ವಿಕ ಸುದ್ದಿಲೋಕ ರಾಣೇಬೆನ್ನೂರನಿಮ್ಮ ಮತಗಳಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿಅಧಿಕಾರಕ್ಕೆ ಬಂದು ಸರಕಾರ ರಚನೆಯಾಯಿತು ಎನ್ನುತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉರ್ದು ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ ಎಂದು ಜಿಲ್ಲಾಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ.ಎನ್ . ಪಾಟೀಲ ಆರೋಪಿಸಿದರು.
ನಗರದ ಆಂಗ್ಲೋ-ಉರ್ದು ಹೈಸ್ಕೂಲ್ ಆವರಣದಲ್ಲಿಭಾನುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಚುನಾವಣೆ ನೀತಿಸಂಹಿತೆಯಿಂದ ಸರಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲು ಆಗಲಾರದು. ಆದ್ದರಿಂದ ಶಿಕ್ಷಕರ ನೇಮಕಾತಿ ನೋಟಿಫಿಕೇಶನ್ ಒಂದು ವಾರ ಕಾಲ ಮುಂದೂಡಿ 4 ಸಾವಿರ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿಅವಕಾಶ ಕಲ್ಪಿಸಿಕೊಡಬೇಕು. ಕಾಂಗ್ರೆಸ್ ಗೆ ಚುನಾವಣೆಯಲ್ಲಿಸಂಪೂರ್ಣ ಸಹಕಾರ ಹಾಗೂ ಸಹಾಯ ನೀಡಿದ ಮುಸ್ಲಿಂ ಸಮಾಜದ ಋುಣ ತೀರಿಸುವಂತೆ ಆಗ್ರಹಿಸಿದರು. ಮೌಲಾನಾ ಆಜಾದ ಶಾಲೆಗಳನ್ನು ಸ್ಥಾಪಿಸುತ್ತಿರುವ ಸರಕಾರದ ನೀತಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುವುದೇ ಆಗಿದೆ. ಜಿಲ್ಲೆಯಲ್ಲಿಹುಟ್ಟಿದ ಈ ಹೋರಾಟ ರಾಜ್ಯಾದ್ಯಂತ ವಿಸ್ತರಿಸಲಿದೆ ’’ಎಂದರು.
ಹಾನಗಲ್ ಅಂಜುಮನ್ ಸಂಸ್ಥೆ ಅಧ್ಯಕ್ಷ ನಜೀರ್ ಅಹ್ಮದ್ ಸವಣೂರ ಮಾತನಾಡಿ, ‘‘ಹಿಂದಿನ ಸರಕಾರಗಳು ಶಿಕ್ಷಕರ ಭರ್ತಿ ಮಾಡುವಾಗ ಎಲ್ಲಮಾಧ್ಯಮಗಳಿಗೂ ಆದ್ಯತೆ ನೀಡುತ್ತಿದ್ದವು. ಆದರೆ ಕಾಂಗ್ರೆಸ್ ಸರಕಾರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ನೇಮಕಾತಿಗೆ ಹೊರಡಿಸಿರುವ ಪ್ರಕಟಣೆಯನ್ನು ಮುಂದಕ್ಕೆ ಹಾಕಬೇಕು. ಅ.26ರೊಳಗೆ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಜಿಲ್ಲೆಯ ಎಲ್ಲತಾಲೂಕುಗಳ ಅಂಜುಮನ್ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಹಾವೇರಿಯಲ್ಲಿಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು’’ ಎಂದರು.