ಭೂಕಂಪನಕ್ಕೆ ಆತಂಕ ಪಡಬೇಡಿ

Contributed by: mahanteshsangam31@gmail.com|Vijaya Karnataka•
signs and awareness of earthquakes geologists suggestions
ಜನ ಜಾಗೃತಿ ಕಾರ್ಯಕ್ರಮ | ಭೂವಿಜ್ಞಾನಿ ಮಹೇಶ ಬಿರಜಾನವರ ಸಲಹೆ

ಭೂಕಂಪನಕ್ಕೆ ಆತಂಕ ಪಡಬೇಡಿ
ವಿಕ ಸುದ್ದಿಲೋಕ ಬಸವನಬಾಗೇವಾಡಿ

‘‘ಬಸವನಬಾಗೇವಾಡಿ ತಾಲೂಕು ಮಾತ್ರವಲ್ಲದೆ, ನಾನಾ ಕಡೆಗಳಲ್ಲೂಭೂಕಂಪನವಾಗುತ್ತಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಹಳೇ ಮನೆಗಳಿರುವ ಜನರು ಜಾಗೃತಿ ವಹಿಸಬೇಕು,’’ ಎಂದು ಭೂವಿಜ್ಞಾನಿ ಮಹೇಶ ಬಿರಜಾನವರ ಹೇಳಿದರು.

ಇಲ್ಲಿನ ಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿಗುರುವಾರ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿಅವರು ಮಾತನಾಡಿ, ‘‘ಈ ಭಾಗದಲ್ಲೆಲ್ಲಭೂಮಿಯೊಳಗೆ ಗಟ್ಟಿ ಕಲ್ಲುಇದೆ. ಅದರ ಕೆಳಗೆ ಸುಣ್ಣದ ಕಲ್ಲುಇದೆ. ಈ ಎರಡ ನಡುವೆ ನೀರು ಸೇರಿಕೊಂಡಾಗ ಈ ರೀತಿಯ ಶಬ್ದ ಕಂಪನವಾಗುತ್ತದೆ. ಆದರೆ ಅದು ಬಹು ಹೊತ್ತು ಇರುವುದಿಲ್ಲ. ಮೂರು ಸೆಕೆಂಡ್ ಒಳಗೆ ನಿಲ್ಲುತ್ತದೆ. ಕಂಪನದ ವೇಳೆಯಲ್ಲಿತೀರಾ ಭಯ ಬಂದರೆ ಟೇಬಲ್ ಕೆಳಗೆ, ಕಾಟ್ ಕೆಳಗೆ ಕುಳಿತುಕೊಳ್ಳಬೇಕು. ಒಂದು ವೇಳೆ ಕಂಪನದಿಂದ ಚಾವಣಿ ಕುಸಿದರೂ ಟೇಬಲ್ ಹಾಗೂ ಕಾಟ್ ನಿಮ್ಮನ್ನು ರಕ್ಷಣೆ ಮಾಡುತ್ತವೆ,’’ ಎಂದರು.

‘‘ಹಳೆಯ ಮನೆಗಳಿದ್ದರೆ ಚಾವಣಿ ಕುಸಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಮನೆಗಳಲ್ಲಿವಾಸವಿದ್ದವರು ತುಂಬಾ ಹುಷಾರಾಗಿರಬೇಕು. ಕಂಪನವಾಗುವುದು ಮೊದಲೇ ತಿಳಿಯುವಂತದ್ದಲ್ಲ. ಈ 15 ದಿನದಲ್ಲಿ3 ಬಾರಿ ಕಂಪನವಾಗಿದೆ. ಈ ಹಿಂದೆ ಬ್ಯಾಕೋಡ, ತೆಲಗಿ, ಉಕ್ಕಲಿ, ಕುದುರಿ ಸಾಲವಾಡಗಿ ಗ್ರಾಮಗಳಲ್ಲಿಯೂ ಕಂಪನವಾಗಿತ್ತು. ಜಾಗೃತಿವಹಿಸಲು ಆದ್ಯತೆ ಕೊಡಿ,’’ ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಭೂವಿಜ್ಞಾನಿ ಕೆ.ಚಂದ್ರಶೇಖರ ಮಾತನಾಡಿದರು. ಬಸವರಾಜ ಬಿದರಿ ಸೇರಿ ಇತರರು ಭೂಕಂಪನದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಕೇಳಿದರು. ಕಂದಾಯ ನಿರೀಕ್ಷಕ ಎಸ್ .ಎಸ್ . ದೇಸಾಯಿ, ಗ್ರಾಮ ಲೆಕ್ಕಾಧಿಕಾರಿ ಎಸ್ .ಎಚ್ .ಶಿರಶ್ಯಾಡ, ಸತೀಶ, ಶೇಖರಗೌಡ ಪಾಟೀಲ, ಶಿವಾನಂದ ಡೋಣೂರ ಸೇರಿ ಹಲವರಿದ್ದರು.

---

ಭೂಕಂಪನ ಆಗುತ್ತಿರುವುದರ ಬಗ್ಗೆ ನಾವೂ ಗಮನ ಹರಿಸುತ್ತಿದ್ದೇವೆ. ಜನರು ಭಯ ಬೀಳದೇ ಜಾಗೃತಿಗೆ ಒತ್ತು ಕೊಡಬೇಕು. ಧ್ವನಿ ವರ್ಧಕ ಮೂಲಕ ಪ್ರಚಾರವನ್ನು ಮಾಡುತ್ತೇವೆ. ನಿಮ್ಮೊಂದಿಗೆ ಇಲಾಖೆ ಸದಾ ಇರಲಿದೆ.

-ಯಮನಪ್ಪ ಸೋಮನಕಟ್ಟಿ

ತಹಸೀಲ್ದಾರ್

----

ರಿಕ್ಟರ್ ಮಾಪಕ ಅಳವಡಿಸಿ

ಬಸವನಹಟ್ಟಿ ಗ್ರಾಮಕ್ಕೂ ಭೂವಿಜ್ಞಾನಿಗಳು, ಅಧಿಕಾರಿಗಳು ಭೇಟಿ ನೀಡಿ ಜನ ಜಾಗೃತಿ ಮೂಡಿಸಿದರು. ಬಸವನಬಾಗೇವಾಡಿಯಲ್ಲಿರಿಕ್ಟರ್ ಮಾಪಕ ಅಳವಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು.

----

01ಅಕ್ಟೋಬರ್ 1, 2 ಫೋಟೊ *ಎ* (ಮಹೇಶ*

ಬಸವನಬಾಗೇವಾಡಿ ಬಸವೇಶ್ವರ ದೇವಸ್ಥಾನದಲ್ಲಿನಡೆದ ಜಾಗೃತಿ ಸಭೆಯಲ್ಲಿಭೂವಿಜ್ಞಾನಿ ಮಹೇಶ ಅವರು ಮಾತನಾಡಿದರು.

*ಬಿ* (ಜನಸ್ತೋಮ)

ಬಸವನಬಾಗೇವಾಡಿ ಬಸವೇಶ್ವರ ದೇವಸ್ಥಾನದಲ್ಲಿಭೂಕಂಪದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿಸೇರಿದ ಜನ.