ಮರಳಿ ವೈಭವದತ್ತ ಲೋಕಪಾವನಿ ಮಹಿಳಾ ಬ್ಯಾಂಕ್ : ಸುಜಾತ ಕೃಷ್ಣ

Contributed bynaveena.channappa@timesofindia.com|Vijaya Karnataka
Vijay Karnataka
ವಿಕ ಸುದ್ದಿಲೋಕ ಮಂಡ್ಯ

ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯದ ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ಎಲ್ಲರ ಸಹಕಾರದಿಂದ ಮತ್ತೆ ಹಳೆಯ ವೈಭವದತ್ತ ಸಾಗುತ್ತಿದೆ ಎಂದು ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸಿ.ಜೆ.ಸುಜಾತ ಕೃಷ್ಣ ಹರ್ಷ ವ್ಯಕ್ತಪಡಿಸಿದರು.
ನಗರ ವಿಠಲ ಸಮುದಾಯ ಭವನದಲ್ಲಿಭಾನುವಾರ ನಡೆದ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕಿನ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ಸಹಕಾರ ಬ್ಯಾಂಕ್ ಅಭಿವೃದ್ಧಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಬ್ಯಾಂಕ್ ನ ಶ್ರೇಯೋಭಿವೃದ್ಧಿಗೆ ಎಲ್ಲರೂ ಒಗ್ಗೂಡೋಣ,’’ ಎಂದು ಹೇಳಿದರು.

‘‘ಕೃಷಿ ಸಾಲಮನ್ನಾ ವಿಷಯದಲ್ಲಿಎದುರಾಗಿದ್ದ ತೊಡಕಿನಿಂದಾಗಿ ರಿಸವ್ ರ್ ಬ್ಯಾಂಕ್ ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ನ ವಹಿವಾಟಿಗೆ ಷರತ್ತುಬದ್ಧ ತಡೆ ನೀಡಿತ್ತು. ಇದರಿಂದ ಬ್ಯಾಂಕ್ ನಲ್ಲಿಠೆವಣಿ ಇರಿಸಿದ್ದ ಗ್ರಾಹಕರು ಕಷ್ಟಕ್ಕೆ ಸಿಲುಕಿತ್ತು. ಪ್ರಸ್ತುತ ಆಡಳಿತ ಮಂಡಳಿ ಬ್ಯಾಂಕ್ ನ ಚೇತರಿಕೆಗೆ ಅವಿರತವಾಗಿ ಶ್ರಮಿಸುತ್ತಿದ್ದು, ಬ್ಯಾಂಕ್ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಷೇರುರೂಪದಲ್ಲಿಹಣ ಸಂಗ್ರಹಿಸಿ ಬ್ಯಾಂಕ್ ನ ವಹಿವಾಟಿಗೆ ರಿಸವ್ ರ್ ಬ್ಯಾಂಕ್ ವಿದಿಸಿದ್ದ ತಡೆ ನಿವಾರಿಸುವಲ್ಲಿಯಶಸ್ವಿಯಾಗಿದ್ದೇವೆ. ಸದ್ಯದಲ್ಲೇ ರಿಸರ್ವ ಬ್ಯಾಂಕ್ ಬ್ಯಾಂಕ್ ನ ವಹಿವಾಟಿಗೆ ಹಸಿರು ನಿಶಾನೆ ತೊರಲಿದೆ,’’ ಎಂದು ತಿಳಿಸಿದರು.

‘‘ಗ್ರಾಹಕರಿಗೆ ಕೊಟ್ಟ ಮಾತಿನಂತೆ ಬ್ಯಾಂಕ್ ಉಳಿಸಿಕೊಳ್ಳಲು ಆಡಳಿತ ಮಂಡಳಿ ಅವಿರತ ಶ್ರಮಿಸಿದ್ದೇವೆ. ಇದರಿಂದಾಗಿ ಜಿಲ್ಲೆಯ ಏಕೈಕ ಲೊಕಪಾವನಿ ಮಹಿಳಾ ಬ್ಯಾಂಕ್ ನ್ನು ಮಂಡ್ಯದಲ್ಲಿಉಳಿಸಿಕ್ಕೊಳ್ಳಲು ಸಾಧ್ಯವಾಗಿದೆ. ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳುವ ವಿಶ್ವಾಸವಿದೆ. ಬ್ಯಾಂಕ್ ನಲ್ಲಿಠೇವಣಿ ಇರಿಸಿರುವ ಎಲ್ಲಾಗ್ರಾಹಕರ ಹಣ ಸುಭದ್ರವಾಗಿದೆ. ಯಾರು ಆತಂಕಗೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿಷೇರು ಹಾಗು ಠೇವಣಿ ವ್ಯವಹಾರ ಮುಂದವರಿಸುವಂತೆ ಮಾಡುತ್ತೇವೆ,’’ ಎಂದರು.

ಸರ್ವ ಸದಸ್ಯರ ಸಭೆಯಲ್ಲಿನಿರ್ದೇಶಕರಾದ ಜ್ಯೋತಿ ಲಕ್ಷಿ ್ಮ, ಎಂ.ಎನ್ .ನವಶ್ರೀ, ಸಾವಿತ್ರಿ, ಶ್ವೇತಾ, ಜ್ಯೋತಿಲಕ್ಷ ್ಮಮ್ಮ, ಎಚ್ .ಡಿ.ರತ್ನ, ಎಸ್ .ಆರ್ .ಕಲ್ಪನ, ಬಿ.ರತ್ನಮ್ಮ, ಕೆ.ಎನ್ .ಪುಷ್ಪರಾಮೇಗೌಡ, ಸಿ.ಕೆ.ಮೀನಾಕ್ಷಿ, ಎಂ.ಕೆ.ಪೂರ್ಣಿಮಾ, ಚಂದ್ರಕಲಾ, ಎನ್ .ಲತಾ, ಅನುರಾಧ, ಎನ್ .ಎ. ರೇಣುಕಾ, ಕೆ.ಹೇಮಲತಾ, ಎಚ್ .ಕೆ.ರೋಚನ, ವೃತ್ತಿಪರ ನಿರ್ದೇಶಕರಾದ ಮನೋಹರ್ ಮಸ್ಕಿ, ವೈ.ಸಿ.ಪೂರ್ಣಿಮ ಹಾಗೂ ಪ್ರಭಾರ ಸಿಇಒ ಮುಕುಂದ್ ಭಾಗವಹಿಸಿದ್ದರು.