ವಿದ್ಯಾರ್ಥಿಗಳಿಂದ ಬೀಜಬಿತ್ತನೆ ಕಾರ್ಯಕ್ರಮ

Contributed by: channamadegowda21@gmail.com|Vijaya Karnataka•
seed planting event by students successful
ಪಾಂಡವಪುರ : ತಾಲೂಕಿನ ಕಣಿವೆಕೊಪ್ಪಲು ಅರಣ್ಯ ಪ್ರದೇಶದಲ್ಲಿವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಚಿನಕುರಳಿ ಗ್ರಾಮದ ಎಸ್ ಟಿಜಿ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಬೀಜಬಿತ್ತನೆ ಕಾರ್ಯಕ್ರಮ ನಡೆಸಿದರು.

ಬೀಜಬಿತ್ತನೆ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಮಂಡ್ಯ ಟೆರಿಟೋರಿಯಲ್ ವಿಭಾಗದ ಡಿಸಿಎಫ್ ಡಿ.ರಘು, ಪ್ರಾಂಶುಪಾಲ ಡಾ. ನಿಶಾಂತ್ ಎ ನಾಯ್ಡು ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿಎಸ್ ಟಿಜಿ ಪ್ರಥಮ ದರ್ಜೆ ಕಾಲೇಜಿನ ಹಲವಾರು ಎನ್ ಎಸ್ ಎಸ್ ವಿದ್ಯಾರ್ಥಿಗಳು ಬೀಜಬಿತ್ತನೆ ಕಾರ್ಯನಡೆಸಿದರು.
ಅಂದಾಜು 200ಕ್ಕೂ ಅಧಿಕ ಬೀಜ ಬಿತ್ತನೆ ನಡೆಸಿದರು. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ರೀಲ್ಸ್ ಪೋಸ್ಟ್ ಮೇಕರ್ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಿ ಪರಿಸರ ಬಗ್ಗೆ ಅರಿವು ಮೂಡಿಸುವ ಜತೆಗೆ ಉತ್ತಮ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಡಿಸಿಎಫ್ ಡಿ.ರಘು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಸರ ಬಗ್ಗೆ ಕಾಳಜಿ ವಹಿಸಬೇಕು, ಪರಿಸರ ಸಂರಕ್ಷಣೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಎಸ್ ಟಿಜಿ ಶಿಕ್ಷಣ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಎನ್ ಎಸ್ ಎಸ್ ಘಟಕ ಅಧಿ ಕಾರಿ ಡಾ. ಶ್ರೀಧರ ಸೇರಿದಂತೆ ಹಲವರು ಹಾಜರಿದ್ದರು.

ಓದಲೇ ಬೇಕಾದ ಸುದ್ದಿ