ವಿಶ್ವ ದೃಷ್ಟಿ ದಿನಾಚರಣೆ

Contributed by: mandalamari84@gmail.com|Vijaya Karnataka•
world sight day celebration the importance of vision and health
ವಿಶ್ವ ದೃಷ್ಟಿ ದಿನಾಚರಣೆ

ತಾವರಗೇರಾ: ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಯಿಂದ ವಿಶ್ವದೃಷ್ಟಿ ದಿನ ಆಚರಿಸಲಾಯಿತು.

ನೇತ್ರಾಧಿಕಾರಿ ಡಾ.ಗುರುದೇವಿ ಮಾತನಾಡಿ, ‘‘ದೃಷ್ಟಿ ಎಂದರೆ ಕೇವಲ ನೋಡುವ ಸಾಮರ್ಥ್ಯವಲ್ಲಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಅದು ಕಲಿಯುವ, ಕೆಲಸ ಮಾಡುವ, ಸಂವಹನ ನಡೆಸುವ, ಸ್ವತಂತ್ರವಾಗಿ ಚಲಿಸುವ ಮತ್ತು ಜೀವನವನ್ನು ಆನಂದಿಸುವ ಸಾಮರ್ಥ್ಯವಾಗಿದೆ,’’ ಎಂದರು.

ದೃಷ್ಟಿ ಹೀನತೆಗೆ ಅಥವಾ ದೃಷ್ಟಿ ದೋಷಕ್ಕೆ ಕಾರಣವಾಗುವ ಅನೇಕ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮೂಲಕ ತಡೆಯಬಹುದು,’’ ಎಂದರು. ವೈದ್ಯಾಧಿಕಾರಿ ಡಾ.ಪೂರ್ಣಿಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಭಾರತಿ, ಆಪ್ತ ಸಮಾಲೋಚಕ ಅರುಣ ಕುಮಾರ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸೀತಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಾವಿತ್ರಿ, ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.

---

8 ಟಿವಿಜಿ ಪಿ1

ತಾವರಗೇರಾ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವದೃಷ್ಟಿ ದಿನ ಆಚರಿಸಲಾಯಿತು.

ಓದಲೇ ಬೇಕಾದ ಸುದ್ದಿ