ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್ . ಕಾಗಲ್ ಹೇಳಿದರು.ಖನಗಾಂವ ಗ್ರಾಮದ ಶ್ರೀ ಖನ್ನಮ್ಮ ದೇವಿ ದೇವಸ್ಥಾನದಲ್ಲಿನವರಾತ್ರಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರದ ಧಾರ್ಮಿಕ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ‘‘ಎಂಟೂರಿನ ಆರಾಧ್ಯ ದೇವಿ ಶ್ರೀ ಖನ್ನಮ್ಮ ದೇವಿ ಮಹಿಮೆ ಅಪಾರ’’, ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ದೇವಿಯ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಭಕ್ತಾದಿಗಳಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ರಾತ್ರಿ 8ಕ್ಕೆ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಮದ್ದು ಹಾರಿಸಲಾಯಿತು.
ಸೋಮವಾರ ಬೆಳಗ್ಗೆ ಖನ್ನಮ್ಮ ದೇವಿ ದೇವಸ್ಥಾನದಿಂದ ದೇವಿ ಗದ್ದುಗೆ ಮಂದಿರಕ್ಕೆ ಪಲ್ಲಕ್ಕಿ ಬೀಳ್ಕೊಡುವ ಮೂಲಕ ಜಾತ್ರೆ ಸಂಪನ್ನಗೊಂಡಿತು. ದೇವಸ್ಥಾನ ಕಮಿಟಿ ಅಧ್ಯಕ್ಷ ಸಂತೋಷ ನಾಯಕ, ಭೀಮಗೌಡ ಪೊಲೀಸಗೌಡರ, ಸುರೇಶ ಸನದಿ, ಮಡ್ಡೆಪ್ಪ ತೋಳಿನವರ, ಸುರೇಶ ನಾಯಕ, ಶಂಕರ ನಾಯಕ, ಸಿದ್ದಪ್ಪ ದೇಸಾಯಿ, ಸಿದ್ದಗೌಡ್ರ ಪಾಟೀಲ, ರಾಮಪ್ಪ ಡಬ್ಬನವರ, ಶಿವಾನಂದ ಪಾಟೀಲ, ಶಂಕರ ಗುಡದೆನ್ನವರ, ಖನ್ನಪ್ಪ ಗುಡದೆನ್ನವರ ಮತ್ತಿತರರು ಪಾಲ್ಗೊಂಡಿದ್ದರು.
ಫೋಟೊ:
(19 ಮಮದಾಪುರ 1): ಖನಗಾಂವ ಗ್ರಾಮದಲ್ಲಿಶ್ರೀ ಖನ್ನಮ್ಮ ದೇವಿ ಪಲ್ಲಕ್ಕಿ ಉತ್ಸವ ನೆರವೇರಿತು.