ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ಮಂಜೇಶ್ವರ ಘಟಕದ ನೇತೃತ್ವದಲ್ಲಿಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಒತ್ತಾಯಿಸಿ ಹೊಸಂಗಡಿ ರೈಲ್ವೆ ಸೇತುವೆ ಬಳಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ನೇತಾರರಾದ ಎನ್ .ಎ. ಅಬ್ದುಲ್ ಹಮೀದ್ , ಸತ್ಯಜ್ಯೋತ್ , ಹಸೈ್ಸನಾರ್ , ಹನೀಫ್ ಪ್ರೊಸೋಟ್ , ಅಬ್ಬು ಹಾಜಿ ಕಡಂಬಾರ್ , ಗಾಯತ್ರಿ ಟೀಚರ್ , ಇಸಾಕ್ , ಹಮೀರ್ , ಅಶ್ರಫ್ , ಸಿದ್ದೀಕ್ , ಮುಹ್ಸಿನ್ , ಖಲೀಲ್ , ಮೂಸ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.ಈ ಸಂದರ್ಭದಲ್ಲಿಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ, ಪಾಲಕ್ಕಾಡ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿಆಟೋ ಚಾಲಕರು, ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.