ಕಸಾಪುರ ಗ್ರಾಮದ ದಲಿತ ಯುವಕನ ಕೊಲೆ ಖಂಡಿಸಿ,ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈ ಕರುನಾಡು ರಕ್ಷಣಾ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು, ಪಿಎಸ್ ಐ ರಂಗನಾಥ ಅವರ ಮೂಲಕ ಎಸ್ ಪಿ, ಉಪ ವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಸೆ. 20 ರಂದು ಮಧುಗಿರಿ ತಾಲೂಕಿನ ಕಸಾಪುರದಲ್ಲಿಗಣೇಶ ವಿಸರ್ಜನೆ ವೇಳೆ ದಲಿತ ಯುವಕನ ಕೊಲೆ ಮಾಡಿದ್ದು ಖಂಡಿನೀಯ. ಈ ದಲಿತ ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನಾಕಾರರರು ಆಗ್ರಹಿಸಿದರು.
ಈ ಸಂದರ್ಭದಲ್ಲಿಜೈ ಕರುನಾಡು ರಕ್ಷಣಾ ಸಂಘದ ತಾಲೂಕು ಅಧ್ಯಕ್ಷ ನಿಂಗರಾಜ ಹರಿಜನ, ಆನಂದ ವಡಕಮ್ಮನವರ, ಬಸವರಾಜ ಮೈಲಮ್ಮನವರ, ಶಂಕರ ಮರಗಪ್ಪನವರ, ಲಕ್ಷತ್ರ್ಮಣ ಹುಲ್ಲಮ್ಮನವರ, ನವೀನ ಬಂಡಿವಡ್ಡರ, ನವೀನ ಹರಿಜನ, ಶಾಂತು ಕೆಂಚಣ್ಣನವರ, ಸುರೇಶ ಹಾವನೂರ, ನಾಗರಾಜ ಹರಿಜನ, ಶಿವು ಡಾವಣಗೇರಿ, ಪ್ರಶಾಂತ ಮುಗಳಿ, ನೀಲಪ್ಪ ಮರಗಪ್ಪನವರ, ಆಗಶ ಮುನಿಯಪ್ಪನವರ, ಮಂಜು ಲಕ್ಷೆತ್ರ್ಮೕಶ್ವರ, ಸುಂದರ, ಗೋಪಾಲ ಭಜಂತ್ರಿ, ಸೋಮಪ್ಪ ಹರಿಜನ, ನಿಂಗಪ್ಪ ಹರಿಜನ ಇತರರು ಇದ್ದರು.
ಫೋಟೋ ಫೈಲ್ ನೇಮ್ 22ಎಸ್ ವಿಆರ್ 1
ಮಧುಗಿರಿ ತಾಲೂಕಿನ ಕಸಾಪುರದ ದಲಿತ ಯುವಕನ ಕೊಲೆ ಖಂಡಿಸಿ ಸವಣೂರಲ್ಲಿಜೈ ಕರುನಾಡು ರಕ್ಷಣಾ ಸಂಘದಿಂದ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.