‘ರಾಜ್ಯೋತ್ಸವ ಆಚರಣೆ ಸಿದ್ಧತೆಗೆ ಸೂಚನೆ

Contributed by: nagendrappa976@gmail.com|Vijaya Karnataka•
state festival 2023 preparation for celebration in harpanahalli
‘ರಾಜ್ಯೋತ್ಸವ ಆಚರಣೆ ಸಿದ್ಧತೆಗೆ ಸೂಚನೆ

ವಿಕ ಸುದ್ದಿಲೋಕ ಹರಪನಹಳ್ಳಿ
‘‘ನಾಡು, ನುಡಿ, ನೆಲ, ಜಲ ರಕ್ಷಣೆಗೆ ಹೋರಾಡಿದ ಮಹನೀಯರನ್ನು ಗೌರವಿಸಿ ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಬೇಕು,’’ ಎಂದು ರಾಷ್ಟಿ್ರೕಯ ಹಬ್ಬಗಳ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಗಿರೀಶ್ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ನವೆಂಬರ್ 1 ರಂದು ಬೆಳಗ್ಗೆ 9ಕ್ಕೆ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಜೂನಿಯರ್ ಕಾಲೇಜುವರೆಗೆ ನಾನಾ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಬೇಕು ಎಂದು ಸೂಚಿಸಿದರು.

ಸಾಧಕರಿಗೆ ಸನ್ಮಾನ:

‘‘ಮೆರವಣಿಗೆಯಲ್ಲಿಎಲ್ಲಇಲಾಖೆ ಅಧಿಕಾರಿಗಳು, ಶಾಲೆಗಳ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕಾರ್ಯಕ್ರಮ ಉದ್ಘಾಟಿಸುವರು. ನಂತರ ಉಪನ್ಯಾಸ ಹಾಗೂ ಹೆಚ್ಚು ಅಂಕ ತೆಗೆದ ಮಕ್ಕಳಿಗೆ ಗೌರವ ಹಾಗೂ ಕನ್ನಡಪರ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು,’’ ಎಂದರು.

ತಾಪಂ ಇಒ ವೈ.ಎಚ್ . ಚಂದ್ರಶೇಖರ್ , ನಗರಸಭೆ ಪೌರಾಯುಕ್ತೆ ರೇಣುಕಾ ದೇಸಾಯಿ, ಪಶು ಇಲಾಖೆಯ ರವಿರಾಜ್ , ಪರಿಶಿಷ್ಟ ವರ್ಗಗಳ ಇಲಾಖೆಯ ಇಬ್ರಾಹಿಂ, ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿರೂಪಾಕ್ಷಗೌಡ, ನಗರಸಭೆ ಆರೋಗ್ಯಾಧಿಕಾರಿ ಶೋಭಾ ತಳವಾರ್ , ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ಅರಣ್ಯ ಇಲಾಖೆ ದುರುಗಪ್ಪ, ಉಪ ವಲಯ ಅರಣ್ಯ ಇಲಾಖೆಯ ದೀಪಿಕಾ, ಡಿಎಸ್ ಎಸ್ ಭೀಮವಾದ ಸಂಘಟನೆ ಅಧ್ಯಕ್ಷ ಕೆ.ಸುಭಾಷ್ , ಕಸಾಪ ಅಧ್ಯಕ್ಷ ಉಚ್ಚೆಂಗೆಪ್ಪ, ಕರವೇ ಅಧ್ಯಕ್ಷ ಗಿರಜ್ಜಿ ನಾಗರಾಜ, ಕರವೇ ಪದಾಧಿಕಾರಿಗಳಾದ ಅಶೋಕ್ ನೀಲಗುಂದ, ರುದ್ರಗೌಡ, ಟಿ.ಮಂಜಪ್ಪ ಇದ್ದರು.

19,ಹೆಚ್ .ಆರ್ .ಪಿ.05- ಹರಪನಹಳ್ಳಿಯ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿಸೋಮವಾರ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು.

ಓದಲೇ ಬೇಕಾದ ಸುದ್ದಿ