ಚಿಂಚೋಳಿ ಪಟ್ಟಣದಲ್ಲಿಜೆಡಿಎಸ್ ತಾಲೂಕು ಅಧ್ಯಕ್ಷ ರವಿಶಂಕರ ರೆಡ್ಡಿ ಮುತ್ತಂಗಿ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಹಣಮಂತ ಪೂಜಾರಿ ಇದ್ದರು.* ಸಿಮೆಂಟ್ ಕಂಪನಿ ವಿರುದ್ಧ ಜೆಡಿಎಸ್ ಅಧ್ಯಕ್ಷ ರವಿಶಂಕರ್ ರೆಡ್ಡಿ ಆರೋಪ
ಆತಂಕದಲ್ಲಿಚಟ್ಟಿನಾಡ ವ್ಯಾಪ್ತಿಯ ಜನರ ಬದುಕು
ವಿಕ ಸುದ್ದಿಲೋಕ ಚಿಂಚೋಳಿ
ತಾಲೂಕಿನ ಚಟ್ಟಿನಾಡ ಸಿಮೆಂಟ್ ಕಂಪನಿಯಿಂದ ನಡೆಯುತ್ತಿರುವ ಹೈ ಮೈನಿಂಗ್ ಬ್ಲಾಸ್ಟಿಂಗ್ ನಿಂದ ಕಲ್ಲೂರ ರೋಡ್ ಹಾಗೂ ಸುತ್ತಲಿನ ಗ್ರಾಮಗಳ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು, ಸಂತ್ರಸ್ತರ ಪರ ಧ್ವನಿ ಎತ್ತಬೇಕಾದ ಸಂಸದರು, ಶಾಸಕರು ನಿರ್ಲಕ್ಷ್ಯಧೋರಣೆ ತಾಳಿದ್ದಾರೆ ಎಂದು ಚಿಂಚೋಳಿ ಜೆಡಿಎಸ್ ಅಧ್ಯಕ್ಷ ರವಿಶಂಕರ್ ರೆಡ್ಡಿ ಆರೋಪಿಸಿದರು.
ಪಟ್ಟಣದಲ್ಲಿಕರೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ತಾಲೂಕಿನ ಕಲ್ಲೂರ ರೋಡ್ ಗ್ರಾಮದ ಸಮೀಪ ಚೆಟ್ಟಿನಾಡ ಸಿಮೆಂಟ್ ಕಂಪನಿ ಪ್ರದೇಶಕ್ಕೆ ಹೊಂದಿಕೊಂಡಂತೆ ತೆಲಂಗಾಣದ ಸಂಗಮ ಕೆ ಎಂಬ ಸಣ್ಣ ಗ್ರಾಮವಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ಸಾಮಗ್ರಿಗಳು ಹಾನಿಗೊಳಗಾಗಿದ್ದವು. ಆಗ ತೆಲಂಗಾಣದ ವಿಕರಾಬಾದಿನ ಸಂಸದರು ಹಾಗೂ ತಾಂಡೂರಿನ ಶಾಸಕರು ಬೇರೆ ಬೇರೆ ಪಕ್ಷಕ್ಕೆ ಸೇರಿದವರಾಗಿದ್ದರೂ ಜನರ ಪರವಾಗಿ ಧ್ವನಿ ಎತ್ತಿದ್ದರು. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ಸಿಮೆಂಟ್ ಸಾಗಣೆ ಮಾಡುವ ರೈಲು ಮಾರ್ಗ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಂಪನಿಗೆ ಎಚ್ಚರಿಕೆ ನೀಡಿದ್ದರು. ಪರಿಣಾಮವಾಗಿ ಕೆಲ ದಿನಗಳ ಹಿಂದೆ ಮೊದಲ ಕಂತಿನ 30 ಲಕ್ಷ ರೂ. ಪರಿಹಾರವನ್ನು ತೆಲಂಗಾಣ-ವಿಕರಾಬಾದ ಸಂಸದರು, ತಾಂಡೂರ್ ಶಾಸಕರ ನೇತೃತ್ವದಲ್ಲಿಸಂಕಷ್ಟಕ್ಕೊಳಗಾದ ಜನರ ಪರ ನಿಂತು ಕಂಪನಿಯಿಂದ ಪರಿಹಾರ ಕೊಡಿಸುವಲ್ಲಿಮುಂದಾಗಿದ್ದಾರೆ.
ಆದರೆ ಬೀದರ್ , ಕಲಬುರಗಿ ಸಂಸದರು ಹಾಗೂ ಚಿಂಚೋಳಿ, ಸೇಡಂ ಶಾಸಕರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಮೌನ ವಹಿಸಿದ್ದಾರೆ. ಕಂಪನಿ ವಿರುದ್ಧ ಜನರು ಧ್ವನಿ ಎತ್ತಿದಾಗಲೂ ನಮ್ಮ ಭಾಗದ ರಾಜಕೀಯ ಮುಖಂಡರು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಸಿಮೆಂಟ್ ಕಂಪನಿ ಸುತ್ತಮುತ್ತಲಿನ ಗ್ರಾಮಗಳಲ್ಲಿನಡೆಯುತ್ತಿರುವ ಹೈ ಬ್ಲಾಸ್ಟಿಂಗ್ ನಿಂದ ಹಲವು ಮನೆಗಳಲ್ಲಿಬಿರುಕುಗಳು ಕಾಣಿಸಿಕೊಂಡಿವೆ. ಜನರು ಆತಂಕದಲ್ಲಿಬದುಕುವಂತಾಗಿದೆ. ಹೀಗಾಗಿ ಸಿಮೆಂಟ್ ಕಂಪನಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವೈಜ್ಞಾನಿಕ ಹಾಗೂ ಅಧಿಕಾರಿಗಳ ಮಟ್ಟದಲ್ಲಿಪರಿಶೀಲನೆ ನಡೆಸಿ, ನೈಜ ಸ್ಥಿತಿಯನ್ನು ಅರಿಯಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು.
ಸಂಸದರಾದ ಸಾಗರ ಖಂಡ್ರೆ, ರಾಧಾಕೃಷ್ಣ ದೊಡ್ಡಮನಿ, ಶಾಸಕ ಡಾ.ಅವಿನಾಶ ಜಾಧವ ಹಾಗೂ ಸಚಿವ ಡಾ.ಶರಣಪ್ರಕಾಶ ಪಾಟೀಲರು ಕೂಡಲೇ ಕಂಪನಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿ, ಸಂತ್ರಸ್ತರ ಪರವಾಗಿ ನಿಲ್ಲಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿಹಣಮಂತ ಪೂಜಾರಿ, ಮಂಜೂರ ಅಹ್ಮೆದ, ಖದೀರ್ , ಸೋಹೇಲ…, ಫರ್ದೀನ್ , ರಹೆಮಾನ, ನಾವಜ್ ಇದ್ದರು.