ಅಭಿವೃದ್ಧಿ ಯೋಜನೆಗಳ ಕುರಿತು ರೈತರಿಗೆ ಸಿಗದ ಸಮರ್ಪಕ ಮಾಹಿತಿ

Contributed by: sathyabudikote@gmail.com|Vijaya Karnataka•
development plans must provide information to farmers
ಮಾನವ ಹಕ್ಕುಗಳ ಜಾಗೃತಿ ಹಾಗೂ ರೈತ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಆರೋಪ

ವಿಕ ಸುದ್ದಿಲೋಕ ಬಂಗಾರಪೇಟೆ
ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಯೋಜನೆಗಳ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲಎಂದು ಮಾನವ ಹಕ್ಕುಗಳ ಜಾಗೃತಿ ಹಾಗೂ ರೈತ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಆರೋಪಿಸಿದರು.

ನಗರಸಭೆ ಆವರಣದಲ್ಲಿಪತ್ರಿಕಾ ಹೇಳಿಕೆ ನೀಡಿದ ಅವರು ಯೋಜನಾ ಪ್ರಾಧಿಕಾರವು ಕಚೇರಿಯಲ್ಲೇ ಕುಳಿತುಕೊಂಡು ಕಾರ್ಯನಿರ್ವಹಿಸುವ ಬದಲು, ಯೋಜನೆಗಳಿಂದ ಪರಿಣಾಮಕ್ಕೊಳಗಾಗುವ ಗ್ರಾಮಗಳಿಗೆ ತೆರಳಿ ರೈತರೊಂದಿಗೆ ನೇರವಾಗಿ ಚರ್ಚಿಸಬೇಕು. ಯಾವ ಗ್ರಾಮ, ಯಾವ ಸರ್ವೆ ನಂಬರ್ ಗಳು ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಅರವತ್ತು ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿಯೇ ರೈತರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕಾಗಿದೆ. ಆದರೆ ಇ-ಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವುದು ಗ್ರಾಮೀಣ ಭಾಗದ ಅನೇಕ ರೈತರಿಗೆ ತೊಂದರೆಯಾಗಬಹುದು. ಇ-ಮೇಲ್ ಬಳಕೆ ಸೇರಿದಂತೆ ಆಕ್ಷೇಪಣೆ ಸಲ್ಲಿಸುವ ವಿಧಾನವನ್ನು ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷವಾಗಿ ಪ್ರಸ್ತಾಪಿಸಿರುವ ರಿಂಗ್ ರೋಡ್ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಮಾರ್ಗ, ಆರಂಭವಾಗುವ ಸ್ಥಳ, ಕೊನೆಗೊಳ್ಳುವ ಸ್ಥಳ ಹಾಗೂ ಒಳಪಡುವ ಸರ್ವೆ ನಂಬರ್ ಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ನಕ್ಷೆ ಹಾಗೂ ಸಂಬಂಧಿಸಿದ ದಾಖಲೆಗಳನ್ನು ರೈತರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ತಾಲೂಕಿನ ಕಾರಹಳ್ಳಿ ಬಡಾವಣೆ, ಯಲಬುರ್ಗಿ, ನೆರ್ನಹಳ್ಳಿ, ಬೆಂಗನೂರು, ದೊಡ್ಡ ಅಂಕಂಡಹಳ್ಳಿ ರೈತರು ತಮ್ಮ ಅರ್ಧ ಎಕರೆ, ಒಂದು ಎಕರೆ ಅಥವಾ ಮೂರು ಎಕರೆ ಜಮೀನಿನಲ್ಲೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆ ಜಮೀನು ಅವರ ಕುಟುಂಬದ ಜೀವನಾಧಾರವಾಗಿದೆ. ಅಭಿವೃದ್ಧಿ ಯೋಜನೆಯಿಂದ ಕೃಷಿ ಭೂಮಿಗೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಾದರೆ, ಮೊದಲೇ ಸಂಪೂರ್ಣ ಮಾಹಿತಿ ನೀಡಬೇಕು. ಮಾಹಿತಿ ನೀಡದೆ ಯೋಜನೆ ರೂಪಿಸಿದರೆ ರೈತರು ತಮ್ಮ ಆಕ್ಷೇಪಣೆಗಳನ್ನು ಹೇಗೆ ಸಲ್ಲಿಸಬೇಕು ಎಂಬುದು ತಿಳಿಯುವುದಿಲ್ಲಎಂದರು.

ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ರೈತರೊಂದಿಗೆ ಸಭೆ ನಡೆಸಬೇಕು. ಅಗತ್ಯವಿದ್ದರೆ ಮಾಧ್ಯಮಗಳ ಸಮ್ಮುಖದಲ್ಲಿಯೇ ಯೋಜನೆಯ ವಿವರಗಳನ್ನು ಸಾರ್ವಜನಿಕರಿಗೆ ತೋರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಗೌಪ್ಯವಾಗಿರದೆ ಪಾರದರ್ಶಕವಾಗಿರಬೇಕು. ಅರವತ್ತು ದಿನಗಳ ಆಕ್ಷೇಪಣೆ ಅವಧಿಯೊಳಗೆ ಪ್ರತಿಯೊಬ್ಬ ಪರಿಣಾಮಕ್ಕೊಳಗಾಗುವ ರೈತನಿಗೂ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳಬೇಕು. ರೈತರ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಇದೇ ವೇಳೆ, ಅಭಿವೃದ್ಧಿಯ ಹೆಸರಿನಲ್ಲಿಕೃಷಿ ಭೂಮಿಗೆ ಧಕ್ಕೆಯಾಗದಂತೆ ಸರಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯೋಜನೆಯಿಂದ ಪರಿಣಾಮಕ್ಕೊಳಗಾಗುವ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಅಗತ್ಯ ಸ್ಪಷ್ಟೀಕರಣಗಳನ್ನು ಸಾರ್ವಜನಿಕವಾಗಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಈ ವೇಳೆ ಮೋಹನ್ , ಆನಂದ್ , ನಾಗರಾಜ್ , ಶ್ರೀನಿವಾಸ್ , ಸೌಮ್ಯ, ಶಶಿ, ರಶ್ಮಿ, ಕೃ?Ü್ಣಪ್ಪ ಇತರರು ಹಾಜರಿದ್ದರು.

3 ಬಂಗಾರಪೇಟೆ ನಗರದ ನಗರಸಭೆಯ ಆವರಣದಲ್ಲಿಮಾನವ ಹಕ್ಕುಗಳ ಜಾಗೃತಿ ಹಾಗೂ ರೈತ ಸಮಿತಿ ತಾಲ್ಲೂಕು ಅಧ್ಯಕ್ಷ ರಮೇಶ್ ಪತ್ರಿಕಾ ಹೇಳಿಕೆ ನೀಡಿದರು.

ಓದಲೇ ಬೇಕಾದ ಸುದ್ದಿ