ವಿಕ ಸುದ್ದಿಲೋಕ ಹನುಮಸಾಗರ ಪಟ್ಟಣದ ಬೆಟ್ಟದ ಮೇಲಿನ ಲಕ್ಷಿತ್ರ್ಮವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.11ರಿಂದ ಅ.23ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಭೂವರಾಹ ದೇವರ ಅರ್ಚನೆ, ಪಂಚಾಮೃತ ಅಭಿಷೇಕ, ಶ್ರೀನಿವಾಸ ಕಲ್ಯಾಣ ಪ್ರವಚನ, ಕನಕಾಭಿಷೇಕ, ಪುಷ್ಪಾರ್ಚನೆ, ಮಧ್ಯಾಹ್ನ ಮಹಾ ಮಂಗಳಾರತಿ, ನೈವೇದ್ಯ ಮತ್ತು ತೀರ್ಥ ಪ್ರಸಾದ, ಸಂಜೆ ಭಜನೆ, ನಾನಾ ಉತ್ಸವಗಳು, ತೊಟ್ಟಿಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ರಾತ್ರಿ ಏಕಾಂತ ಸೇವೆ, ಸರ್ವಕರ್ಮ ಸಮರ್ಪಣೆ ನಡೆಯಲಿದೆ. ಅ.11ರಂದು ಬೆಳಗ್ಗೆ ನಂದಾದೀಪ, ಕಲಶ ಸ್ಥಾಪನೆ ಮತ್ತು ಧಾನ್ಯ ಲಕ್ಷಿತ್ರ್ಮ ಪೂಜಾ, ಅ.12 ರಂದು ಅಂಕುರಾರ್ಪಣ, ಧ್ವಜಾರೋಹಣ, ಸಂಜೆ ಶೇಷವಾಹನ ಉತ್ಸವ, ಅ.13 ರಂದು ಹಂಸವಾಹನ ಉತ್ಸವ, ಅ.14 ರಂದು ಹನುಮದ್ವಾಹನ, ಅ.15ರಂದು ಕಲ್ಯಾಣೋತ್ಸವ ಮತ್ತು ಸಂಜೆ ಗರುಡೋತ್ಸವ, ಅ.16 ರಂದು ಅಶ್ವವಾಹನ, ಅ.17 ರಂದು ಗಜವಾಹನ, ಅ.18 ಸಂಜೆ ಪಲ್ಲಕ್ಕಿ ಉತ್ಸವ, ಅ.19 ಬೆಳಗ್ಗೆ ರಥಾಂಗ ಹೋಮ, ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಬ್ರಹ್ಮ ರಥೋತ್ಸವ, ಅ.20 ವಿಜಯದಶಮಿ ನಿಮಿತ್ತ ಶಮಿಪೂಜೆ, ಅವಭೃತ ಸ್ನಾನ, ಪಟ್ಟಣದಲ್ಲಿಪ್ರದಕ್ಷಿಣೆ, ಅ.23, ದ್ವಾದಶಿಯಂದು ಸಂಪ್ರೋಕ್ಷಣ ರೂಪ ಅಭಿಷೇಕ, ಹೀಗೆ ನಾನಾ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
---
ಕೆಪಿಎಲ್ 8ಎಚ್ ಎಸ್ ಆರ್ ಫೋಟೊ1: ಹನುಮಸಾಗರದ ಶ್ರೀಲಕ್ಷಿತ್ರ್ಮವೆಂಕಟೇಶ್ವರ ಮೂರ್ತಿ.