ನಾನ್ ಸಿನಿಮಾ1

Contributed byshubha.hegde@timesgroup.com|Vijaya Karnataka
be like cricket players in nutritious food importance of balance
ಪೌಷ್ಟಿಕ ಆಹಾರ ಅಂದರೆ ಕ್ರಿಕೆಟ್ ತಂಡದಂತೆ

ಧಿಧಿಧಿಧಿ-----
ಇಂಟ್ರೊ: ಸಮತೋಲಿತ ಆಹಾರ ಮತ್ತು ಸರಿಯಾದ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 7ರವರೆಗೆ ಭಾರತದಾದ್ಯಂತ ರಾಷ್ಟ್ರೀಯ ಪೌಷ್ಟಿಕಾಂಶ ವಾರವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿನಿತ್ಯದ ನಮ್ಮ ಊಟದಲ್ಲಿಪೋಷಕಾಂಶ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.

---

ಲವಲವಿಕೆ ಸುದ್ದಿಲೋಕ

ಸ್ಲಗ್ : ಪೌಷ್ಟಿಕ ಆಹಾರ

---

ಊಟದ ತಟ್ಟೆಯಲ್ಲಿರುವ ಆಹಾರ ಆರೋಗ್ಯಕರವಾಗಿದ್ದರೆ ದೇಹಕ್ಕೂ, ಮನಸ್ಸಿಗೂ ಹಿತ. ಆದರೆ ಆರೋಗ್ಯದ ವಿಷಯದಲ್ಲಿನಿಗದಿತ ಪೌಷ್ಟಿಕ ಮೂಲದ ಆಹಾರವನ್ನು ಸೇವಿಸುವುದರಿಂದ ಪ್ರಯೋಜನವಿಲ್ಲ. ಎಲ್ಲಾಬಗೆಯ ಪೋಷಕಾಂಶ ಒಳಗೊಂಡ ಸಮತೋಲಿತ ಆಹಾರವೇ ಮುಖ್ಯ. ಈ ನಿಟ್ಟಿನಲ್ಲಿಪೌಷ್ಟಿಕಾಂಶ ತಜ್ಞೆ ನಮಾಮಿ ಅಗರ್ವಾಲ್ ಊಟದ ತಟ್ಟೆ ಹೇಗಿರಬೇಕು ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿಹಂಚಿಕೊಂಡಿದ್ದಾರೆ. ಅವರ ಪ್ರಕಾರ, ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾಪೋಷಕಾಂಶಗಳು ಕ್ರಿಕೆಟ್ ಪಂದ್ಯದ ಆಟಗಾರರಂತೆ ಕೆಲಸ ಮಾಡುತ್ತವೆ. ಯಾವುದೇ ಒಂದು ನಿರ್ದಿಷ್ಟ ಆಹಾರ ಗುಂಪನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ ಆರೋಗ್ಯಕ್ಕೆ ಸೂಕ್ತವಲ್ಲ. ದೇಹದ ಸಂಪೂರ್ಣ ಪೋಷಣೆಗೆ ಏನೆಲ್ಲಅಗತ್ಯ ಹಾಗೂ ಅವು ಹೇಗೆ ಕೆಲಸ ಮಾಡುತ್ತವೆ ಎಂಬ ವಿವರ ಇಲ್ಲಿದೆ.:

ಆರಂಭಿಕ ಬ್ಯಾಟರ್ ಗಳು: ಪಂದ್ಯದ ಆರಂಭದಲ್ಲೇ ಬಂದು ರನ್ ಕಲೆಹಾಕುವ ಓಪನಿಂಗ್ ಬ್ಯಾಟರ್ ಗಳಂತೆ ಕಾರ್ಬೋಹೈಡ್ರೇಟ್ ಗಳು ಕಾರ್ಯನಿರ್ವಹಿಸುತ್ತವೆ. ಇವು ನಮ್ಮ ದೇಹಕ್ಕೆ ತಕ್ಷಣದ ಶಕ್ತಿ ಮತ್ತು ಇಂಧನವನ್ನು ಒದಗಿಸುತ್ತವೆ. ದೈನಂದಿನ ಕೆಲಸಗಳನ್ನು ಮಾಡಲು ಮತ್ತು ದೈಹಿಕ ಚಟುವಟಿಕೆಗಳಿಗೆ ಕಾಬ್ಸ…ರ್ ಅತ್ಯಗತ್ಯ.

ಆಲ್ ರೌಂಡರ್ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂನೆರವಾಗುವ ಆಲ್ ರೌಂಡರ್ ನಂತೆ ಪ್ರೊಟೀನ್ ಕೆಲಸ ಮಾಡುತ್ತದೆ. ಇದು ಸ್ನಾಯುಗಳ ಬೆಳವಣಿಗೆ, ಅಂಗಾಂಶಗಳ ದುರಸ್ತಿ ಮತ್ತು ದೇಹದ ಶಕ್ತಿ ಹೆಚ್ಚಿಸಲು ಸಹಕಾರಿ.

ವಿಕೆಟ್ ಕೀಪರ್ : ಸಾಮಾನ್ಯವಾಗಿ ಯಾರ ಗಮನಕ್ಕೂ ಬಾರದೆ ತನ್ನ ಕೆಲಸವನ್ನು ನಿಶ್ಶಬ್ದವಾಗಿ ನಿರ್ವಹಿಸುವ ವಿಕೆಟ್ ಕೀಪರ್ ನಂತೆ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಹೊಟ್ಟೆ ತುಂಬಿರುವಂತೆ ಮಾಡಲು ಸಹಾಯ ಮಾಡುತ್ತದೆ.

ತಂಡದ ಕೋಚ್ : ಮೈದಾನದ ಹೊರಗಿದ್ದು ಇಡೀ ತಂಡವನ್ನು ಮುನ್ನಡೆಸುವ ತರಬೇತುದಾರನಂತೆ ವಿಟಮಿನ್ ಗಳು ಮತ್ತು ಖನಿಜಾಂಶಗಳು ಕಾರ್ಯನಿರ್ವಹಿಸುತ್ತವೆ. ಇವು ನಮಗೆ ಪ್ರತ್ಯಕ್ಷವಾಗಿ ಕಾಣಿಸದಿದ್ದರೂ, ರೋಗನಿರೋಧಕ ಶಕ್ತಿ ಮತ್ತು ದೇಹದ ಒಟ್ಟಾರೆ ಆಂತರಿಕ ಕ್ರಿಯೆಗಳನ್ನು ನಿಯಂತ್ರಿಸಲು ಇವುಗಳ ಅಗತ್ಯವಿದೆ.

ತಂಡದ ಕ್ಯಾಪ್ಟನ್ : ತಂಡಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ನಾಯಕನಂತೆ ಆರೋಗ್ಯಕರ ಕೊಬ್ಬುಗಳು ಮುಖ್ಯ ಪಾತ್ರ ವಹಿಸುತ್ತವೆ. ಇವು ಮಿದುಳಿನ ಕಾರ್ಯನಿರ್ವಹಣೆ, ಹೃದಯದ ಆರೋಗ್ಯ ಮತ್ತು ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡಲು ನೆರವಾಗುತ್ತವೆ.

ಒಟ್ಟಾರೆ ಯಾವುದೇ ಒಂದು ಕ್ರಿಕೆಟ್ ತಂಡವು ಕೇವಲ ಒಬ್ಬನೇ ಆಟಗಾರನಿಂದ ಗೆಲ್ಲಲು ಸಾಧ್ಯವಿಲ್ಲ. ಅದೇ ರೀತಿ, ತೂಕ ಇಳಿಸುವ ನೆಪದಲ್ಲಿಕಾಬ್ಸ…ರ್ ಅಥವಾ ಕೊಬ್ಬನ್ನು ಸಂಪೂರ್ಣವಾಗಿ ತ್ಯಜಿಸುವುದು ಸರಿಯಲ್ಲ. ನಿಮ್ಮ ಊಟದ ತಟ್ಟೆಯಲ್ಲಿಪ್ರತಿಯೊಂದು ಪೋಷಕಾಂಶಕ್ಕೂ ಸೂಕ್ತ ಜಾಗ ನೀಡಿದಾಗ ಮಾತ್ರ ಪರಿಪೂರ್ಣ ಆರೋಗ್ಯ ಸಾಧ್ಯ.