80 ಸಾವಿರ ನೋಟ್ ಪುಸ್ತಕ ವಿತರಣೆ

Contributed by: prk.k73@gmail.com|Vijaya Karnataka•
distribution of 80000 note books free of cost to students
ವಿಕ ಸುದ್ದಿಲೋಕ ಮುಳಬಾಗಲು

ಕೋಲಾರ ಶಿಕ್ಷಕರ ಗೆಳೆಯರ ಬಳಗ ಮತ್ತು ಮಾರುತಿ ಮೆಡಿಕಲ್ಸ್ ಬೆಂಗಳೂರು ಆವರಿಂದ ಸರಕಾರಿ ಶಾಲೆಗಳ ಬಲವರ್ಧನೆಗಾಗಿ ಉಚಿತವಾಗಿ ತಾಲೂಕಿನ ಪ್ರಾಥಮಿಕ ಸರಕಾರಿ ಶಾಲೆಗಳ ಎಲ್ಲಾವಿದ್ಯಾರ್ಥಿಗಳಿಗೆ 80 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್ ಹೇಳಿದರು.
ನಗರದ ಸರಕಾರಿ ಬಾಂಗ್ಲಾಶಾಲೆ ಆವರಣದಲ್ಲಿಕೋಲಾರ ಶಿಕ್ಷಕರ ಗೆಳೆಯರ ಬಳಗ ಮತ್ತು ಮಾರುತಿ ಮೆಡಿಕಲ್ಸ್ ಬೆಂಗಳೂರು ರವರಿಂದ ಏರ್ಪಡಿಸಿದ್ದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನವಂಬರ್ ತಿಂಗಳಲ್ಲಿಇದೇ ಗೆಳೆಯರ ಬಳಗದಿಂದ ತಾಲೂಕಿನ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ಗಳನ್ನು ವಿತರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಇದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.

ಕೋಲಾರ ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಂಬಿಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಮ್ಮ ಮೇಲೆ ನಂಬಿಕೆ ಇಟ್ಟು ಹಲವಾರು ಕಂಪನಿಗಳು ಕೋಲಾರ ಶಿಕ್ಷಕರ ಗೆಳೆಯರ ಬಳಗ ಮತ್ತು ಮಾರುತಿ ಮೆಡಿಕಲ್ಸ್ ಬೆಂಗಳೂರು ಅವರಿಂದ ಶಾಲೆಗಳ ಬಲವರ್ಧನೆಗಾಗಿ ಉಚಿತವಾಗಿ ನೆರವನ್ನು ನೀಡುತ್ತಿವೆ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಪಿ.ಸೋಮೇಶ್ ಮಾತನಾಡಿ, ನಮ್ಮ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿ ಕೋಲಾರ ಶಿಕ್ಷಕರ ಗೆಳೆಯರ ಬಳಗ ಮತ್ತು ಮಾರುತಿ ಮೆಡಿಕಲ್ಸ್ ಬೆಂಗಳೂರು ರವರಿಂದ ಶಾಲೆಗಳ ಅಭಿವೃದ್ಧಿಗಾಗಿ ಉತ್ತಮವಾದಂತಹ ಕಾರ್ಯಗಳನ್ನು ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.

ಕೋಲಾರ ಶಿಕ್ಷಕರ ಬಳಗದ ಸದಸ್ಯರಾದ ಗೆನ್ನೇರಹಳ್ಳಿ ಶ್ರೀನಿವಾಸ ಮೂರ್ತಿ, ವಿಶ್ವನಾಥ ರೆಡ್ಡಿ, ಶ್ರೀನಿವಾಸ್ , ರೋಣೂರು ರೆಡ್ಡಪ್ಪ, ವೆಂಕಟರಾಮರೆಡ್ಡಿ, ಸರಕಾರಿ ಬಾಂಗ್ಲಾಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ.ಬಿ ನಾಗರಾಜ್ , ಖಜಾಂಚಿ ಸೋಮಶೇಖರ್ , ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಸುಬ್ರಮಣಿ ರೆಡ್ಡಿ, ಸರಕಾರಿ ನೌಕರರ ಸಂಘದ ಪದಾಧಿಕಾರಿ ಬಿ.ಚಿತ್ರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವೇಣುಗೋಪಾಲ್ , ಉಷಾ ಪ್ರಹ್ಲಾದ್ , ನಿರಂಜನ್ , ಎಸ್ .ಕೆ ವಾಣಿ, ಕೆ ವಾಣಿ, ವಿ.ಸಿ ರವೀಂದ್ರ, ಶಫೀಕ್ ಅಹಮದ್ , ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ್ , ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಅವನಿಗೆ ಆನಂದ್ , ಸರಕಾರಿ ನೌಕರರ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸುಬ್ಬರಾಯಪ್ಪ, ತಾಲೂಕಿನ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.

3 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ನಗರದ ಸರಕಾರಿ ಬಾಂಗ್ಲಸರಕಾರಿ ಶಾಲೆ ಆವರಣದಲ್ಲಿ80 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಓದಲೇ ಬೇಕಾದ ಸುದ್ದಿ