ತಾಲೂಕಿನ ಮರ್ಕುಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗುಡುಗನಹಳ್ಳಿ ಮಂಜುನಾಥ್ ಅವರನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಪ್ರಧಾನ ಕಾರ್ಯದರ್ಶಿ ಕೊಡಗು ಚೇತನ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.ಮಂಜುನಾಥ್ ರವರು ಶಿಕ್ಷಕರ ಸಂಘದಲ್ಲಿವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಶಿಕ್ಷಕರ ಸಂಘದ ತಾಲೂಕು ಸಹಕಾರ್ಯದರ್ಶಿಯಾಗಿ,ಶಿಕ್ಷಕರ ಸಂಘದ ತಾಲೂಕು ಕೋಶಾಧ್ಯಕ್ಷರಾಗಿ, ಹಾಸನ ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಹಾಸನ ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಹಾಗೂ ಶಿಕ್ಷಕರ ಸಂಘದ ಜಿಲ್ಲಾಉಪಾಧ್ಯಕ್ಷರಾಗಿ ಹಲವು ಹುದ್ದೆಗಳಲ್ಲಿಸೇವೆ ಸಲ್ಲಿಸಿರುತ್ತಾರೆ. ಆದ್ದರಿಂದ ಸಂಘಟನೆಯಲ್ಲಿನ ಇವರ ಅನುಭವ ಹಾಗೂ ಕ್ರಿಯಾಶೀಲತೆಯನ್ನು ಪರಿಗಣಿಸಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ತಾಲೂಕಿನ ಹಾಗೂ ಜಿಲ್ಲೆಯ ಶಿಕ್ಷಕರು ಇವರಿಗೆ ಶುಭಾಶಯಗಳನ್ನು ಕೋರಿರುತ್ತಾರೆ.