Drug free India Campaign Students Provide Platform To Raise Awareness Against Drugs
ನಶಾ ಮುಕ್ತ ಭಾರತ ಅಭಿಯಾನ
Contributed by: BASAVARAJU KG|Vijaya Karnataka•
ನಶಾ ಮುಕ್ತ ಭಾರತ ಅಭಿಯಾನ
ದಾವಣಗೆರೆ: ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿಶುಕ್ರವಾರ ನಶಾ ಮುಕ್ತ ಭಾರತ ಅಭಿಯಾನದ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.ಕಾಲೇಜಿನ ಇಕೋ ಕ್ಲಬ್ , ಸೈನ್ಸ್ ಕ್ಲಬ್ ಮತ್ತು ರೆಡ್ ಕ್ರಾಸ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾಚಾರ್ಯ ಡಾ. ಪ್ರಸಾದ್ ಬಂಗೇರ ಎಸ್ . ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೈಸ್ ಪ್ರಿನ್ಸಿಪಾಲ್ ಸುರೇಖಾ ಜಗದೀಶ್ ಮಾತನಾಡಿ, ‘ನಶೆ ಏರಿಸುವಂತಹ ಉತ್ಪನ್ನಗಳು ಜನರ ಕೈಗೆ ಸುಲಭವಾಗಿ ಸಿಗುತ್ತಿವೆ. ಯುವಜನತೆ ನಶೆ ಏರಿಸುವಂತಹ ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಸರಕಾರ ರೂಪಿಸುವ ಕಾನೂನುಗಳಿಂದ ಇದನ್ನು ತಡೆಗಟ್ಟುವುದು ಸಾಧ್ಯ, ಇವುಗಳಿಂದಾಗುವ ಅಪಾಯಗಳನ್ನು ನಾವೇ ಅರ್ಥಮಾಡಿಕೊಂಡು ನಶಾ ಮುಕ್ತರಾಗುವ ಮನಸ್ಸು ಮಾಡಬೇಕು, ಎಂದು ತಿಳಿಸಿದರು.
ಇದೇ ವೇಳೆ ಕಾಲೇಜು ಆವರಣದಲ್ಲಿಸಸಿ ನೆಡಲಾಯಿತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಕಥಾನ್ ನಡೆಸಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ನಶಾ ಮುಕ್ತ ಭಾರತ ಅಭಿಯಾನದ ಮಹತ್ವ ತಿಳಿಸಿದರು. ಉಪನ್ಯಾಸಕ ಡಿ.ಆರ್ .ರವಿ ಪ್ರತಿಜ್ಞಾ ವಿಧಿ ಬೋಧಿಸಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್ .ಆರ್ .ಸಿದ್ದೇಶ್ ಇತರರಿದ್ದರು.
--
9 ಡಿವಿಜಿ ಎಂಬಿಪಿಯು
ದಾವಣಗೆರೆಯ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿಶುಕ್ರವಾರ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಕಥಾನ್ ನಡೆಸಿದರು.