ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಸುದಾನ ಪದವಿಪೂರ್ವ ಕಾಲೇಜಿನಲ್ಲಿನಡೆಯಿತು. ಪಂದ್ಯಾಟದಲ್ಲಿವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿದೆ.ತಂಡದಲ್ಲಿಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಪ್ರೀತಂ ಸಿ.ಆರ್ ., ಚೇತನ್ ಎಂ.ಎಂ., ನಿರೀಕ್ಷಿತ್ , ಪ್ರೀತಂ, ಜಯಂತ್ ಕೆ.ಎಸ್ ., ದ್ವಿತೀಯ ಪಿಯುಸಿಯ ಕಾರ್ತಿಕ್ ಕೆಮ್ಮಿಂಜೆ, ಸಾತ್ವಿಕ್ , ಅಮೃತ್ ಬಿ.ಕೆ., ವರ್ಷಿತ್ ಬಿ.ಎಂ., ಭವಿಶ್ ಡಿ. ಗೌಡ, ಪೃಥ್ವಿರಾಜ್ ಕೆ.ಆರ್ ., ಆತ್ಮಿಕ್ ಎ.ಎಸ್ . ಭಾಗವಹಿಸಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ಅಮೃತ್ ಬಿ.ಕೆ. ಪಂದ್ಯಾಟದ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ , ಡಾ.ಜ್ಯೋತಿ ಮತ್ತು ಯತೀಶ್ ನೇತೃತ್ವದಲ್ಲಿತರಬೇತಿ ಪಡೆದಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ತಿಳಿಸಿದ್ದಾರೆ.
ಫೋಟೋ: 1ಪಿ-ವಾಲಿಬಾಲ್
ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ತಂಡ.