ದೇವಿಯ ಚಿನ್ನದ ಸರ ಕಳ್ಳತನ

Contributed by: skj2022vk@gmail.com|Vijaya Karnataka•
theft of gold necklace at sangameshwara temple
ದೇವಿಯ ಚಿನ್ನದ ಸರ ಕಳ್ಳತನ

ಸಿಂದಗಿ: ನಗರದ ಸಂಗಮೇಶ್ವರ ದೇವಸ್ಥಾನದ ಬಳಿಯ ಅಂಬಾಭವಾನಿ ದೇವಾಲಯದ ಬಾಗಿಲು ಬೀಗ ಮುರಿದು ಮೂರ್ತಿಯ ಕೊರಳಲ್ಲಿದ್ದ ಅಂದಾಜು 1.5 ಲಕ್ಷ ರೂ. ಮೌಲ್ಯದ ಬಂಗಾರದ ಎರಡು ತಾಳಿ ಸರಗಳನ್ನು ಕಳ್ಳರು ದೋಚಿದ್ದಾರೆ.
‘‘ಶುಕ್ರವಾರ ಬೆಳಗಿನ ಜಾವ ಕಳ್ಳತನ ನಡೆದಿರಬಹುದು. ದೇವಸ್ಥಾನದಲ್ಲಿಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ದೇವಸ್ಥಾನ ಕಮೀಟಿ ಸದಸ್ಯ ರಾಜು ಬೋರಗಿ ತಿಳಿಸಿದ್ದಾರೆ. ಸಂಗಮೇಶ್ವರ ದೇವಸ್ಥಾನ ಬಳಿ ಮಲಗುವವರ ಸಂಖ್ಯೆ ಹೆಚ್ಚಾಗಿದೆ. ಅಂತಹವರಿಂದಲೇ ಈ ಕೃತ್ಯ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

09ಎಸ್ .ಎನ್ .ಡಿ02

ಸಿಂದಗಿ ಅಂಬಾಭವಾನಿ ದೇವಸ್ಥಾನದ ಬಾಗಿಲು ಬೀಗ ಒಡೆದಿರುವುದು.

ಓದಲೇ ಬೇಕಾದ ಸುದ್ದಿ