ರೈತರು ನಮ್ಮ ದೇಶದ ಬೆನ್ನೆಲುಬು. ಅವರು ಹೊಲಗಳಲ್ಲಿಕಷ್ಟಪಟ್ಟು ದುಡಿದು ನಮ್ಮ ಬದುಕನ್ನು ಬಂಗಾರವಾಗಿಸುತ್ತಾರೆ. ಮಳೆ, ಬಿಸಿಲು, ಗಾಳಿ ಯಾವುದನ್ನೂ ಲೆಕ್ಕಿಸದೆ ಸದಾ ದುಡಿಯುತ್ತಾರೆ. ಅಕ್ಕಿ, ಗೋಧಿ, ಜೋಳ, ತರಕಾರಿ, ಹಣ್ಣು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ರೈತರ ಜೀವನವು ಕಠಿಣ ಆಗಿರುವುದು ಕಟ್ಟು ಸತ್ಯ. ರೈತರು ತಮ್ಮ ಹೊಲದಲ್ಲಿದುಡಿದು ಬೆಳೆ ಬೆಳೆಯಲು ಹಲವಾರು ತೊಂದರೆ ಎದುರಿಸುತ್ತಾರೆ. ಬೀಜ, ಗೊಬ್ಬರ, ನೀರು, ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಅವಶ್ಯಕತೆ ಇರುತ್ತದೆ. ಇವುಗಳಿಗಾಗಿ ಅವರು ಹಣವನ್ನು ಖರ್ಚು ಮಾಡ ಬೇಕಾಗುತ್ತದೆ. ಆದರೂ ನಮ್ಮ ರೈತರು ಕೃಷಿ ನಂಬಿಕೊಂಡು ಜೀವನ ನಡೆಸುತ್ತಾರೆ. ರೈತರು ದೇಶದ ಆಹಾರದ ಮೂಲವಾಗಿದ್ದಾರೆ. ರೈತನಿದ್ದರೆ ದೇಶ ಉಳಿಯಲು ಸಾಧ್ಯ ಎಂಬ ಮಾತು ಸಾರ್ಥಕವಾಗಿದೆ. ರೈತರು ಪ್ರಮುಖವಾಗಿ ದೇಶದ ಆಹಾರ ಭದ್ರತೆ ಕಾಪಾಡುತ್ತಾರೆ. ಆದ್ದರಿಂದ ರೈತನಿಗೆ ಉತ್ತಮ ಬೆಲೆ, ಉತ್ತಮ ಬೀಜ, ನೀರಾವರಿ ಸೌಲಭ್ಯ, ಕೃಷಿ ಸಲಕರಣೆ ಮತ್ತು ಸರಕಾರದ ಸಹಾಯ ದೊರೆಯಬೇಕು. ರೈತನ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಮ್ಮ ಪ್ರಗತಿಗೆ ರೈತರ ಶ್ರಮ ಮುಖ್ಯವಾಗಿದೆ. ಆದ್ದರಿಂದ ರೈತರನ್ನು ಗೌರವಿಸಬೇಕು ಮತ್ತು ಅವರ ಪರಿಶ್ರಮಕ್ಕೆ ಸದಾ ಬೆಂಬಲಿಸಬೇಕು. ರೈತರ ಬಗ್ಗೆ ಜೈ ಜವಾನ್ , ಜೈ ಕಿಸಾನ್ ಎಂಬ ಘೋಷಣೆ ಪ್ರಸಿದ್ಧವಾಗಿದೆ.
-ಜುನೇರಾ ತಬಸ್ಸುಮ್ , ಪ್ರಥಮ ಪದವಿ ಕಲಾ ವಿಭಾಗ, ಜ್ಞಾನ ಸುಧಾ ಪದವಿ ಮಹಾವಿದ್ಯಾಲಯ, ಬೀದರ್