**(ಸ್ಟೋರಿ-ಕ್ರೀಡಾಂಗಣ: ಕೊಡಿ ಗಮನ ಅಭಿಯಾನ) ಕುಂಬಳೆ ಜಿಎಸ್ ಬಿಎಸ್ ಕ್ರೀಡಾಂಗಣಕ್ಕೆ ಬೇಕು ಕಾಯಕಲ್ಪ ಐತಿಹಾಸಿಕ ಮೈದಾನದಲ್ಲಿಸೂಕ್ತ ನಿರ್ವಹಣೆ, ಮೂಲಸೌಕರ್ಯ ಕೊರತೆ

Contributed byshreemolu.93@gmail.com|Vijaya Karnataka
Vijay Karnataka
ಭಾಗ್ಯಶ್ರೀ ಸಿ.ಕುಂಬಳೆ

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಕುಂಬಳೆ ಸರಕಾರಿ ಹಿರಿಯ ಬುನಾದಿ ಶಾಲೆ(ಜಿಎಸ್ ಬಿಎಸ್ )ಯ ಕ್ರೀಡಾ ಮೈದಾನ ದೀರ್ಘಕಾಲದಿಂದ ಫುಟ್ಬಾಲ್ , ವಿವಿಧ ಪಂದ್ಯಾವಳಿಗಳು ಹಾಗೂ ಕುಂಬಳೆ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಆದರೆ ಇಷ್ಟೆಲ್ಲಮಹತ್ವವಿರುವ ಈ ಕ್ರೀಡಾಂಗಣ ಇಂದು ಸೂಕ್ತ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಕಂಗೆಟ್ಟಿದೆ.

ಕ್ರೀಡಾಂಗಣ ನವೀಕರಿಸುವ ಸಲುವಾಗಿ ಆವರಣ ಗೋಡೆ, ಅತ್ಯುತ್ತಮ ಪೆವಿಲಿಯನ್ ಹಾಗೂ ರಾತ್ರಿ ವೇಳೆಯ ಪಂದ್ಯಾವಳಿಗಳಿಗೆ ಅನುಕೂಲವಾಗುವಂತೆ ಅತ್ಯುತ್ತಮ ಬೆಳಕಿನ ಸೌಕರ್ಯ(ಫ್ಲಡ್ ಲೈಟ್ ) ಕಲ್ಪಿಸಿ ಪುನರುಜ್ಜೀವನಗೊಳಿಸಬೇಕು ಎಂಬ ಪ್ರಮುಖ ಬೇಡಿಕೆ ಬಹಳ ದಿನಗಳಿಂದ ಇದೆ. ಈ ಕುರಿತು ಕಳೆದ ವರ್ಷ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಶಾಸಕ ಎ.ಕೆ.ಎಂ.ಅಶ್ರಫ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಶಾಸಕರು ಕ್ರೀಡಾಂಗಣದ ನವೀಕರಣದ ಭರವಸೆ ನೀಡಿದ್ದರಾದರೂ, ಈವರೆಗೆ ಯಾವುದೇ ಕಾಮಗಾರಿ ಆರಂಭವಾಗದೆ ಕೇವಲ ಭರವಸೆಯಾಗಿಯೇ ಉಳಿದಿದೆ.

ಮೈದಾನದ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರೆ, ಕ್ರೀಡಾಂಗಣದ ಸುತ್ತ ರಕ್ಷಣೆ ಇಲ್ಲ. ಫ್ಲಡ್ ಲೈಟ್ ಅಳವಡಿಸುವುದರಿಂದ ಸಂಜೆ ಮತ್ತು ರಾತ್ರಿ ವೇಳೆ ಟೂರ್ನಮೆಂಟ್ ಗಳನ್ನು ಯಶಸ್ವಿಯಾಗಿ ನಡೆಸಬಹುದು. ಅಲ್ಲದೆ, ಕಣ್ಣೂರು ಸ್ಟೇಡಿಯಂ ಮಾದರಿಯಲ್ಲಿಮೈದಾನದ ಒಂದು ಭಾಗದಲ್ಲಿವಾಣಿಜ್ಯ ಮಳಿಗೆಗಳು(ಶಾಪಿಂಗ್ ಕಾಂಪ್ಲೆಕ್ಸ್ ) ಹಾಗೂ ಸುಸಜ್ಜಿತ ಗ್ಯಾಲರಿ ನಿರ್ಮಿಸಿ, ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದರೆ ಇದು ಶಾಲೆಗೆ ಮತ್ತು ಸ್ಥಳೀಯ ಸಂಸ್ಥೆಗೆ ಆದಾಯದ ಮೂಲವಾಗಿಯೂ ಬದಲಾಗಬಹುದು.

ಈ ಮೈದಾನವು ಶಾಲೆಯ ಆವರಣದಲ್ಲಿದ್ದರೂ, ಇದರ ಆಡಳಿತಾತ್ಮಕ ನಿರ್ವಹಣೆ ಕುಂಬಳೆ ಗ್ರಾಪಂ ಹಾಗೂ ಬ್ಲಾಕ್ ಪಂಚಾಯಿತಿ ಮಾಡುತ್ತಿದೆ. ಪಂಚಾಯತಿ ಮಟ್ಟದಲ್ಲಿನಿರ್ದಿಷ್ಟ ಬ್ಲೂಪ್ರಿಂಟ್ ಅಥವಾ ಯೋಜನಾಬದ್ಧ ಸಿದ್ಧತೆಗಳು ನಡೆದಿರುವ ಬಗ್ಗೆ ಮಾಹಿತಿಯಿಲ್ಲ.

ಶಾಲಾ ಮಕ್ಕಳ ಕ್ರೀಡಾಭಿವೃದ್ಧಿಗೆ ಮತ್ತು ಊರಿನ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ಈ ಕ್ರೀಡಾಂಗಣದ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಲಿ. ಜನಪ್ರತಿನಿಧಿಗಳ ಭರವಸೆಗಳು ಕಾರ್ಯರೂಪಕ್ಕೆ ಬರಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ.

ಕೋಟ್

ಶಾಲಾ ಕ್ರೀಡಾಂಗಣ ಕೇವಲ ಆಟದ ಮೈದಾನವಲ್ಲ, ಬದಲಿಗೆ ಕ್ರೀಡಾಪಟುಗಳನ್ನು ರೂಪಿಸುವ ಹಾಗೂ ಊರಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಪ್ರಮುಖ ಸ್ಥಳ. ಆದರೆ ಇಂದು ಇದು ಮೂಲಸೌಕರ್ಯಗಳಿಲ್ಲದೆ ದುಸ್ಥಿತಿಯಲ್ಲಿದೆ. ಕಳೆದ ವರ್ಷ ಶಾಸಕ ಎ.ಕೆ.ಎಂ.ಅಶ್ರಫ್ ಅವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೈದಾನ ನವೀಕರಣದ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕಾಮಗಾರಿ ಶುರುವಾಗದಿರುವುದು ಬೇಸರದ ಸಂಗತಿ. ಶಾಲಾ ಮಕ್ಕಳ ಭವಿಷ್ಯ ಹಾಗೂ ಸ್ಥಳೀಯ ಕ್ರೀಡಾಪಟುಗಳ ಪ್ರಗತಿ ಗಮನದಲ್ಲಿಟ್ಟುಕೊಂಡು, ನೀಡಿದ ಭರವಸೆಯಂತೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಈ ಕ್ರೀಡಾಂಗಣದ ನವೀಕರಣ ಕಾರ್ಯವನ್ನು ಆದಷ್ಟು ಬೇಗ ಆರಂಭಿಸಬೇಕು.

-ವಿಜಯಕುಮಾರ್ ಪಾವಲ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಬುನಾದಿ ಶಾಲೆ, ಕುಂಬಳೆ.

ಫೊಟೋ: 20ಕೆಯು 01

ಕುಂಬಳೆ ಜಿಎಸ್ ಬಿಎಸ್ ಕ್ರೀಡಾಂಗಣ.