26 ರಿಂದ ರೆಡಿಯನ್ಸ್ ವಸ್ತು ಪ್ರದರ್ಶನ, ಮಾರಾಟ ಮೇಳ

Contributed byVIJAYKUMAR P|Vijaya Karnataka
radiance exhibition and sale fair starting from 26th
26 ರಿಂದ ರೆಡಿಯನ್ಸ್ ವಸ್ತು ಪ್ರದರ್ಶನ , ಮಾರಾಟ ಮೇಳ

ವಿಕ ಸುದ್ದಿಲೋಕ ಹುಬ್ಬಳ್ಳಿ
ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಸೆ.26 ಮತ್ತು 27 ರಂದು ಅಮರ 7.0 ರೇಡಿಯನ್ಸ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಶೈಲಜಾ ಬಗಾಡೆ ತಿಳಿಸಿದರು.

ನಗರದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಲೈಫಸ್ಟೈಲ…, ಫ್ಯಾಷನ್ , ಆಭರಣ, ಮನೆಯಲ್ಲಿತಯಾರಿಸಿದ ವಸ್ತುಗಳು, ಬಟ್ಟೆಗಳು ಹಾಗೂ ಆಹಾರ ಖಾದ್ಯಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. 70ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದು, 2 ದಿನಗಳ ಕಾಲ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯಲಿದೆ. ಮಕ್ಕಳಿಗಾಗಿ ವರ್ಕಶಾಪ್ ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.26 ರಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉದ್ಯಮಿ ಡಾ.ಸಿಎಚ್ ವಿಎಸ್ ವಿ ಪ್ರಸಾದ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರದರ್ಶನವನ್ನು ಉದ್ಘಾಟಿಸುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿದೀಪಾಲಿ ಮುಧೋಳ, ನವಿತಾ ಮೋದಿ, ಜ್ಯೋತಿ ವೆಂಕಟೇಶ, ದೀಪಾಲಿ ಮೆಹರವಾಡೆ, ಕಾವೇರಿ ಬಹೇತಿ ಇತರರಿದ್ದರು.