(ನೋಡಿದೆ)ದಸರಾದಲ್ಲಿಕಂಬಳ ಬೇಡ: ಸಿಎಂಗೆ ಸಲಹೆ ನೀಡಲು ಸುತ್ತೂರು ಶ್ರೀಗೆ ಮನವಿ

Contributed byharisha.lakshmipathy@timesgroup.com|Vijaya Karnataka
request for shri shivaratri deshikendra swamiji to advise cm to cancel dasara kambala
ದಸರಾದಲ್ಲಿಕಂಬಳ ಬೇಡ: ಸಿಎಂಗೆ

ಸಲಹೆ ನೀಡಲು ಸುತ್ತೂರು ಶ್ರೀಗೆ ಮನವಿ
ವಿಕ ಸುದ್ದಿಲೋಕ ಮೈಸೂರು

‘ಪರಿಸರಕ್ಕಾಗಿ ನಾವು’ ಸಂಘಟನೆಯ ನಿಯೋಗದ ಸದಸ್ಯರು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ಭೇಟಿಯಾಗಿ, ದಸರಾ ಹಬ್ಬದಲ್ಲಿಕಂಬಳ ಆಯೋಜನೆ ರದ್ದುಪಡಿಸುವಂತೆ ಮುಖ್ಯ ಮಂತ್ರಿಗಳಿಗೆ ಸಲಹೆ ನೀಡಲು ಮನವಿ ಪತ್ರ ಸಲ್ಲಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಎ.ಟಿ.ರಾಮಸ್ವಾಮಿಯವರ ನೇತೃತ್ವದಲ್ಲಿಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸದಸ್ಯರು, ಕಂಬಳ ಆಯೋಜನೆ ರದ್ದು ಮಾಡುವ ಸಂಬಂಧ ಸಿಎಂ ಅವರಿಗೆ ಸಲಹೆ ನೀಡುವಂತೆ ಕೋರಿದರು.

‘‘ಈ ಹಿಂದೆ ತಿ.ನರಸೀಪುರ ರೇಷ್ಮೆ ಕಾರ್ಖಾನೆ ಆವರಣದಲ್ಲಿಕ್ರೀಡಾಂಗಣ ಮಾಡುವ ಯೋಜನೆಯನ್ನು ಸರಕಾರ ರದ್ದು ಪಡಿಸಲು ಸಹಾಯ ಮಾಡಿದಂತೆ, ಕಂಬಳ ಆಯೋಜನೆ ರದ್ದುಪಡಿಸಲು ಕೂಡ ಸಹಾಯ ಮಾಡಬೇಕು,’’ ಎಂದು ವಿನಂತಿಸಲಾಯಿತು.

ತೋಟಗಾರಿಕೆ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ರಾಮಕೃಷ್ಣ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ, ಕೆ.ಜಿ.ಗುರುಸ್ವಾಮಿ ಮತ್ತು ದರ್ಶನ್ ಆಲೂರು ಇದ್ದರು.

ಪೊಟೋ ಇದೆ