68ನೇ ಕುಂಬಳೆ ಉಪಜಿಲ್ಲಾ ಶಾಲಾ ಕ್ರೀಡಾಕೂಟದ ಅಂಗವಾಗಿ ಕೇರಳ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಷನ್ (ಕೆ.ಎಚ್ .ಆರ್ .ಎ.) ಕುಂಬಳೆ ಯೂನಿಟ್ ವತಿಯಿಂದ ಧನಸಹಾಯವನ್ನು ನೀಡಲಾಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉಪಸ್ಥಿತಿಯಲ್ಲಿ, ಕುಂಬಳೆ ಪಂಚಾಯಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ರಿಗೆ ಕೆ.ಎಚ್ .ಆರ್ .ಎ. ಕುಂಬಳೆ ಘಟಕ ಸಲಹಾ ಸಮಿತಿ ಅಧ್ಯಕ್ಷ ಎನ್ . ಅಬ್ದುಲ್ಲಾತಾಜ್ ಧನ ಸಹಾಯವನ್ನು ಹಸ್ತಾಂತರಿಸಿದರು. ಕುಂಬಳೆ ಘಟಕ ಅಧ್ಯಕ್ಷ ಸಿದ್ದಿಕ್ ಮುಬಾರಕ್ , ಉಪಾಧ್ಯಕ್ಷ ರಾಮ ಭಟ್ ಗೋಕುಲ, ಕಾರ ್ಯದರ್ಶಿ ಸವಾದ್ ತಾಜ್ , ಕೋಶಾಧಿಕಾರಿ ಚರಣ್ ಅನ್ನಪೂರ್ಣ, ಹೈದರ್ ಈಟ್ ಮೊರ್ ಕೆಫೆ ಮತ್ತಿತರರು ಉಪಸ್ಥಿತರಿದ್ದರು.