ಮಂಗಳೂರು: ಇತ್ತೀಚೆಗೆ ರೀಟಾ ಆಂಗ್ಲಮಾಧ್ಯಮ ಶಾಲೆ ವಿಟ್ಲದಲ್ಲಿಶಿಕ್ಷಣ ಇಲಾಖೆ ಸಹಯೋಗದಲ್ಲಿಆಯೋಜನೆಗೊಂಡ ದಕ್ಷಿಣ ಕನ್ನಡ ಜಿಲ್ಲಾಮಟ್ಟದ 17 ರ ವಯೋಮಿತಿಯ ವೈಚ್ ಲಿಫ್ಟಿಂಗ್ ಸ್ಪರ್ಧೆಯಲ್ಲಿಅತ್ತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು, ಸ್ಪರ್ಧಾಕೂಟದ ಅತ್ಯುತ್ತಮ ವೈಟ್ ಲಿಫ್ಟಿರ್ ಪ್ರಶಸ್ತಿಯನ್ನು ಮಂಗಳೂರಿನ ಸಂತ ಮೆರೀಸ್ ಹೈಸ್ಕೂಲಿನ ವಿದ್ಯಾರ್ಥಿನಿ ಶ್ರಾವಣಿ ಪಡೆದುಕೊಂಡಿದ್ದಾರೆ. ಕಂಕನಾಡಿಯ ಅಶೋಕ್ ಮತ್ತು ಪವಿತ್ರ ದಂಪತಿ ಪುತ್ರಿಯಾಗಿರುವ ಅವರು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಪುರಸ್ಕೃತ ಪುಷ್ಪರಾಜ ಹೆಗ್ಡೆ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ಚಿತ್ರ: ಶ್ರಾವಣಿ