ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲು ಮನವಿವಿಕ ಸುದ್ದಿಲೋಕ ಹಾವೇರಿ
ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು ಗೆಲ್ಲಿಸುವ ಮೂಲಕ ಕಳೆದ ಮೂರು ಚುನಾವಣೆಗಳಿಂದ ಕೈತಪ್ಪಿರುವ ಕ್ಷೇತ್ರವನ್ನು ಮರಳಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಗದಗ ಶಾಸಕ ಎಚ್ .ಕೆ. ಪಾಟೀಲ ಮನವಿ ಮಾಡಿದರು.
ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಪಶ್ಚಿಮ ಪದವೀಧರ ಮತಕ್ಷೇತ್ರವು ವಿಶೇಷ ಪ್ರಾಮುಖ್ಯತೆ ಹೊಂದಿದೆ. 2008ರವರೆಗೆ 24 ವರ್ಷಗಳ ಕಾಲ ಈ ಕ್ಷೇತ್ರ ಕಾಂಗ್ರೆಸ್ ಮಡಿಲಿನಲ್ಲಿತ್ತು. ಆದರೆ, ಕಳೆದ ಮೂರು ಚುನಾವಣೆಗಳಲ್ಲಿಬಿಜೆಪಿ ಪಾಲಾಗಿದೆ. ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಪ್ರಾತಿನಿಧ್ಯ ಮರಳಿ ಪಡೆಯಬೇಕಿದೆ’’ ಎಂದರು.
ಕಾಂಗ್ರೆಸ್ ನತ್ತ ಜೆನ್ ಜೀ ಒಲವು: ‘‘ಯುವಜನರಲ್ಲಿವಿಶೇಷವಾಗಿ ಹೊಸ ತಲೆಮಾರಿನವರಲ್ಲಿಬಿಜೆಪಿ ಆಡಳಿತದ ಬಗ್ಗೆ ಅಸಮಾಧಾನ ಮೂಡಿದೆ. ದೇಶದಲ್ಲಿನಿರೀಕ್ಷಿತ ಅಭಿವೃದ್ಧಿ ನಡೆಯುತ್ತಿಲ್ಲಎಂಬ ಭಾವನೆ ಇದೆ. ಪ್ರಜಾಪ್ರಭುತ್ವ ಉಳಿಸಿ ಬೆಳೆಸುವ ಆಶಯ ಹೊಂದಿರುವ ಯುವಜನರು ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ ’’ಎಂದರು.
‘‘ಇತ್ತೀಚಿನ ದಿನಗಳಲ್ಲಿಸ್ಟಿಂಗ್ ಎಂಬ ಪದವೇ ಅಸಹ್ಯಕರ ಅರ್ಥ ಪಡೆದುಕೊಳ್ಳುತ್ತಿದೆ. ಇನ್ನೊಬ್ಬರ ದೌರ್ಬಲ್ಯ ದುರುಪಯೋಗಪಡಿಸಿಕೊಳ್ಳುವುದು ಶೋಷಣೆ ಮಾಡುವುದು ಹಾಗೂ ನಾಯಕರ ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಸುವುದು ವಿಷಾದನೀಯ.ಇಂತಹ ಘಟನೆಗಳು ನಡೆದಿರುವುದು ಖಂಡನೀಯ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂಬುದು ನಮ್ಮ ನಿಲುವು’’ ಎಂದು ಎಚ್ಕೆ ತಿಳಿಸಿದರು.
ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಪ್ರಭುಗೌಡ ಬಿಷ್ಟನಗೌಡ್ರ, ಎಂ.ಎಂ. ಹಿರೇಮಠ, ರಾಜು ಕುನ್ನೂರ, ಗುಡ್ಡನಗೌಡ ಅಂದಾನಿಗೌಡ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.