ಡಿಜಿಟಲ್ ತಂತ್ರಜ್ಞಾನ ಸಹಕಾರಿ

Contributed by: mahesh.adali@gmail.com|Vijaya Karnataka•
digital technology collaborative strategies to transform india into a developed nation
ಡಿಜಿಟಲ್ ತಂತ್ರಜ್ಞಾನ ಸಹಕಾರಿ

ವಿಕ ಸುದ್ದಿಲೋಕ ವಿಜಯಪುರ
‘‘ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಸರಕಾರಿ ಸೇವೆಗಳು, ಮಾಹಿತಿ ಮತ್ತು ನಿರ್ಧಾರಗಳನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬಹುದು’’ ಎಂದು ಹೈದರಾಬಾದ್ ನ ಆದಾಯ ತೆರಿಗೆ(ಐಆರ್ ಎಸ್ ) ಆಯುಕ್ತ ಶಹನವಾಜ್ ಉಲ್ ರೆಹಮಾನ್ ಹೇಳಿದರು.

ನಗರದ ಬಿಎಲ್ ಡಿಇ ಸಂಸ್ಥೆಯ ಎಸ್ .ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿಐಕ್ಯೂಎಸಿ, ರಾಜ್ಯಶಾಸ್ತ್ರ ವಿಭಾಗದಿಂದ ವಿಕಸಿತ್ ಭಾರತ್ 2047: ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಆಡಳಿತವನ್ನು ಪರಿವರ್ತಿಸುವುದು ಎಂಬ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ಆನ್ ಲೈನ್ ವೆಬಿನಾರ್ ನಲ್ಲಿಅವರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ್ ಎ.ಟಿ ಮಾತನಾಡಿ, ‘‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಆಡಳಿತವನ್ನು ಪರಿವರ್ತಿಸುವುದು ಅತ್ಯವಶ್ಯಕವಾಗಿದೆ. ಇ-ಆಳಿತದ ಮಹತ್ವ, ಅರಿವು ಅವಶ್ಯಕ’’ ಎಂದರು.

ವೆಬಿನಾರ್ ನಲ್ಲಿಮಿಜೋರಾಂ ವಿವಿ ಸಾರ್ವಜನಿಕ ಆಡಳಿತದ ಪ್ರಾಧ್ಯಾಪಕ ಡಾ.ಟಿ.ಸದಾಶಿವಂ ಅವರು ವಿಕಸಿತ್ ಭಾರತ್ 2047ರ ಪ್ರಮುಖ ಸ್ತಂಭಗಳು, ಹೊಸ ಸಾರ್ವಜನಿಕ ನಿರ್ವಹಣೆ, ಹೊಸ ಸಾರ್ವಜನಿಕ ಆಡಳಿತ, ಸಾರ್ವಜನಿಕ ಸೇವೆ, ಸಹಕಾರಿ ಆಡಳಿತ, ಡಿಜಿಟಲ್ ಯುಗದ ಆಡಳಿತ ಸಾಮರ್ಥ್ಯ, ಎಐ ಬಳಕೆ, ಅಭಿವೃದ್ಧಿ ಹೊಂದಿದ ಭಾರತದ ವ್ಯಾಪಾರ, ತಂತ್ರಜ್ಞಾನ ಮತ್ತು ಜಾಗತಿಕ ಕಾರ್ಯಸೂಚಿಗಳ ಬಗ್ಗೆ ವಿಚಾರಗಳನ್ನು ಮಂಡಿಸಿದರು.

ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್ .ಪಾಟೀಲ, ಎಸ್ .ಎ.ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ, ಸಂಚಾಲಕಿ ಡಾ.ತರನ್ನುಮ್ ಜಬೀನ್ ಖಾನ್ , ಪ್ರೊ.ರೂಪಾ ಮೋಟಗಿ, ಡಾ.ದಾನೇಶ್ವರಿ ಮೂಲಿಮನಿ, ಪವನ್ ಮಹೀಂದ್ರಕರ, ಮಲಿಕ್ ಎಲ್ .ಜಮಾದಾರ, ಭೀಮಸಿ ಮದರಕಂಡಿ, ಜಿ.ಎಂ.ಗೇಂಡ್ , ಸಂತೋಷ ವಂಬಾಸೆ, ವೀರೇಶ ಕುಳಗೇರಿ ಸೇರಿದಂತೆ ನಾನಾ ರಾಜ್ಯಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫೋಟೊ ಬೇಡ.....

ಓದಲೇ ಬೇಕಾದ ಸುದ್ದಿ