿಗೂ ಧೋತಿ-ಕುರ್ತಾ ಧರಿಸಿದ್ದರು ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.