ಕೋಟ್ಯಂತರ ಮೌಲ್ಯದ ನಿವೇಶನ ಮಾರಾಟ ಯತ್ನ

Contributed by: chandregowda.n@timesofindia.com|Vijaya Karnataka•
chickballapur municipality complaint of illegal sale of land worth crores
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ವಿರುದ್ಧ ಡಿಸಿಗೆ ದೂರು ನೀಡಿದ ಮಾಜಿ ಸದಸ್ಯ ಸಾಧಿಕ್

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ ಬೆಲೆ ಬಾಳುವ ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡಲು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ನೇತೃತ್ವದಲ್ಲೇ ಸಕಲ ಸಿದ್ಧತೆಗಳು ನಡೆದಿವೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾದಿಕ್ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಏನಿದು ಪ್ರಕರಣ?: ದೂರಿನಲ್ಲಿಉಲ್ಲೇಖಿಸಿರುವ ಪ್ರಕಾರ, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.6ರಲ್ಲಿರುವ ಐಡಿಎಸ್ ಎಂಟಿ ಬಡಾವಣೆಯಲ್ಲಿಸುಮಾರು 10ಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಕೋಟ್ಯಂತರ ಮೌಲ್ಯದ ಈ ಜಾಗಗಳನ್ನು ಪೌರಾಯುಕ್ತರು ತಮಗೆ ಬೇಕಾದ ವ್ಯಕ್ತಿಗಳಿಗೆ ಹಾಗೂ ತಮ್ಮ ಸಹಚರರು, ಮಾಜಿ ಸದಸ್ಯರು ಸೂಚಿಸಿದವರಿಗೆ ಲಕ್ಷಾಂತರ ಹಣ ಪಡೆದು ನೋಂದಣಿ ಮಾಡಿಕೊಡಲು ಕಚೇರಿಯಲ್ಲಿತೆರೆಮರೆಯ ಕಸರತ್ತು ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ.

ಮೃತರ ಹೆಸರಿನಲ್ಲಿನಕಲಿ ದಾಖಲೆ ಸೃಷ್ಟಿ ಆರೋಪ: ಈ ಹಿಂದೆ ನಿವೇಶನ ಕೋರಿ ಅರ್ಜಿ ಸಲ್ಲಿಸಿ ಈಗಾಗಲೇ ಮೃತಪಟ್ಟಿರುವ ಫಲಾನುಭವಿಗಳ ಹೆಸರಿನಲ್ಲಿನಕಲಿ ನಮೂನೆಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ, ಅದೇ ಹೆಸರುಗಳನ್ನು ಹೋಲುವ ಬೇರೆ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಅವರಿಗೆ ಲಕ್ಷಾಂತರ ರೂ.ಗಳ ಬೇಡಿಕೆಯಿಟ್ಟು ಅಕ್ರಮ ನೋಂದಣಿಗೆ ಸಿದ್ಧತೆ ನಡೆಸಲಾಗಿದೆ ಎಂದು ದೂರಿನಲ್ಲಿಗಂಭೀರವಾಗಿ ಪ್ರಸ್ತಾಪಿಸಿದ್ದಾರೆ.

ನೋಂದಣಿಗೆ ಬ್ರೇಕ್ ಹಾಕಲು ಆಗ್ರಹ: ನಗರಸಭೆಯ ಆಸ್ತಿ ದುರುಪಯೋಗವಾಗುವುದನ್ನು ತಡೆಯಲು ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು. ಉಪನೋಂದಣಾಧಿಕಾರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ನಗರಸಭೆಯ ಯಾವುದೇ ನಿವೇಶನಗಳು ಅಕ್ರಮವಾಗಿ ಪರಭಾರೆಯಾಗದಂತೆ ತಡೆಯಬೇಕು ಹಾಗೂ ಕಾವೇರಿ ತಂತ್ರಾಂಶದ ಮೂಲಕ ಈ ನಿವೇಶನಗಳಿಗೆ ಇ-ಸ್ವತ್ತು ನೀಡದಂತೆ ತಡೆಹಿಡಿಯಬೇಕು ಎಂದು ಮನವಿಯಲ್ಲಿಒತ್ತಾಯಿಸಿದ್ದಾರೆ.