ಚೆಯ್ಯಂಡಾಣೆಯಲ್ಲಿಪೋಷಣ ಅಭಿಯಾನ

Contributed by: knamana4@gmail.com|Vijaya Karnataka•
nutrition campaign in cheyyandane health and food awareness program
ವಿಕ ಸುದ್ದಿಲೋಕ ವಿರಾಜಪೇಟೆ

ಚೆಯ್ಯಂಡಾಣೆಯ ಸ್ಥಳೀಯ ಅಂಗನವಾಡಿ ಕೇಂದ್ರದ ವತಿಯಿಂದ ಪೋಷಣ್ ಅಭಿಯಾನ, ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿನಡೆಯಿತು.
ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ದೇವಕ್ಕಿ ಅವರ ಅಧ್ಯಕ್ಷತೆಯಲ್ಲಿನಡೆದ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ತಾರಾಮಣಿ ಮಾತನಾಡಿ, ಮನೆಯ ಕೈತೋಟಗಳಲ್ಲಿಯಾವುದೇ ಕೀಟನಾಶಕಗಳನ್ನು ಬಳಸದೆ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಸಿ, ಪೋಷಕಾಂಶಯುಕ್ತ ಸಮತೋಲನ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಆಶಾ ಕಾರ್ಯಕರ್ತೆಯರಾದ ರೋಹಿಣಿ ಹಾಗೂ ಸುಮಿತ್ರ ಮಾತನಾಡಿ, ನಾನಾ ಬಗೆಯ ಸೊಪುತ್ರ್ಪ, ತರಕಾರಿ, ಧಾನ್ಯಗಳು ಹಾಗೂ ಹಣ್ಣುಗಳಲ್ಲಿರುವ ಜೀವಸತ್ವಗಳು ಉತ್ತಮ ಆರೋಗ್ಯಕ್ಕೆ ಪೂರಕವಾಗಿವೆ. ಮಹಿಳೆಯರು ವೈಯಕ್ತಿಕ ಸ್ವಚ್ಛತೆ ಹಾಗೂ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ಮಾಹಿತಿ ನೀಡಿದರು.

ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ತಾರಾಮಣಿ, ಆಶಾ ಕಾರ್ಯಕರ್ತೆಯರಾದ ರೋಹಿಣಿ, ಸುಮಿತ್ರ ಹಾಗೂ ರಾಜೇಶ್ವರಿ, ಸಂಜೀವಿನಿ ಒಕ್ಕೂಟದ ಎಂಬಿಕೆ ವಸಂತಿ, ಎಲ್ ಸಿಆರ್ ಪಿ ನಳಿನಿ, ಕೃಷಿಸಖಿ ಅಂಬಿಕಾ, ಪಶುಸಖಿ ಮೀನಾಕ್ಷಿ, ಸಿಆರ್ ಪಿ-ಇಪಿ ಭವ್ಯ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಮಹಿಳೆಯರು ಇದ್ದರು.

ಪೊಟೊ:ಎಂಡಿಕೆ09ವಿಪಿಟಿ03ಎ:

ಚೆಯ್ಯಂಡಾಣೆಯ ಸ್ಥಳೀಯ ಅಂಗನವಾಡಿ ಕೇಂದ್ರದ ವತಿಯಿಂದ ಪೋಷಣ್ ಅಭಿಯಾನ, ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿನಡೆಯಿತು.

ಓದಲೇ ಬೇಕಾದ ಸುದ್ದಿ