ಕೆಎಂಎಫ್ ಅಡಿಯಲ್ಲಿ ಸಾದಲಿ ಪಿಪಿಎಫ್ ಖಾಸಗಿ ಪಶುಆಹಾರ ಘಟಕದಿಂದ ತಾಲೂಕಿನ 11 ಡೇರಿಗಳಿಗೆ ಅಕ್ಟೋಬರ್ 1ರಿಂದ 9 ರವರೆಗೆ 275 ಟನ್ ಪಶು ಆಹಾರ ಸರಬರಾಜಾಗಿದ್ದು, ಇದರಲ್ಲಿಎಂ ಸ್ಯಾಂಡ್ , ಮಣ್ಣು ಮಿಶ್ರಿತವಾಗಿದ್ದು, ಕೂಡಲೇ ಸಂಬಂಧಪಟ್ಟ ಖಾಸಗಿ ಕಂಪನಿ ಮುಖ್ಯಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋಮುಲ್ ಪೂರ್ವ ಕ್ಷೇತ್ರದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಆಗ್ರಹಿಸಿದ್ದಾರೆ.ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, 11 ಡೇರಿಗಳಿಗೆ ಶಿಬಿರ ಕಚೇರಿಯ ಅಧಿಕಾರಿಗಳು ಮತ್ತು ಒಕ್ಕೂಟದ ಅಧಿಕಾರಿಗಳು ಭೇಟಿ ನೀಡಿ ಪಶು ಆಹಾರವನ್ನು ಪರಿಶೀಲಿಸಿದಾಗ ಕಲಬರಕೆಯಾಗಿದ್ದು, ದುರ್ವಾಸನೆಯಿಂದ ಕೂಡಿರುತ್ತದೆ. ಈ ಆಹಾರವನ್ನು ಸೇವಿಸಿದ ಪಶುಗಳು ನಾನಾ ಕಾಯಿಲೆಗಳಿಂದ ನರಳುವಂತಾಗಿದೆ. 1 ಟನ್ ಪಶು ಆಹಾರ 23,950 ರೂ. ಗಳಾಗಿದ್ದು ರೈತರಿಗೆ ಹೆಚ್ಚು ನಷ್ಟ ಉಂಟಾಗಿದೆ ಎಂದರು.
ಡೇರಿಗಳಿಗೆ ಸರಬರಾಜಾಗಿರುವ ಕಳಪೆ ಪಶು ಆಹಾರವನ್ನು ವಾಪಸ್ಸು ಪಡೆದು ಗುಣಮಟ್ಟದ ಪಶು ಆಹಾರವನ್ನು ಕೂಡಲೇ ಸರಬರಾಜು ಮಾಡಬೇಕೆಂದು ಕೆಎಂಎಫ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಾದಲಿ ಖಾಸಗಿ ಕಂಪನಿಗೆ ಪಶು ಆಹಾರ ತಯಾರಿಸಲು ಕೊಡದೇ ಕೋಮುಲ್ ಗೆ ನೀಡಿದರೆ ಗುಣಮಟ್ಟದ ಪಶು ಆಹಾರವನ್ನು ತಯಾರಿಸಿ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಪಶು ಆಹಾರ ತಯಾರಿಸಲು ಗುಣಮಟ್ಟದ ಪದಾರ್ಥಗಳನ್ನು ಬಳಸದೇ ಕಲಪೆ ಮಟ್ಟದ ಪದಾರ್ಥಗಳನ್ನು ಬಳಿಸಿ ಮೂಕ ಜೀವಿಗಳ ಆರೋಗ್ಯಕ್ಕೆ ತೊಂದರೆ ಮಾಡಿರುವ ಪಿಪಿಎಫ್ ಖಾಸಗಿ ಸಂಸ್ಥೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿರೈತರು ಉಗ್ರ ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕೆಲ ತಿಂಗಳ ಹಿಂದೆ ಕೊಣನಕುಂಟೆ ಪಶು ಆಹಾರ ಘಟಕದಲ್ಲಿಕಲಬರಕೆ ಪಶು ಆಹಾರ ತಯಾರಿಸಿ ಸರಬರಾಜು ಮಾಡಿರುವ ಆರೋಪ ಹೊತ್ತ 4 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅದರೆ ಪಶು ಆಹಾರ ತಯಾರಿಕೆಯಲ್ಲಿಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಇವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಕೋಮುಲ್ ಪಶ್ಚಿಮ ಕ್ಷೇತ್ರದ ನಿರ್ದೇಶಕ ಬಿ.ವಿ.ಸಾಮೇಗೌಡ, ಮುಖಂಡರಾದ ನಾಗಮಂಗಲ ಶಂಕರಪ್ಪ, ಪೊಂಬರಹಳ್ಳಿ ಮಂಜುನಾಥ್ , ವೆಂಕಟ್ರಾಮ್ , ಸದಾಶಿವ, ವಿಜಯ್ ಕುಮಾರ್ , ಮುರಳಿ ಸೇರಿದಂತೆ ವಿವಿಧ ಡೇರಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು.
9 ಎಂ.ಬಿ.ಎಲ್ ಪೋಟೋ 3 ಮುಳಬಾಗಲು ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿಕೋಮುಲ್ ಪೂರ್ವ ಕ್ಷೇತ್ರದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.