ಮೂರು ಶಾಲಾ ಕೊಠಡಿ ದುರಸ್ತಿಗೆ ಚಾಲನೆ

Contributed by: mbchinchane@gmail.com|Vijaya Karnataka•
5 lakhs fund approved for renovation of three school classrooms
ವಿಕ ಸುದ್ದಿಲೋಕ ಬೋರಗಾಂವ

ಸಮೀಪದ ಗಳತಗಾ ಗ್ರಾಮದ ಶತಮಾನೋತ್ಸವ ಸರಕಾರಿ ಪಿಎಂಶ್ರೀ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ದುರಸ್ತಿಗಾಗಿ 5 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಗ್ರಾಮದ ಗಣ್ಯರ ಉಪಸ್ಥಿತಿಯಲ್ಲಿಚಾಲನೆ ನೀಡಲಾಯಿತು.
ಹಾಲಶುಗರ್ ಸಂಚಾಲಕ ಶ್ರೀಕಾಂತ ಬನ್ನೆ,ಮಾತನಾಡಿ,‘‘ ಶಾಸಕಿ ಶಶಿಕಲಾ ಜೊಲ್ಲೆಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆಯವರ ವಿಶೇಷ ಪ್ರಯತ್ನದಿಂದ ಕಳೆದ 13 ವರ್ಷಗಳಲ್ಲಿಗಳತಗಾ, ಭೀಮಾಪುರವಾಡಿ, ದಿಲಾಲಪುರವಾಡಿ ಹಾಗೂ ಹಳದಟ್ಟಿ ಭಾಗಗಳಲ್ಲಿಶಾಲಾ ಕಟ್ಟಡ, ಗ್ರಂಥಾಲಯ, ಪ್ರತ್ಯೇಕ ಶೌಚಾಲಯ ಸೇರಿದಂತೆ ನಾನಾ ಶೈಕ್ಷಣಿಕ ಸೌಲಭ್ಯಗಳಿಗೆ ಕೋಟ್ಯಂತರ ರೂ.ಅನುದಾನ ಒದಗಿಸಲಾಗಿದೆ,’’ ಎಂದು ಹೇಳಿದರು.

ಗ್ರಾಪಂ ಮಾಜಿ ಸದಸ್ಯ ಬಾಬಾಸಾಬ ಜಾಧವ, ಮುಖ್ಯೋಪಾಧ್ಯಾಯ ಎಂ.ಡಿ.ಅಲ್ಲಯ್ಯಣ್ಣವರ, ಸಿ.ವಿ.ಕಾಂಬಳೆ ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಅಣ್ಣಾಸಾಹೇಬ ಹಿರವೆ, ಶಿವಾನಂದ ಗಿಂಡೆ, ಈರಗೊಂಡಾ ಪಾಟೀಲ, ಚನಗೊಂಡಾ ಪಾಟೀಲ, ಭರತ ನಸಲಾಪುರೆ, ಗುಂಡು ಪಾಟೀಲ, ಮಿಥುನ ಪಾಟೀಲ, ಮೀನಾಕ್ಷಿ ಕೋಳಿ, ಮಹಾದೇವಿ ಬನ್ನೆ, ಸವಿತಾ ಕಾಗಲೆ, ಶೋಭಾ ಪಾಟೀಲ, ಮಹಾನಂದಾ ಕಮತೆ, ಪ್ರಣಿತಾ ಪಾಟೀಲ, ಗುತ್ತಿಗೆದಾರ ವಿನೋದ ಭಾಧುಲೆ ಸೇರಿದಂತೆ ಶಿಕ್ಷಕರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೊ4ಐಸಿಹೆಚ್ 2: ಗಳತಗಾ ಗ್ರಾಮದ ಪಿಎಂಶ್ರೀ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಕೊಠಡಿ ದುರಸ್ತಿ ಕಾಮಗಾರಿಗೆ ಗಣ್ಯರು ಚಾಲನೆ ನೀಡಿದರು.

ಓದಲೇ ಬೇಕಾದ ಸುದ್ದಿ