ವಿಕ ಸುದ್ದಿಲೋಕ ವಿರಾಜಪೇಟೆಸೆ. 26 ರಿಂದ 28 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿನಡೆಯಲಿರುವ ಡಿವೈಎಫ್ ಐನ 13ನೇ ರಾಜ್ಯ ಸಮ್ಮೇಳನದ ಭಾಗವಾಗಿ ಡಿವೈಎಫ್ ಐನ ಕೊಡಗು ಜಿಲ್ಲಾಸಮ್ಮೇಳನವು ಸಿದ್ದಾಪುರದ ಗುಯ್ಯ ಅಗಸ್ತೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿಯಶಸ್ವಿಯಾಗಿ ನಡೆಯಿತು.
ಡಿವೈಎಫ್ ಐ ಮಾಜಿ ಜಿಲ್ಲಾಅಧ್ಯಕ್ಷ ಭಾಗ್ಯ ಚಂಗಪ್ಪ ಸಂಘಟನೆಯ ಧ್ವಜಾರೋಹಣ ನೆರವೇರಿಸಿದರು. ಡಿವೈಎಫ್ ಐ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸಂತೋಷ್ ಬಜಾಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,‘‘ಕೇಂದ್ರ ಸರಕಾರದ ಯುವ ವಿರೋಧಿ ನೀತಿಗಳು ಮತ್ತು ದೇಶದಲ್ಲಿಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಯುವ ಜನರು ಒಗ್ಗೂಡಿ ಹೋರಾಡಬೇಕಾಗಿದೆ. ಸರಕಾರಿ ಕಚೇರಿಗಳಲ್ಲಿಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡದೆ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಯುವಕರನ್ನು ವಂಚಿಸಲಾಗುತ್ತಿದೆ. ನಿರುದ್ಯೋಗ ಸೃಷ್ಟಿ ಮಾಡುವ ಸರಕಾರದ ಜನವಿರೋಧಿ ಧೋರಣೆಯನ್ನು ಪ್ರಶ್ನಿಸಿ ಪ್ರಬಲ ಹೋರಾಟ ಕಟ್ಟಬೇಕು ಹಾಗೂ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ಯುವಜನತೆ ಮುಂಚೂಣಿಯಲ್ಲಿನಿಲ್ಲಬೇಕು,’’ಎಂದು ಸಲಹೆ ನೀಡಿದರು.
ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಡಿವೈಎಫ್ ಐ ವಯನಾಡು ಜಿಲ್ಲಾಅಧ್ಯಕ್ಷ ಹಾಗೂ ಜಿಪಂ ಸದಸ್ಯ ಜಿತಿನ್ ಕೋಮತ್ ಮಾತನಾಡಿ, ‘‘23ನೇ ವಯಸ್ಸಿನಲ್ಲಿಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಧೀರ ಯೋಧ ಭಗತ್ ಸಿಂಗ್ ಅವರ ಕನಸಿನ ಭಾರತವನ್ನು ಕಟ್ಟಲು ಯುವಜನರು ಬೀದಿಗಿಳಿದು ಹೋರಾಡಬೇಕಿದೆ. ಯುವಜನರನ್ನು ವಂಚಿಸುವ ಸರಕಾರಗಳ ವಿರುದ್ಧ ನಿರಂತರ ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಎಲ್ಲರಿಗೂ ಉದ್ಯೋಗ ಹಾಗೂ ಜಾತಿ-ಧರ್ಮ ರಹಿತ ಸೌಹಾರ್ದ ಭಾರತವನ್ನು ಕಟ್ಟಲು ಯುವಜನತೆ ಒಂದಾಗಬೇಕಿದೆ. ಜನರನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವ ಕೋಮುವಾದಿ ಶಕ್ತಿಗಳ ವಿರುದ್ಧ ಯುವಜನರು ಜಾಗೃತರಾಗಿರಬೇಕು’’ ಎಂದು ಹೇಳಿದರು.
ದೇಶದಲ್ಲಿಯುವಜನರು ಎದುರಿಸುತ್ತಿರುವ ತೀವ್ರ ಸ್ವರೂಪದ ನಿರುದ್ಯೋಗದ ಸಮಸ್ಯೆಗಳು ಹಾಗೂ ಯುವಜನರನ್ನು ವಂಚಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಡಿವೈಎಫ್ ಐ ಮುಂಚೂಣಿಯಲ್ಲಿನಿಂತು ಹೋರಾಟ ನಡೆಸಬೇಕಾದ ಅಗತ್ಯತೆ ಕುರಿತು ಡಿವೈಎಫ್ ಐ ಮಾಜಿ ಜಿಲ್ಲಾಮುಖಂಡ ಪಿ.ಆರ್ . ಭರತ್ ಮಾತನಾಡಿದರು. ಮಾಜಿ ಜಿಲ್ಲಾಉಪಾಧ್ಯಕ್ಷ ಎನ್ .ಕೆ. ಅನಿಲ್ , ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್ . ಶಾಜಿ ರಮೇಶ್ ಇದ್ದರು.
ನೂತನ ಜಿಲ್ಲಾಸಮಿತಿ ಆಯ್ಕೆ: ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿಸಂಘಟನೆಯನ್ನು ಮುನ್ನಡೆಸಲು 13 ಸದಸ್ಯರನ್ನು ಒಳಗೊಂಡ ನೂತನ ಜಿಲ್ಲಾಸಮಿತಿಯನ್ನು ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜ್ಯೋತಿ ಕೃಷ್ಣ (ನೆಲ್ಲಿಹುದಿಕೇರಿ), ಕಾರ್ಯದರ್ಶಿ ಸಾಧಿಕ್ ಎ.ಎಚ್ . (ಕುಂಜಿಲ), ಖಜಾಂಚಿ ರಿಯಾಜ್ ಪಿ.ಎಚ್ . (ಗುಯ್ಯ ಸಿದ್ದಾಪುರ) ಆಯ್ಕೆಗೊಂಡರು. ಬಾಗೇಪಲ್ಲಿಯಲ್ಲಿನಡೆಯಲಿರುವ 13ನೇ ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ 6 ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮುಂಬರುವ ದಿನಗಳಲ್ಲಿಕೊಡಗು ಜಿಲ್ಲೆಯಲ್ಲಿಯುವಜನರ ಹಕ್ಕುಗಳಿಗಾಗಿ, ಉದ್ಯೋಗಾವಕಾಶಗಳಿಗಾಗಿ ಹಾಗೂ ಯುವಜನರು ಎದುರಿಸುತ್ತಿರುವ ಎಲ್ಲಾಸಮಸ್ಯೆಗಳ ವಿರುದ್ಧ ಡಿವೈಎಫ್ ಐ ನೇತೃತ್ವದಲ್ಲಿತೀವ್ರ ಹೋರಾಟಗಳನ್ನು ರೂಪಿಸುವುದಾಗಿ ಆಯ್ಕೆಯಾದ ಪದಾಧಿಕಾರಿಗಳು ತಿಳಿಸಿದರು.
ಪೊಟೊ:ಎಂಡಿಕೆ22ವಿಪಿಟಿ03ಎ:
ಡಿವೈಎಫ್ ಐನ ಕೊಡಗು ಜಿಲ್ಲಾಸಮ್ಮೇಳನವು ಸಿದ್ದಾಪುರದ ಗುಯ್ಯ ಅಗಸ್ತೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿನಡೆಯಿತು.