ರಾಜ್ಯ ಸರಕಾರದಿಂದ 1,500 ಕೋಟಿ ರೂ. ಭ್ರಷ್ಟಾಚಾರ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರದಲ್ಲಿಕೃಷಿಕರಿಗೆ ಕಡಿಮೆ ಮೊತ್ತ ಪಾವತಿ ದ.ಕ. ಜಿಲ್ಲಾಬಿಜೆಪಿಯಿಂದ ನಡೆದ ಹಕ್ಕೊತ್ತಾಯ ಸಭೆಯಲ್ಲಿಶಾಸಕ ಹರೀಶ್ ಪೂಂಜ ಗಂಭೀರ ಆರೋಪ

Contributed by: stevan.rego@timesgroup.com|Vijaya Karnataka•
allegations of 1500 crore corruption in state government crop insurance compensation
ವಿಕ ಸುದ್ದಿಲೋಕ ಮಂಗಳೂರು

‘‘ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಕಡಿಮೆ ಮೊತ್ತ ಪಾವತಿಯಾಗಿದ್ದು, ರಾಜ್ಯ ಕಾಂಗ್ರೆಸ್ ಸರಕಾರ 1,500 ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ವಿಮಾ ಕಂಪನಿಯಿಂದ ರಾಜ್ಯ ಸರಕಾರ ಲಂಚ ಪಡೆದು ರೈತರಿಗೆ ಅತಿ ಕಡಿಮೆ ಮೊತ್ತದ ಪರಿಹಾರ ನೀಡಿದೆ,’’ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆರೋಪಿಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿಅಡಕೆ ಹಾಗೂ ಇತರ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರದಲ್ಲಿಆಗಿರುವ ಅನ್ಯಾಯದ ವಿರುದ್ಧ ದ.ಕ. ಜಿಲ್ಲಾಬಿಜೆಪಿ ವತಿಯಿಂದ ನಡೆದ ಹಕ್ಕೊತ್ತಾಯ ಸಭೆಯಲ್ಲಿಶುಕ್ರವಾರ ಮಾತನಾಡಿದರು.

‘‘ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಬೆಳೆ ವಿಮೆ ಯೋಜನೆ ರಾಜ್ಯದಲ್ಲಿಬಿಜೆಪಿ ಸರಕಾರದ ಅವಧಿಯಲ್ಲಿ2019ರಿಂದ 2023ರವರೆಗೆ ಯಶಸ್ವಿಯಾಗಿ ಅನುಷ್ಠಾನಗೊಂಡು ರೈತರಿಗೆ 2-3 ಲಕ್ಷ ರೂ.ವರೆಗೂ ದೊರೆಯುತ್ತಿತ್ತು. ಒಬ್ಬ ರೈತರಿಗೆ 11 ಲಕ್ಷ ರೂ. ಬೆಳೆ ವಿಮೆ ಬಂದಿತ್ತು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿಮಾ ಮೊತ್ತ ಪಾವತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿಮಳೆಮಾಪನ ಕೇಂದ್ರಗಳ ಸಮಸ್ಯೆಯಿಂದ ಮಳೆ ಪ್ರಮಾಣ ದಾಖಲಾಗದೆ ಬೆಳೆ ವಿಮೆ ಬರುತ್ತಿಲ್ಲಎಂದು ಹೇಳಲಾಯಿತು. ಬಳಿಕ ಜಿಲ್ಲೆಯ ಶಾಸಕರ ಸೂಚನೆಯಂತೆ ಎಲ್ಲಮಳೆಮಾಪನ ಘಟಕಗಳ ದುರಸ್ತಿ ನಡೆಸಲಾಗಿದೆ. ಆದರೂ, ಈ ಬಾರಿ ರೈತರ ಬ್ಯಾಂಕ್ ಖಾತೆಗೆ ಕಡಿಮೆ ಮೊತ್ತ ಜಮೆಯಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿದಾಗ ರಾಜ್ಯ ಸರಕಾರ ವಿಮಾ ಕಂಪನಿ ಜತೆಗೆ ಟಮ್ ರ್ ಶೀಟ್ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. ವಿಮಾ ಕಂಪನಿಗೆ ಅನುಕೂಲ ಮಾಡಿಕೊಡಲು ಈ ಒಪ್ಪಂದ ಬದಲಾವಣೆ ಮಾಡಲಾಗಿದೆ. ಇದರಲ್ಲಿರಾಜ್ಯದ ಸಚಿವರು ಅಥವಾ ಮುಖ್ಯಮಂತ್ರಿ ಕಿಕ್ ಬ್ಯಾಕ್ ಪಡೆದಿದ್ದಾರೆ,’’ ಎಂದು ಆಪಾದಿಸಿದರು.

ಮಳೆ ಲೆಕ್ಕದಲ್ಲೂಮೋಸ

‘‘2019ರ ಟಮ್ ರ್ ಶೀಟ್ ನಲ್ಲಿಬೆಳೆ ವಿಮೆ ಪಡೆಯಲು 126 ಮೀ.ಮೀ. ಮಳೆ ಬೀಳಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಅದನ್ನು 250 ಮೀ.ಮೀ.ಗೆ ಹೆಚ್ಚಿಸಲಾಗಿದೆ. ರಾಜ್ಯ ಸರಕಾರದ ವಿಮಾ ಮೊತ್ತದ ಪಾಲನ್ನು ಹೆಚ್ಚಿಸಲಾಗಿದೆ. ಆದರೆ, ವಿಮಾ ಮೊತ್ತ ಕಡಿಮೆಯಾಗಿದೆ. ರಾಜ್ಯ ಸರಕಾರ ತನ್ನ ಪಾಲಿನ ಮೊತ್ತವನ್ನು ವಿಮಾ ಕಂಪನಿಗೆ ಸಮರ್ಪಕವಾಗಿ ಪಾವತಿಸಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು. ಬಿಸಿಲು ಜಾಸ್ತಿಯಾದರೂ ಎಳೆ ಅಡಕೆ ಉದುರುತ್ತದೆ. ಈ ಬಾರಿ ಮಳೆ ಕಡಿಮೆಯಾಗಿದೆ. ಹಾಗಾದರೆ ಮುಂದಿನ ವರ್ಷ ಬೆಳೆ ವಿಮೆ ನೀಡುವುದಿಲ್ಲವೇ? ಅತಿ ಮಳೆಯಾದರೆ ಮಾತ್ರ ಪರಿಹಾರ ಎಂಬುದನ್ನು ಮಾರ್ಪಡಿಸಿ ಹವಾಮಾನ ವೈಪರೀತ್ಯಕ್ಕೂ ಬೆಳೆ ವಿಮೆ ನೀಡಬೇಕು, ಪಾರದರ್ಶಕ ಟೆಂಡರ್ ನಡೆಸಿ, ವಿವರವನ್ನು ಜನಪ್ರತಿನಿಧಿಗಳು, ರೈತರಿಗೆ ನೀಡಬೇಕು,’’ ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.

ಅಮ್ಮುಂಜೆಯಲ್ಲಿಶೂನ್ಯ ಬೆಳೆ ವಿಮೆ

‘‘ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿಒಬ್ಬನೇ ಒಬ್ಬ ರೈತನಿಗೆ ಬೆಳೆ ವಿಮೆ ಬಂದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿಪಾವತಿಯಾಗುತ್ತಿದ್ದಂತೆ ರೈತರಿಗೆ ವಿಮಾ ಮೊತ್ತ ಸಿಗಲೇಬೇಕು. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿಕಾಡುಪ್ರಾಣಿಗಳ ದಾಳಿಯಿಂದ ರೈತರು ಭಾರಿ ತೊಂದರೆ, ಕೃಷಿ ನಷ್ಟ ಅನುಭವಿಸುತ್ತಿದ್ದಾರೆ. ಆನೆ, ಮಂಗ, ಹಂದಿ, ಕಾಡುಕೋಣ ರೈತರ ಬೆಳೆಗಳನ್ನು ಸತತ ನಾಶ ಮಾಡುತ್ತಿದೆ. ಜಿಲ್ಲಾಡಳಿತ ಕೋವಿ ಪರವಾನಗಿ ನವೀಕರಣ ಮಾಡುತ್ತಿಲ್ಲ. ಹಳದಿ ರೋಗ, ಎಲೆಚುಕ್ಕೆ ರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಆದರೆ, ಯಾವ ಸಮಸ್ಯೆಗೂ ಸ್ಪಂದಿಸದ ರಾಜ್ಯ ಸರಕಾರ ಇದೀಗ ಬೆಳೆ ವಿಮೆಯಲ್ಲೂಭ್ರಷ್ಟಾಚಾರ ನಡೆಸಿದೆ. 2019ರಿಂದ 2023ರ ಅವಧಿಯಲ್ಲಿರೈತರಿಗೆ ಪಾವತಿಯಾಗುತ್ತಿದ್ದ ಪ್ರಮಾಣದಲ್ಲೇ ಬೆಳೆ ವಿಮೆ ಪಾವತಿಸಬೇಕು. ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿರೈತರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ,’’ ಎಂದು ಹರೀಶ್ ಪೂಂಜ ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ‘‘2023ರ ಬಳಿಕ ರಾಜ್ಯ ಕಾಂಗ್ರೆಸ್ ಸರಕಾರ ಬೆಳೆ ವಿಮೆಯನ್ನು ದಂಧೆ ಮಾಡಿಕೊಂಡಿದೆ. ಒಪ್ಪಂದವನ್ನು ಯಾಕೆ ಬದಲಾವಣೆ ಮಾಡಲಾಗಿದೆ ಎಂಬುದಕ್ಕೆ ಸರಕಾರ ಉತ್ತರ ನೀಡಬೇಕು. ಕಾಂಗ್ರೆಸ್ ಗೆ ರೈತರ ಶಾಪ ತಟ್ಟುತ್ತದೆ. ಜಿಲ್ಲೆಯ ರೈತರ ಪ್ರಶ್ನೆಗಳಿಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉತ್ತರಿಸಬೇಕು,’’ ಎಂದು ಒತ್ತಾಯಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ‘‘ರಾಜ್ಯ ಕಾಂಗ್ರೆಸ್ ಸರಕಾರದಲ್ಲಿಜನತೆಗೆ ಬದುಕೂ ಇಲ್ಲ, ಭಾವನೆಯೂ ಇಲ್ಲ. ಇದೊಂದು ಢೋಂಗಿ ಸರಕಾರ. ಗೃಹಲಕ್ಷ್ಮಿ ಹಣ, ಹಾಲಿನ ಸಬ್ಸಿಡಿ ನೀಡದ ರಾಜ್ಯ ಸರಕಾರ ಇದೀಗ ಬೆಳೆ ವಿಮೆ ಹಣದಲ್ಲೂರೈತರಿಗೆ ಮೋಸ ಮಾಡಿದೆ. ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಅ.15ರಿಂದ ನ.15ರವರೆಗೆ ಜಿಲ್ಲೆಯ ಎಲ್ಲಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿಬಿಜೆಪಿಯಿಂದ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು,’’ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ‘‘ಬಿಜೆಪಿ ಸರಕಾರ ಇದ್ದಾಗ ರೈತರಿಗೆ ಅನುಕೂಲವಾಗುವಂತೆ ಟಮ್ ರ್ ಶೀಟ್ ರೂಪಿಸಿತ್ತು. ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಬಂದ ಬಳಿಕ ವಿಮಾ ಕಂಪನಿಗೆ ಅನುಕೂಲವಾಗುವಂತೆ ಟಮ್ ರ್ ಶೀಟ್ ನಲ್ಲಿತಿದ್ದುಪಡಿ ನಡೆಸಿ, ರೈತರಿಗೆ ಕಡಿಮೆ ಮೊತ್ತ ದೊರೆಯುವಂತಾಗಿದೆ. ಇದಕ್ಕೆ ರಾಜ್ಯ ಸರಕಾರ ನೇರ ಹೊಣೆಯಾಗಿದೆ. ಹೆಕ್ಟೇರ್ ಗೆ 45 ಸಾವಿರ ರೂ. ಪಾವತಿಸಿದವರಿಗೆ 10 ಸಾವಿರ ವಿಮಾ ಮೊತ್ತ ಬಂದಿದೆ. ಉಳಿದ ಹಣ ಯಾರ ಕಿಸೆಗೆ ಹೋಗಿದೆ? ಬೆಳೆ ವಿಮೆಯಲ್ಲಿಭ್ರಷ್ಟಾಚಾರ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ,’’ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್ , ವಿಭಾಗ ಸಹಪ್ರಭಾರಿ ಜಯಂತ ಕೋಟ್ಯಾನ್ , ಸಹಕಾರಿ ಭಾರತಿ ದ.ಕ. ಜಿಲ್ಲಾಧ್ಯಕ್ಷ ಸುಧಾಕರ ರೈ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಗೌಡ ಬೆಳ್ತಂಗಡಿ, ಬಿಜೆಪಿ ನಾನಾ ಮಂಡಲಗಳ ಅಧ್ಯಕ್ಷರಾದ ವೆಂಕಟ್ ವಳಲಂಬೆ, ರಮೇಶ್ ಕಂಡೆಟ್ಟು, ಜಗದೀಶ ಆಳ್ವ, ಶಿವಕುಮಾರ್ , ದಯಾನಂದ ಶೆಟ್ಟಿ ಉಜಿರೆಮಾರ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಕುಮಾರ್ ದಡ್ಡು ವಂದಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಕ್ಕೊತ್ತಾಯ ಸಭೆಯಲ್ಲಿಭಾರಿ ಸಂಖ್ಯೆಯಲ್ಲಿರೈತರು ಭಾಗವಹಿಸಿದ್ದರು.

ಬಾಕ್ಸ್

ರಾಜ್ಯ ಸರಕಾರಕ್ಕೆ ರೈತರ ಶಾಪ ತಟ್ಟದೇ ಬಿಡದು

ಮಂಗಳೂರಿನಲ್ಲಿಕ್ಯಾಬಿನೆಟ್ ಮಾಡಿಕೊಂಡು 32 ಸಾವಿರ ಕೋಟಿ ರೂ. ಘೋಷಣೆ ಮಾಡುವುದಕ್ಕಿಂತಲೂ ಮುಖ್ಯವಾಗಿ ರೈತರ ಹಣ ನೀಡುವ ಕೆಲಸ ಮಾಡಬೇಕು. ಈಗ ಯಾವುದೇ ಅನುದಾನ ನೀಡುವ ಮೂಲಕ ಕಮಿಷನ್ ಪಡೆಯಲು ಅಗುತ್ತಿಲ್ಲ. ಡೀಲಿಂಗ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ರೈತರ ವಿಮೆ ಹಣದ ಮೂಲಕ ಕಿಕ್ ಬ್ಯಾಕ್ ಪಡೆದುಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳನ್ನು ರೈತರು ಮಾಡುತ್ತಿದ್ದಾರೆ. ರೈತರು ಜೀತದಾಳುವಾಗಿ ಉಳಿಯಬೇಕಾ? ರಾಜ್ಯ ಸರಕಾರಕ್ಕೆ ರೈತರ ಶಾಪ ತಟ್ಟದೇ ಬಿಡದು ಎಂದು ಶಾಸಕ ಹರೀಶ್ ಪೂಂಜ ಆಕ್ರೋಶದಿಂದ ನುಡಿದರು.

ಕೋಟ್

ಬೆಳೆ ವಿಮೆ ಮೊತ್ತ ನಂಬುವಂತಿಲ್ಲ

ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿರೈತರ ಕಿವಿಗೆ ಹೂ ಇಡುವ ಪ್ರಯತ್ನ ಮಾಡಲಾಗಿದೆ. ಬೆಳೆ ವಿಮೆ ಮೊತ್ತವನ್ನು ನಂಬಿಕೊಂಡು ತೋಟಕ್ಕೆ ಗೊಬ್ಬರ ಹಾಕುವ ಕೆಲಸ ಸೇರಿದಂತೆ ಉಳಿದ ಹಣದಲ್ಲಿಮನೆ ನಿರ್ಮಾಣ, ಇತರ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎನ್ನುವ ನಂಬಿಕೆ ಈಗ ಸುಳ್ಳಾಗಿದೆ.

-ಮಾಧವ ಗೌಡ, ರೈತ, ಬೆಳ್ತಂಗಡಿ

ಟಮ್ ರ್ ಶೀಟ್ ತಿದ್ದುಪಡಿ ಅಗತ್ಯ

ರಾಜ್ಯದ ಪ್ರತಿಯೊಂದು ಜಿಲ್ಲೆಗೆ ವಿಮಾ ಕಂಪನಿಗಳ ಟೆಂಡರ್ ಕರೆಸುವ ಕೆಲಸ ಮಾಡುವ ಬದಲು ರಾಜ್ಯದಲ್ಲಿಬರೀ 7 ವಿಮಾ ಕಂಪನಿಗಳು ಮಾತ್ರ ಈಗ ಇದ್ದು, ಇದರಲ್ಲಿದಕ್ಷಿಣ ಕನ್ನಡಕ್ಕೆ ಟಾಟಾ ಎಐಜಿಗೆ ನೀಡಲಾಗಿದೆ. ಇದಕ್ಕಿಂತ ಮೊದಲು ಬೇರೆ ಕಂಪನಿಗಳಿತ್ತು. ಮುಖ್ಯವಾಗಿ ಸಮಸ್ಯೆ ಸರಿ ಹೋಗಬೇಕಾದರೆ ಟಮ್ ರ್ ಶೀಟ್ ನಲ್ಲಿತಿದ್ದುಪಡಿ ಅನಿವಾರ್ಯವಾಗಿ ಮಾಡಬೇಕಾಗುತ್ತದೆ.

-ಸುರೇಶ್ ಪೂಜಾರಿ, ಕೃಷಿಕ, ಉಜಿರೆ

ದಕದಲ್ಲಿವಿಮೆ ಯಾವುದಕ್ಕೆ ಕೊಡಬೇಕು?

ದಕ್ಷಿಣ ಕನ್ನಡದಲ್ಲಿಬಿಸಿಲು ಜಾಸ್ತಿ. ಅಡಕೆಯ ನಳ್ಳಿ ಉದುರಿದರೆ ಅದಕ್ಕೆ ವಿಮೆ ಇಲ್ಲ. ಕಡಿಮೆ ಮಳೆಯಾದರೂ ಅದಕ್ಕೂ ವಿಮೆ ಇಲ್ಲ. ಹವಾಮಾನ ವೈಪರೀತ್ಯದಿಂದ ಮಳೆ ಜಾಸ್ತಿಯಾದರೆ ಮಾತ್ರ ಅದಕ್ಕೆ ವಿಮೆ ನೀಡುವ ಕೆಲಸ ಸರಕಾರ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ.

-ಲೀಲಾವತಿ, ಕೃಷಿಕರು, ಪುತ್ತೂರು

ಪ್ರೀಮಿಯಂ ಮೊತ್ತ ಏರಿಕೆ ಪರಿಹಾರ ಇಳಿಕೆ

ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿರಾಜ್ಯ ಸರಕಾರ ರೈತರಿಗೆ ಮೋಸ ಮಾಡುತ್ತಿದೆ. ಬೆಳೆ ವಿಮೆ ಪರಿಹಾರ ಮೊತ್ತ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡುವುದು ಸರಿಯಾದ ಕ್ರಮವಲ್ಲ. ಆದರೆ ಪ್ರೀಮಿಯಂ ಮೊತ್ತವಂತೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಾ ಸಾಗುತ್ತಿದೆ.

-ಹರೀಶ್ ಕುಮಾರ್ ಕುಂಪಲ, ಕೃಷಿಕ

ಹಕ್ಕೊತ್ತಾಯ ಸಭೆಯಲ್ಲಿಕೇಳಿಬಂದ ಬೇಡಿಕೆಗಳು

*ಟಮ್ ರ್ ಶೀಟ್ ತಿದ್ದುಪಡಿ ಅಗತ್ಯ

*ದತ್ತಾಂಶದಲ್ಲಿಪಾರದರ್ಶಕತೆ ಇರಲಿ

*ಪ್ರಕರಣಗಳ ಮರುಪರಿಶೀಲನೆ ಅಗತ್ಯ

*ಪಾರದರ್ಶಕ ಟೆಂಡರ್ ಇರಲಿ

*ಸಮಯಕ್ಕೆ ಸರಿಯಾಗಿ ಪಾವತಿ ಇರಲಿ

*ಜನಪ್ರತಿನಿಧಿಗಳ ಸಭೆ ನಡೆಸಿ

ಬಾಕ್ಸ್

ಸರಕಾರ ಹಾಗೂ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ

ಹಕ್ಕೊತ್ತಾಯ ಸಭೆಯಲ್ಲಿಮುಖಂಡರು ಪ್ರಮುಖವಾಗಿ ಸರಕಾರ ಹಾಗೂ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಮುಖ್ಯವಾಗಿ ಹೆಚ್ಚುವರಿ ಪ್ರೀಮಿಯಂ ಏಕಾಯಿತು? ಒಟ್ಟು ಶೇ.35ರಷ್ಟು ಪ್ರೀಮಿಯಂ ಸಂಗ್ರಹವಾದರೂ ರೈತರಿಗೆ ಸಿಗುವ ಮೊತ್ತ ಮಾತ್ರ ಯಾಕೆ ಕಡಿಮೆಯಾಗುತ್ತಿದೆ? ದತ್ತಾಂಶಗಳನ್ನು ಮೊದಲು ಬಹಿರಂಗ ಮಾಡುವುದು ಅಗತ್ಯವಿದೆ. ಗ್ರಾಮ ಪಂಚಾಯಿತಿವಾರು ದಾಖಲಾದ ಮಳೆ, ಬೆಳೆ ನಷ್ಟ ಹಾಗೂ ನಿಗದಿಪಡಿಸಿದ ಪರಿಹಾರದ ವಿವರಗಳನ್ನು ಏಕೆ ಸಾರ್ವಜನಿಕಗೊಳಿಸಿಲ್ಲ? ವಿಮಾ ಕಂಪನಿಯ ಆಯ್ಕೆ ಹಿಂದಿನ ವರ್ಷಗಳಲ್ಲಿಆಕ್ಷೇಪಣೆಗಳಿದ್ದರೂ ಕೂಡ ಅದೇ ವಿಮಾ ಕಂಪನಿಗೆ ಟೆಂಡರ್ ಹೋಗಿದ್ದು ಹೇಗೆ? ಪ್ರೀಮಿಯಂ ಜಮೆ ವಿಳಂಬ ಸರಿ ಮಾಡುವ ಅಗತ್ಯವಿದೆ. ಕೇಂದ್ರ, ರಾಜ್ಯ ಹಾಗೂ ರೈತರ ಪ್ರೀಮಿಯಂ ಪಾಲು ನಿಯಮಿತ ಸಮಯಕ್ಕೆ ಸರಿಯಾಗಿ ಜಮೆಯಾಗುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕಿದೆ.

ಫೊಟೋಗಳು

ಅಡಕೆ ಹಾಗೂ ಇತರ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರದಲ್ಲಿಆಗಿರುವ ಅನ್ಯಾಯದ ವಿರುದ್ಧ ದ.ಕ. ಜಿಲ್ಲಾಬಿಜೆಪಿ ವತಿಯಿಂದ ನಡೆದ ಹಕ್ಕೊತ್ತಾಯ ಸಭೆ ನಡೆಯಿತು

ಹಕ್ಕೊತ್ತಾಯ ಸಭೆಯಲ್ಲಿಭಾಗವಹಿಸಿದ ಕೃಷಿಕರು, ಬಿಜೆಪಿ ಕಾರ ್ಯಕರ್ತರು.

ಹಕ್ಕೊತ್ತಾಯ ಸಭೆಯಲ್ಲಿಶಾಸಕ ಹರೀಶ್ ಪೂಂಜ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಓದಲೇ ಬೇಕಾದ ಸುದ್ದಿ