ವಿಕ ಸುದ್ದಿಲೋಕ ಕೊಳ್ಳೇಗಾಲ

Contributed by: kollegalamalige@gmail.com|Vijaya Karnataka•
cm dk shivakumar received over 50 representations in kollegala


ಸಿಎಂಗೆ 50ಕ್ಕೂ ಹೆಚ್ಚು ಅಹವಾಲು ಸಲ್ಲಿಕೆ

*ಕೊಳ್ಳೇಗಾಲದಲ್ಲಿಜನಸ್ಪಂದನಾ ಸಭೆ*ಮುಖ್ಯ ರಸ್ತೆಗಳ ವಿಸ್ತರಣೆಗೆ ಮನವಿ

ವಿಕ ಸುದ್ದಿಲೋಕ ಕೊಳ್ಳೇಗಾಲ

ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಾಗಿ ಗುರುವಾರ ಕೊಳ್ಳೇಗಾಲಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರು , ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ 50ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು.

ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿರಸ್ತೆ ವಿಸ್ತರಣೆ ಹಾಗೂ ಒತ್ತುವರಿ ತೆರವು ಕುರಿತಂತೆ ಮನವಿ ಸಲ್ಲಿಕೆಯಾದವು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಪ್ರಮುಖ ರಸ್ತೆಗಳಾದ ಡಾ. ಬಿ.ಆರ್ . ಅಂಬೇಡ್ಕರ್ ರಸ್ತೆ ಮತ್ತು ಡಾ. ರಾಜ್ ಕುಮಾರ್ ರಸ್ತೆಗಳನ್ನು ವಿಸ್ತರಿಸಬೇಕು ಹಾಗೂ ಮುಖ್ಯ ರಸ್ತೆಗಳ ಒತ್ತುವರಿಯನ್ನು ಶೀಘ್ರ ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿ ಕಾರಿಗಳು ಮನವಿ ಮಾಡಿದರು.

ಮಹಿಳಾ ಪದವಿ ಕಾಲೇಜು: ಪಟ್ಟಣದ ಸಾವಿರಾರು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗಳಿಗೆ ತೆರಳುತ್ತಿರುವುದನ್ನು ತಪ್ಪಿಸಲು, ಕೊಳ್ಳೇಗಾಲ ತಾಲೂಕು ಕೇಂದ್ರದಲ್ಲಿಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕೆಂದು ಕರ್ನಾಟಕ ಯುವ ವೇದಿಕೆ ರಾಜ್ಯಾಧ್ಯಕ್ಷ ಅಯಾಜ್ ಕನ್ನಡಿಗ ಆಗ್ರಹಿಸಿದರು.

ರೈಲು ಮಾರ್ಗ ನಿರ್ಮಾಣ: ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ವ್ಯಾಪಾರ ಕೇಂದ್ರವಾದ ಕೊಳ್ಳೇಗಾಲಕ್ಕೆ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ರೈಲು ಮಾರ್ಗ ಮಂಜೂರು ಮಾಡಿಸಬೇಕೆಂದು ಕೋರಲಾಯಿತು.

ಶೂಟ್ ಔಟ್ ಸಂತ್ರಸ್ತರಿಗೆ ಪರಿಹಾರ: ಹನೂರು ಶೂಟ್ ಔಟ್ ನಲ್ಲಿಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ, ಮೃತರ ಮಕ್ಕಳಿಗೆ ಉಚಿತ ಶಿಕ್ಷಣ, ಸರಕಾರಿ ಉದ್ಯೋಗ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ರೈತ ಮುಖಂಡ ಡಿ. ಶ್ರೀಕಂಠಸ್ವಾಮಿ(ಶೈಲೇಂದ್ರ) ಒತ್ತಾಯಿಸಿದರು.

ಜಮೀನು ಮಂಜೂರಾತಿ: ಸತ್ತೇಗಾಲ ಗ್ರಾಮದ ಸರ್ವೆ ನಂ. 513/ಸಿ ನಲ್ಲಿರುವ 9.43 ಎಕರೆ ಪುಂಜ ತೆರಸು ಭೂಮಿಯನ್ನು ಸಮಿತಿಗೆ ಮಂಜೂರು ಮಾಡುವಂತೆ ಬುದ್ಧ ಸೇವಾ ಸಮಿತಿ ಪದಾಧಿ ಕಾರಿಗಳು ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ, ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಸಮುದಾಯ ಭವನವನ್ನು ಸಿಎಂ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿಶಾಸಕ ಎ.ಆರ್ . ಕೃಷ್ಣಮೂರ್ತಿ, ಸಚಿವರಾದ ಯು.ಟಿ. ಖಾದರ್ , ಸಿ. ಪುಟ್ಟರಂಗಶೆಟ್ಟಿ ಹಾಗೂ ಚಲುವರಾಯಸ್ವಾಮಿ ಹಾಜರಿದ್ದರು.

1ಕೆಜಿಎಲ್ -2

ಫೋಟೋ ಶೀರ್ಷಿಕೆ:

ಕೊಳ್ಳೇಗಾಲದ ಡಾ.ಬಿ.ಆರ್ .ಅಂಬೇಡ್ಕರ್ ಸಮುದಾಯ ಭವನವನ್ನು ಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆಗೊಳಿಸಿದರು.

ಓದಲೇ ಬೇಕಾದ ಸುದ್ದಿ